ಸಿನಿಮಾ: Tulu Times | ಕನ್ನಡದ ಇಬ್ಬರು ಹೆಸರಾಂತ ನಟರ ಮಧ್ಯೆ ಮನಸ್ತಾಪಗಳು ಇವೆ ಎಂದು ಈಗಾಗಲೇ ಹಲವಾರು ಮಾತುಕತೆಗಳು ನಡೆದಿದೆ. ಇದೀಗ ಇಬ್ಬರ ನಡುವಿನ ಸಂಬಂಧದ ಬಗ್ಗೆ ಸ್ವತಃ ರಾಜ್ ಬಿ ಶೆಟ್ಟಿ ಹೇಳಿಕೆ ನೀಡಿದ್ದಾರೆ.
45 ಸಿನಿಮಾಗೆ ಶುಭ ಹಾರೈಸುವ ವೇಳೆ ರಿಷಬ್ ಶೆಟ್ಟಿ, ರಾಜ್ ಬಿ.ಶೆಟ್ಟಿ ಅವರ ಹೆಸರನ್ನು ಉಲ್ಲೇಖಿಸಿಲ್ಲ ಎನ್ನುವ ಕುರಿತು ಚರ್ಚೆ ನಡೆಯುತ್ತಿದೆ. ಈ ಸಿನಿಮಾದಲ್ಲಿ ರಾಜ್ ಬಿ. ಶೆಟ್ಟಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ರಿಷಭ್ ಹಾಗೂ ರಾಜ್ ಬಿ ಶೆಟ್ಟಿ ಮಧ್ಯೆ ಮನಸ್ತಾಪ ಇದೆ ಎಂಬ ಗಾಸಿಪ್ ಹರಡಿದೆ. ಅದಕ್ಕೆ ಸಂಬಂಧಿಸಿದಂತೆ ರಾಜ್ ಬಿ. ಶೆಟ್ಟಿ ಈಗ ಸ್ಪಷ್ಟನೆ ನೀಡಿದ್ದಾರೆ.
ರಾಜ್ ಬಿ. ಶೆಟ್ಟಿ ರಿಷಭ್ ಬಗ್ಗೆ ಹೇಳೋದೇನು..?
ನನಗಂತೂ ಏನೂ ಮನಸ್ತಾಪವಿಲ್ಲ. ನಾನು ಎಲ್ಲೂ ಯಾರ ಹೆಸರೂ ಮಿಸ್ ಮಾಡಲಿಲ್ಲ. ಅವರೂ ಉದ್ದೇಶಪೂರ್ವಕವಾಗಿ ಮಿಸ್ ಮಾಡಿದ್ದಾರೆ ಅಂತ ಅನಿಸುವುದಿಲ್ಲ. ಇಂಥದ್ದನ್ನೆಲ್ಲ ಅಲ್ಲಲ್ಲೇ ಬಿಟ್ಟು ಮುಂದಕ್ಕೆ ಹೋಗಬೇಕು, ಅಷ್ಟು ಸೀರಿಯಸ್ ಆಗಿ ತೆಗೆದುಕೊಳ್ಳಬೇಕಿಲ್ಲ ಎಂದು ರಾಜ್ ಬಿ ಶೆಟ್ಟಿ ಹೇಳಿದ್ದಾರೆ. ಕೆಲವೊಮ್ಮೆ ಫೋನಲ್ಲಿ ಮಾತನಾಡುವಾಗ ನನ್ನ ಹೆಸರು ನೆನಪಿಗೆ ಬರದೇ ಇರಬಹುದು. ಉದ್ದೇಶಪೂರ್ವಕವಾಗಿ ಅದನ್ನು ಮಾಡುತ್ತಾರೆ ಎಂದು ನಾನು ಅಂದುಕೊಳ್ಳುವುದಿಲ್ಲ. ಚುಚ್ಚಬೇಕು ಅಂತ ಹೀಗೆ ಮಾಡುತ್ತಾರೆ ಅಂದರೆ ಅದು ನನಗೆ ತಾಗುವುದೂ ಇಲ್ಲ ಎಂದಿದ್ದಾರೆ.
ತ್ರಿಮೂರ್ತಿಗಳ ಸಿನಿಮಾಗೆ ಫ್ಯಾನ್ಸ್ ವೈಟಿಂಗ್ !
ಶಿವರಾಜ್‌ಕುಮಾರ್, ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ನಟಿಸಿರೋ ಬಹುನಿರೀಕ್ಷೆಯ 45 ಸಿನಿಮಾ ರಿಲೀಸಿಗೆ ಕೆಲವೇ ದಿನಗಳಷ್ಟೇ ಬಾಕಿ. ರಿಲೀಸ್ ಹೊಸ್ತಿಲಲ್ಲಿ 45 ಟ್ರೈಲರ್ ಹೊರಬಂದಿದೆ. ಮೂವರು ದಿಗ್ಗಜರ ಸಿನಿಮಾ ಹೇಗಿರುತ್ತೆ ಅಂತ ಫ್ಯಾನ್ಸ್ ನಿರೀಕ್ಷೆ ಮಾಡಿದ್ರೋ ಆ ನಿರೀಕ್ಷೆಯನ್ನು ಮೀರಿಸುವ ಹಾಗಿದೆ 45 ಸಿನಿಮಾದ ಟ್ರೈಲರ್. ನಿರ್ದೇಶಕ ಅರ್ಜುನ್ ಜನ್ಯ ವಿಭಿನ್ನವಾದ ಕಥೆಯೊಂದನ್ನು ಹೇಳೋಕೆ ಹೊರಟಿದ್ದಾರೆ. 45 ಟ್ರೈಲರ್ ನೋಡ್ತಾ ಇದ್ರೆ ಇದು ಯಾವ ಲೆವೆಲ್ ಮೂವಿ ಅನ್ನೋದು ಗೊತ್ತಾಗುತ್ತೆ. ಅರ್ಜುನ್ ಜನ್ಯ ಕಲ್ಪನೆಯ ಈ ಫ್ಯಾಂಟಸಿ ಸಿನಿಮಾ ತೆರೆಗೆ ತರೋದಕ್ಕ ಹಾಲಿವುಡ್ ತಂತ್ರಜ್ಞರೇ ಚಿತ್ರದ ವಿ ಎಫ್ ಎಕ್ಸ್ ವರ್ಕ್ ಮಾಡಿಕೊಟ್ಟಿದ್ದಾರೆ.
Is the relationship between Rishabh Shetty and Raj B Shetty really good?- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











