ಬ್ರೇಕಿಂಗ್ ನ್ಯೂಸ್
ಕ್ರೀಡೆ

ಶ್ರೀಲಂಕಾ ಪ್ರವಾಸಕ್ಕೆ ಇಂಡಿಯಾ ‘ಎ’ ತಂಡದಲ್ಲಿ ವೈಭವ್ ಸೂರ್ಯವಂಶಿ ಆಯ್ಕೆ

ಕ್ರೀಡೆ : Tulu Times l ಇಂಡಿಯಾ ‘ಎ’ ಕ್ರಿಕೆಟ್ ತಂಡದಲ್ಲಿ  ಶ್ರೀಲಂಕಾ ಪ್ರವಾಸಕ್ಕೆ ಪ್ರಕಟಗೊಂಡಿರುವ ತಂಡದಲ್ಲಿ 15 ವರ್ಷದ ವೈಭವ್ ಸೂರ್ಯವಂಶಿ ಸ್ಥಾನ ಪಡೆದಿದ್ದಾರೆ. ಇದುವರೆಗಿನ ಅವರ ಸಾಧನೆಗೆ ಇದು ಮಹತ್ವದ ಮೈಲಿಗಲ್ಲಾಗಿದ್ದು, ಮೊದಲ ಬಾರಿಗೆ ಇಂಡಿಯಾ ‘ಎ’ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಪ್ರಕಟಿಸಿರುವ ಮಾಹಿತಿಯ ಪ್ರಕಾರ, ಇಂಡಿಯಾ ‘ಎ’ ತಂಡವು ಶ್ರೀಲಂಕಾ ‘ಎ’ ಕ್ರಿಕೆಟ್ ತಂಡ ಮತ್ತು ಅಫ್ಘಾನಿಸ್ತಾನ ‘ಎ’ ತಂಡಗಳೊಂದಿಗೆ ತ್ರಿಕೋನ ಏಕದಿನ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಈ ಟೂರ್ನಿ ಜೂನ್ 9ರಿಂದ ಆರಂಭವಾಗಿ ಜೂನ್ 21ರವರೆಗೆ ನಡೆಯಲಿದೆ. ಏಕದಿನ ಸರಣಿಯ ಬಳಿಕ, ಇಂಡಿಯಾ ‘ಎ’ ತಂಡವು ಶ್ರೀಲಂಕಾ ಎ ಕ್ರಿಕೆಟ್ ತಂಡ ವಿರುದ್ಧ ಎರಡು ಬಹುದಿನಗಳ ಪಂದ್ಯಗಳನ್ನೂ ಆಡಲಿದೆ. ರೆಡ್‌ಬಾಲ್ ಪಂದ್ಯಗಳಿಗಾಗಿ ಪ್ರತ್ಯೇಕ ತಂಡವನ್ನು ನಂತರ ಪ್ರಕಟಿಸಲಾಗುತ್ತದೆ ಎಂದು ಬಿಸಿಸಿಐ ತಿಳಿಸಿದೆ.

ತಿಲಕ್ ವರ್ಮಾ (ನಾಯಕ), ಪ್ರಿಯಾಂಶ್ ಆರ್ಯ, ವೈಭವ್ ಸೂರ್ಯವಂಶಿ, ರಿಯಾನ್ ಪರಾಗ್ (ಉಪನಾಯಕ), ಆಯುಷ್ ಬಡೋನಿ, ನಿಶಾಂತ್ ಸಿಂಧು, ಹರ್ಷ್ ದುಬೆ, ಸೂರ್ಯಾನ್ಶ್, ಪ್ರಭ್‌ಸಿಮ್ರನ್ ಸಿಂಗ್ (ವಿಕೆಟ್ ಕೀಪರ್), ಕುಮಾರ್ ಕುಶಾಗ್ರ (ವಿಕೆಟ್ ಕೀಪರ್), ವಿಪ್ರಾಜ್ ನಿಗಮ್, ಯಶ್ ಠಾಕೂರ್, ಯುದ್ಧವೀರ್ ಸಿಂಗ್, ಅನ್ಶುಲ್ ಕಾಂಬೋಜ್ ಮತ್ತು ಅರ್ಷದ್ ಖಾನ್.

Vaibhav Suryavanshi selected in India ‘A’ squad for Sri Lanka tour – ತುಳುಟೈಮ್ಸ್

ಇದನ್ನೂ ಓದಿ :ಬೆಂಗಳೂರಿನಲ್ಲಿ ದೇಶದ ಎರಡನೇ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂಗೆ ಮೇ 23ರಂದು ಶಿಲಾನ್ಯಾಸ

====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ :https://www.youtube.com/live/4pEuD7fDOuo?si=KOion3VncBfrbaA6

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 6

You cannot copy content of this page