ಬೆಳ್ತಂಗಡಿ

ಕರಾಯ ಬ್ರಹ್ಮಕಲಶ ಇಂದಿನ‌ (ಏ.19) ಕಾರ್ಯಕ್ರಮಗಳು

ಬೆಳ್ತಂಗಡಿ : Tulu Times l ಬೆಳ್ತಂಗಡಿ ತಾಲೂಕಿನ ಕರಾಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಈ ದಿನದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ ಹೀಗಿದೆ ದಿನಾಂಕ 19, ಆದಿತ್ಯವಾರ ಬೆಳಗ್ಗೆ ಗಂಟೆ 5:30 ರಿಂದ ಉಷಃಪೂಜೆ, ಅಂಕುರಪೂಜೆ, ಮಹಾಗಣಪತಿ ಹೋಮ, ಮಂಟಪ ಸಂಸ್ಕಾರ, ಅಗ್ನಿಜನನ, ಕುಂಭೇಶ ಕರ್ಕರೀ ಪೂಜೆ, ಬ್ರಹ್ಮಕಲಶ ಪೂಜೆ, ಪರಿಕಲಶ ಪೂಜೆ, ಶಯ್ಯಾಪೂಜೆ, ಮಂಡಲ ಪೂಜೆ ಹಾಗೂ ಮಧ್ಯಾಹ್ನ ಗಂಟೆ 12:30 ರಿಂದ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.

ಸಂಜೆ ಗಂಟೆ 5.30ರಿಂದ : ದೀಪಾರಾಧನೆ, ಮಹಾಬಲಿಪೀಠಾಧಿವಾಸ, ನೂತನ ವಾಹನ ಬಿಂಬ ಧ್ಯಾನಾಧಿವಾಸ ಕ್ರಿಯೆ, ಅಧಿವಾಸ ಹೋಮ, ನೂತನ ಧ್ವಜಸ್ತಂಭ ಅಧಿವಾಸ ಕ್ರಿಯೆ, ನೂತನ ಬ್ರಹ್ಮರಥ ಪರಿಗ್ರಹ, ರಥ ಶುದ್ದಿ, ಮಹಾಪೂಜೆ. ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಲಿದೆ.

ರಾತ್ರಿ ಗಂಟೆ 7-00 ರಿಂದ 8-30ರ ತನಕ ನಡೆಯಲಿರುವ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉದ್ಯಮಿ, ತುಳು ಸಂಘದ ಅಧ್ಯಕ್ಷರಾಗಿರುವ ಶಶಿಧರ ಶೆಟ್ಟಿ ಬರೋಡ ನವಶಕ್ತಿ ನಡೆಸಿಕೊಡಲಿದ್ದು, ಧಾರ್ಮಿಕ ಉಪನ್ಯಾಸವನ್ನು ಪ್ರದೀಪ್ ನಾವೂರು ನಡೆಸಿಕೊಡಲಿದ್ದಾರೆ. ಹಲವು ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಈ ಸಂದರ್ಭದಲ್ಲಿ ಗೌರವಿಸಲಾಗುತ್ತದೆ.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ;

ಬೆಳಗ್ಗೆ 10-00 ರಿಂದ ಉಪ್ಪಿನಂಗಡಿ ಸ್ಥಳೀಯ ಕಲಾವಿದರಿಂದ ಶ್ವೇತ ಕುಮಾರ ಚರಿತ್ರೆ ಹಾಗೂ ಮಧ್ಯಾಹ್ನ 2-00 ರಿಂದ 4-00ರ ತನಕ ಸ್ವರತರಂಗ ಉರಿಮಜಲು ಇವರಿಂದ

ಭಕ್ತಿ ಭಾವ-ಗಾನ ವೈಭವ, ಸಂಜೆ 4-30 ರಿಂದ 6-30ರ ತನಕ ಕುಮಾರಿ ಕೃತಿ ಆರ್ ಐತಾಳ್ ಬೆಂಗಳೂರು ಇವರಿಂದ ಕೂಚಿಪುಡಿ ಹಾಗೂ ವಿರಾಜಪೇಟೆ ಶ್ರೀಕೃಷ್ಣ ಕೇಕುಣ್ಣಾಯ ಇವರಿಂದ ಭರತನಾಟ್ಯ, ರಾತ್ರಿ 9.00ರಿಂದ ಉಬಾರ್ ಗಯಾಪದ ಕಲಾವಿದರು ಅಭಿನಯಿಸುವ ‘ನಾಗಮಾಣಿಕ್ಯ’. ಈ ಎಲ್ಲಾ ಕಾರ್ಯಕ್ರಮಗಳು ತುಳುಟೈಮ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ನೇರಪ್ರಸಾರವಾಗುತ್ತದೆ.

Karaya Brahmakalash Today’s (Apr.19) Programs – ತುಳುಟೈಮ್ಸ್

ಇದನ್ನೂ ಓದಿ :ಬೇಸಿಗೆಯಲ್ಲಿ ವಿದ್ಯುತ್ ಬಿಲ್ ಶಾಕ್: ಯೂನಿಟ್‌ಗೆ 56 ಪೈಸೆ ಹೆಚ್ಚಳ

=====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ; https://www.youtube.com/live/kBrYmlwszQg?si=Y-unEEVaMTxlQEhW

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 13

You cannot copy content of this page