ಆಹಾರ : Tulu Times l ಸೂಪರ್ ಮಾರ್ಕೆಟ್‌ಗಳಲ್ಲಿ ನೀವು ಖರೀದಿಸುವ 100% ನ್ಯಾಚುರಲ್ ಅಥವಾ ನೋ ಆ್ಯಡೆಡ್ ಶುಗರ್ ಎಂದು ಬರೆದಿರುವ ಹಣ್ಣಿನ ರಸದ ಪ್ಯಾಕೆಟ್‌ಗಳು ನಿಜವಾಗಿಯೂ ಆರೋಗ್ಯಕರವೇ? ಖಂಡಿತ ಇಲ್ಲ ಎನ್ನುತ್ತಾರೆ ತಜ್ಞರು. ಮುಂಭಾಗದಲ್ಲಿ ಸಕ್ಕರೆ ಇಲ್ಲ ಎಂದು ದಪ್ಪ ಅಕ್ಷರಗಳಲ್ಲಿ ಜಾಹೀರಾತು ಮಾಡುವ ಕಂಪನಿಗಳು, ಹಿಂಭಾಗದ ಪದಾರ್ಥಗಳ ಪಟ್ಟಿಯಲ್ಲಿ ಕಬ್ಬಿನ ಹಾಲು ಅಥವಾ ಹೆಚ್ಚಿನ ಸಕ್ಕರೆ ಅಂಶವನ್ನು ಅಡಗಿಸಿಡುತ್ತಿರುವುದು ಬೆಳಕಿಗೆ ಬಂದಿದೆ.
ಗ್ರಾಹಕರ ದಾರಿ ತಪ್ಪಿಸುವ ತಂತ್ರ:
ಅನೇಕ ಗ್ರಾಹಕರು ತಮ್ಮ ಮಕ್ಕಳಿಗೆ ಆರೋಗ್ಯಕರ ಆಯ್ಕೆ ಎಂದು ಭಾವಿಸಿ ಇಂತಹ ಪಾನೀಯಗಳನ್ನು ಖರೀದಿಸುತ್ತಾರೆ. ಆದರೆ, ಬಾಕ್ಸ್‌ನ ಹಿಂಭಾಗದಲ್ಲಿ ಸಣ್ಣ ಅಕ್ಷರಗಳಲ್ಲಿ ‘49% ಕಬ್ಬಿನ ಹಾಲು’ ಎಂದು ಬರೆಯಲಾಗಿರುತ್ತದೆ. ಇದು ತಾಂತ್ರಿಕವಾಗಿ ಸಕ್ಕರೆಯೇ ಆಗಿದ್ದರೂ, ಸಕ್ಕರೆ ಸೇರಿಸಿಲ್ಲ ಎಂಬ ಹಣೆಪಟ್ಟಿಯಡಿಯಲ್ಲಿ ಗ್ರಾಹಕರನ್ನು ದಾರಿ ತಪ್ಪಿಸಲಾಗುತ್ತಿದೆ.
FSSAI ಕಠಿಣ ಕ್ರಮ:
ಈ ರೀತಿಯ ದಾರಿ ತಪ್ಪಿಸುವ ಮಾರ್ಕೆಟಿಂಗ್ ತಂತ್ರಗಳ ವಿರುದ್ಧ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಈಗ ತೀವ್ರ ನಿಗಾ ವಹಿಸಿದೆ. ಇನ್ಮುಂದೆ ಆಹಾರ ಉತ್ಪನ್ನಗಳ ಮೇಲಿನ ಸಕ್ಕರೆ ಅಂಶದ ಲೇಬಲ್‌ಗಳು ಕಠಿಣ ತಪಾಸಣೆಗೆ ಒಳಪಡಲಿವೆ. ಕಂಪನಿಗಳು ಸಕ್ಕರೆಯ ನಿಜವಾದ ಪ್ರಮಾಣವನ್ನು ಮತ್ತು ಮೂಲವನ್ನು ಗ್ರಾಹಕರಿಗೆ ಸ್ಪಷ್ಟವಾಗಿ ತಿಳಿಸುವುದನ್ನು ಕಡ್ಡಾಯಗೊಳಿಸಲಾಗುತ್ತಿದೆ.
ನೋ ಆಡೆಡ್ ಶುಗರ್ ಎಂದು ಹಣೆಪಟ್ಟಿ ಹೊಂದಿರುವ ಆಹಾರ ಉತ್ಪನ್ನಗಳ ನಿಯಮಿತ ಸೇವನೆಯು ಆರೋಗ್ಯಕ್ಕೆ ಹಾನಿಕಾರಕವಾಗಿದ್ದು, ರಕ್ತದಲ್ಲಿನ ಸಕ್ಕರೆ ಮಟ್ಟದ ದಿಢೀರ್ ಏರಿಕೆ, ತೂಕ ಹೆಚ್ಚಳ, ಫ್ಯಾಟಿ ಲಿವರ್, ಹೃದಯದ ಸಮಸ್ಯೆಗಳು ಮತ್ತು ಹಲ್ಲುಗಳ ಕ್ಷಯಕ್ಕೆ ಕಾರಣವಾಗಬಹುದು. ನೈಸರ್ಗಿಕವಾಗಿ ಹೆಚ್ಚಿನ ಫ್ರಕ್ಟೋಸ್ ಮತ್ತು ಕ್ಯಾಲೊರಿಗಳನ್ನು ಹೊಂದಿರುವ ಈ ಉತ್ಪನ್ನಗಳು, ನಾರಿನಂಶದ ಕೊರತೆಯಿಂದಾಗಿ ದೀರ್ಘಾವಧಿಯಲ್ಲಿ ಟೈಪ್-2 ಮಧುಮೇಹ ಮತ್ತು ಬೊಜ್ಜಿನ ಅಪಾಯವನ್ನು ಹೆಚ್ಚಿಸುತ್ತವೆ.
Sugar testing in food products: Curbing label fraud – ತುಳುಟೈಮ್ಸ್
ಇದನ್ನೂ ಓದಿ : ದೇಹದಲ್ಲಿ ಈ ನೋವು ಮುಂದುವರಿಯುತ್ತಿದೆಯೇ? ನಿರ್ಲಕ್ಷಿಸಿದರೆ ಅಪಾಯ
===
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://www.youtube.com/live/4pEuD7fDOuo?si=LHpb2fgpguabWp6S











