ಬೆಳ್ತಂಗಡಿ : Tulu Times l ಧರ್ಮಸ್ಥಳ-ಪಟ್ರಮೆ ರಸ್ತೆಯ ಬದಿಯಲ್ಲಿ ನೇತ್ರಾವತಿ ವಸತಿಗೃಹದ ಸಮೀಪ ಸುಮಾರು 60-65 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಮೃತದೇಹ ಪತ್ತೆಯಾಗಿತ್ತು. ಯಾವುದೋ ಕಾಯಿಲೆಯಿಂದ ಅಸ್ವಸ್ಥಗೊಂಡವರನ್ನು 108 ಅಂಬ್ಯುಲೆನ್ಸ್ ಮೂಲಕ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕಳುಹಿಸಿ ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.
ಈ ಅಪರಿಚಿತ ವ್ಯಕ್ತಿ ಮೇ.8 ರಂದು ಬೆಳಿಗ್ಗೆ 07:56 ಗಂಟೆಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತದೇಹದ ಎತ್ತರ 5.9 ಅಡಿ, ದೃಢಕಾಯ ಶರೀರ, ಗೋಧಿ ಮೈಬಣ್ಣ, ದುಂಡು ಮುಖ, ಮುಖದಲ್ಲಿ ಬಿಳಿ ನೆರೆತ ಗಡ್ಡ-ಮೀಸೆ, ತಲೆಯಲ್ಲಿ ಬಿಳಿ ನೆರೆತ ಕೂದಲು, ಎದೆಯ ಬಳಿ ಕಪ್ಪು ಎಳ್ಳು ಮಚ್ಚೆ ಗುರುತು ಮತ್ತು ಮೃತದೇಹದ ಮೈಮೇಲೆ ಆಸ್ಪತ್ರೆಯ ಬಾಬು ಡೈಫರ್, ಮತ್ತು ಕೊರಳಿನಲ್ಲಿ ಲೋಹದ ತಾಯಿತಾ ವನ್ನು ಪೊಣಿಸಿದ ಕಪ್ಪು ದಾರ ಧರಿಸಿರುತ್ತಾರೆ. ಮೃತ ವ್ಯಕ್ತಿಯ ವಾರೀಸುದಾರರು/ ಸಂಬಂಧಿಕರು ಪತ್ತೆಯಾದಲ್ಲಿ ಧರ್ಮಸ್ಥಳ ಮೃತದೇಹದ ಎತ್ತರ 5.9 ಅಡಿ, ದೃಢಕಾಯ ಶರೀರ, ಗೋಧಿ ಮೈಬಣ್ಣ, ದುಂಡು ಮುಖ, ಮುಖದಲ್ಲಿ ಬಿಳಿ ನೆರೆತ ಗಡ್ಡ-ಮೀಸೆ, ತಲೆಯಲ್ಲಿ ಬಿಳಿ ನೆರೆತ ಕೂದಲು, ಎದೆಯ ಬಳಿ ಕಪ್ಪು ಎಳ್ಳು ಮಚ್ಚೆ ಗುರುತು ಮತ್ತು ಕೊರಳಿನಲ್ಲಿ ಲೋಹದ ತಾಯಿತಾವನ್ನು ಪೊಣಿಸಿದ ಕಪ್ಪು ದಾರ ಧರಿಸಿರುತ್ತಾರೆ. ಮೃತ ವ್ಯಕ್ತಿಯ ವಾರೀಸುದಾರರು/ ಸಂಬಂಧಿಕರು ಪತ್ತೆಯಾದಲ್ಲಿ 7795424204, 8277986449, 9480805336 ಈ ದೂರವಾಣಿಗೆ ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
An unidentified person who was unwell died at Dharmasthala Hospital after failing to respond to treatment – ತುಳುಟೈಮ್ಸ್
ಇದನ್ನೂ ಓದಿ :ಕರ್ನಾಟಕದಲ್ಲಿ ಶಾಲಾ ಬಸ್‌ಗಳಿಗೆ 20 ವರ್ಷ ಮಾನ್ಯತಾ ಬೇಡಿಕೆ ಹಾಗೂ ಸಾರಿಗೆ ಶುಲ್ಕ ಏರಿಕೆ ಬಗ್ಗೆ ಆತಂಕ
===
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://www.youtube.com/live/4pEuD7fDOuo?si=TMouCfuzyXMJh1a-










