ಬ್ರೇಕಿಂಗ್ ನ್ಯೂಸ್
ಸುಳ್ಯ

ಬಂಟರ ಸಂಘದ ಆಶ್ರಯದಲ್ಲಿ ‘ಆಟಿಡೊಂಜಿ ದಿನ–2026’ ಆಚರಣೆ

ಸುಳ್ಯ: Tulu Times l ಬಂಟರ ಯಾನೆ ನಾಡವರ ಸಂಘ (ರಿ.) ಸುಳ್ಯ, ಮಹಿಳಾ ಘಟಕ ಹಾಗೂ ಯುವ ಘಟಕದ ಸಂಯುಕ್ತ ಆಶ್ರಯದಲ್ಲಿ ‘ಆಟಿಡೊಂಜಿ ದಿನ–2026’ ಕಾರ್ಯಕ್ರಮವನ್ನು ಆಗಸ್ಟ್ 9ರಂದು (ಭಾನುವಾರ) ಬಂಟರ ಸಮುದಾಯ ಭವನ, ಕೇರ್ಪಳದಲ್ಲಿ ವೈಭವದಿಂದ ಆಯೋಜಿಸಲಾಗಿದೆ. ಕಾರ್ಯಕ್ರಮವು ಬೆಳಿಗ್ಗೆ 9.30 ಗಂಟೆಗೆ ಆರಂಭವಾಗಲಿದ್ದು, ಮಾಜಿ ಗೌರವಾಧ್ಯಕ್ಷ ರವೀಂದ್ರನಾಥ ಶೆಟ್ಟಿ ಕೇನ್ಯ ಉದ್ಘಾಟಿಸಲಿದ್ದಾರೆ. ಸಂಘದ ಅಧ್ಯಕ್ಷ ಸುಭಾಶ್ಚಂದ್ರ ರೈ ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಮಾತುಗಾರರಾಗಿ ವಿದ್ಯಾರಶ್ಮಿ ವಿದ್ಯಾಲಯ, ಸವಣೂರಿನ ಮುಖ್ಯ ಶಿಕ್ಷಕಿ ಶಶಿಕಲಾ ಎಸ್. ಆಳ್ವ ಅವರು ಆಟಿ ತಿಂಗಳ ಸಾಂಸ್ಕೃತಿಕ, ಆರೋಗ್ಯ ಹಾಗೂ ಸಾಮಾಜಿಕ ಮಹತ್ವದ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನಿರ್ದೇಶಕ ಕುಂಬ್ರ ದಯಾಕರ ಆಳ್ವ ಹಾಗೂ ಬಂಟರ ಯಾನೆ ನಾಡವರ ಮಾತೃ ಸಂಘ (ರಿ.) ಮಂಗಳೂರು ನಿರ್ದೇಶಕ ಪಿ.ಬಿ. ಸುಧಾಕರ ರೈ ಭಾಗವಹಿಸಲಿದ್ದಾರೆ.

ಗೌರವ ಉಪಸ್ಥಿತರಾಗಿ ಸಂಘದ ಕಾರ್ಯದರ್ಶಿ ಗಂಗಾಧರ ರೈ, ಖಜಾಂಜಿ ಸುನಂದಾ ಶೆಟ್ಟಿ, ಮಹಿಳಾ ಘಟಕದ ಗೌರವಾಧ್ಯಕ್ಷೆ ಇಂದಿರಾ ಆರ್. ರೈ, ಅಧ್ಯಕ್ಷೆ ಉಮಾ ವಿ. ರೈ, ಕಾರ್ಯದರ್ಶಿ ಹರಿಣಿ ಆರ್. ರೈ, ಖಜಾಂಜಿ ಸನ್ನುತಾ ಎಸ್. ರೈ, ಬಂಟರ ಸಮುದಾಯ ಭವನದ ಅಧ್ಯಕ್ಷ ಹರೀಶ್ ರೈ ಹಾಗೂ ಯುವ ಘಟಕದ ಅಧ್ಯಕ್ಷ ಸುಜಿತ್ ರೈ ಪಟ್ಟಿ ಸೇರಿದಂತೆ ಹಲವರು ಉಪಸ್ಥಿತರಿರಲಿದ್ದಾರೆ.

ಸಭಾ ಕಾರ್ಯಕ್ರಮದ ಬಳಿಕ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು, ಜನಪದ ಸಂಸ್ಕೃತಿಯನ್ನು ಬಿಂಬಿಸುವ ಪ್ರದರ್ಶನಗಳು ಹಾಗೂ ಮಕ್ಕಳಿಂದ ಹಿರಿಯರವರೆಗೆ ಎಲ್ಲರೂ ಭಾಗವಹಿಸಬಹುದಾದ ಮನರಂಜನಾ ಆಟಗಳನ್ನು ಆಯೋಜಿಸಲಾಗಿದೆ. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆಯೂ ನಡೆಯಲಿದೆ.

ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಆಟಿ ತಿಂಗಳ ವಿಶೇಷ ಸಾಂಪ್ರದಾಯಿಕ ಖಾದ್ಯಗಳ ಭೋಜನವನ್ನು ಏರ್ಪಡಿಸಲಾಗಿದೆ. ಔಷಧೀಯ ಗುಣಗಳಿರುವ ಸ್ಥಳೀಯ ಆಹಾರ ಪದಾರ್ಥಗಳು ಹಾಗೂ ಆಟಿ ಸಂಪ್ರದಾಯದ ವೈಶಿಷ್ಟ್ಯವನ್ನು ಪರಿಚಯಿಸುವ ವಿವಿಧ ಖಾದ್ಯಗಳನ್ನು ಭಾಗವಹಿಸುವವರು ಸವಿಯಲಿದ್ದಾರೆ.

ತುಳುನಾಡಿನ ಸಂಸ್ಕೃತಿ, ಸಂಪ್ರದಾಯ ಮತ್ತು ಆಹಾರ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ಸಮಾಜದ ಸದಸ್ಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಸಂಘದ ಗೌರವಾಧ್ಯಕ್ಷರು, ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಸರ್ವ ಸದಸ್ಯರು ಮನವಿ ಮಾಡಿದ್ದಾರೆ.

‘Aatidonji Dina – 2026’ under the aegis of the Bunts’ Sangha – ತುಳುಟೈಮ್ಸ್

ಇದನ್ನೂ ಓದಿ :ಮೊಬೈಲ್ ಹೆಚ್ಚು ಬಳಸುತ್ತೀರಾ? ಆರೋಗ್ಯದ ಮೇಲೆ ಬೀಳಬಹುದು ದುಷ್ಪರಿಣಾಮ

====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ :https://youtu.be/IKW_z7twgxc

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 9

You cannot copy content of this page