ಬ್ರೇಕಿಂಗ್ ನ್ಯೂಸ್
ಕೃಷಿ

ದಕ್ಷಿಣ ಕನ್ನಡದಲ್ಲಿ ಭತ್ತದ ಕೃಷಿಗೆ ಹೊಸ ಹರುಷ : 1,000 ಎಕರೆ ಗುರಿ

ಮಂಗಳೂರು: Tulu Times l ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭತ್ತದ ಕೃಷಿಯಿಂದ ರೈತರು ಹಿಂದೆ ಸರಿಯುತ್ತಿರುವ ನಡುವೆಯೇ, ಹಲವು ರೈತ ಉತ್ಪಾದಕರ ಸಂಘಗಳು (ಎಫ್‌ಪಿಒ)ಗಳು ಈ ಬಾರಿ ಪಾಳು ಬಿದ್ದಿರುವ ಕೃಷಿಭೂಮಿಗಳನ್ನು ಮತ್ತೆ ಕೃಷಿಗೆ ತರುವ ಮಹತ್ವದ ಮುಂದಾಳತ್ವ ವಹಿಸಿವೆ. ಕೃಷಿ ಇಲಾಖೆ ಹಾಗೂ ವಿವಿಧ ಸಹಕಾರ ಸಂಘಟನೆಗಳ ಸಹಯೋಗದೊಂದಿಗೆ ಸುಮಾರು 1,000 ಎಕರೆ ಪ್ರದೇಶದಲ್ಲಿ ಭತ್ತ ಬಿತ್ತನೆ ನಡೆಸುವ ಗುರಿ ಹೊಂದಲಾಗಿದೆ. ಈಗಾಗಲೇ ಕೃಷಿ ಇಲಾಖೆಯಿಂದ ಸಹಾಯಧನದಡಿ ಟ್ರ್ಯಾಕ್ಟರ್, ಟಿಲ್ಲರ್ ಹಾಗೂ ಹಾರ್ವೆಸ್ಟರ್ ಖರೀದಿಸಿರುವ ಕೆಲವು ಸಂಘಟನೆಗಳು ಭೂಮಿ ಸಿದ್ಧತಾ ಕಾರ್ಯಗಳಲ್ಲಿ ತೊಡಗಿಕೊಂಡಿವೆ. ಜಿಲ್ಲೆಯಲ್ಲಿ 2024-25ನೇ ಸಾಲಿನಲ್ಲಿ 9,300 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಕೃಷಿ ನಡೆದಿತ್ತು. 2025-26ರಲ್ಲಿ ಇದು 9,750 ಹೆಕ್ಟೇರ್‌ಗೆ ಏರಿಕೆಯಾಗಿದೆ. ಈ ಬಾರಿ ಇನ್ನೂ ಕನಿಷ್ಠ 1,000 ಎಕರೆ ಹೆಚ್ಚುವರಿ ಭೂಮಿಯಲ್ಲಿ ಕೃಷಿ ನಡೆಸುವ ಉದ್ದೇಶ ಹೊಂದಲಾಗಿದೆ.

ರೈತರ ಪ್ರಕಾರ, ಕೃಷಿ ಇಲಾಖೆ ಯಂತ್ರೋಪಕರಣಗಳನ್ನು ಸಹಾಯಧನದಲ್ಲಿ ನೀಡುವುದರ ಜೊತೆಗೆ ಭತ್ತ ಬೆಳೆ ವಿಮೆಯನ್ನೂ ಒದಗಿಸುತ್ತಿದ್ದರೂ ಭತ್ತದ ಕೃಷಿ ಲಾಭದಾಯಕವಾಗಿಲ್ಲ. ಕೆಲವು ರೈತರು ಕೇವಲ ಪೂರ್ವಜರ ಪರಂಪರೆ ಉಳಿಸಿಕೊಳ್ಳುವ ಉದ್ದೇಶದಿಂದ ಮಾತ್ರ ಕೃಷಿ ಮುಂದುವರಿಸುತ್ತಿದ್ದಾರೆ. ಒಂದು ಅಥವಾ ಎರಡು ಗದ್ದೆಗಳನ್ನು ಹೊಂದಿರುವ ಸಣ್ಣ ರೈತರಿಗೆ ಕಾಡುಪ್ರಾಣಿಗಳ ಹಾವಳಿ ಕೂಡ ದೊಡ್ಡ ಸಮಸ್ಯೆಯಾಗಿದೆ. ಇದರ ಜೊತೆಗೆ ಕೃಷಿ ಮತ್ತು ಕೊಯ್ಲಿಗೆ ಅಗತ್ಯವಾದ ಕಾರ್ಮಿಕರು ಹಾಗೂ ಯಂತ್ರೋಪಕರಣಗಳನ್ನು ಪಡೆಯುವುದೂ ಕಷ್ಟಕರವಾಗಿದೆ.

ಪಾಳು ಭೂಮಿಯಲ್ಲಿ ವೈಯಕ್ತಿಕವಾಗಿ ಕೃಷಿ ಕೈಗೊಳ್ಳುವ ರೈತರಿಗೆ ಕೃಷಿ ಇಲಾಖೆ 5 ಎಕರೆವರೆಗೆ ಉಚಿತವಾಗಿ ಬೀಜ, ರಸಗೊಬ್ಬರ ಹಾಗೂ ಅಗತ್ಯ ಪೋಷಕಾಂಶಗಳನ್ನು ಒದಗಿಸಲಿದೆ. ಜೊತೆಗೆ ಕೃಷಿ ಯಂತ್ರೋಪಕರಣಗಳ ಖರೀದಿಗೆ ಸಹಾಯಧನವೂ ನೀಡಲಾಗುತ್ತಿದೆ. ಇದಲ್ಲದೆ, ಎಫ್‌ಪಿಒಗಳಿಗೆ ಕಾಂಬೈನ್ ಹಾರ್ವೆಸ್ಟರ್ ಖರೀದಿಸಲು ಸಹಾಯಧನದ ನೆರವು ನೀಡಲಾಗುತ್ತಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ವರ್ಷ ಎಫ್‌ಪಿಒಗಳ ನೇತೃತ್ವದಲ್ಲಿ ಸುಮಾರು 650 ಎಕರೆ ಪಾಳು ಭೂಮಿಯಲ್ಲಿ ಕೃಷಿ ಮಾಡಲಾಗಿತ್ತು. ಈ ಬಾರಿ 800ರಿಂದ 1,000 ಎಕರೆ ಪ್ರದೇಶವನ್ನು ಕೃಷಿಗೆ ಸಿದ್ಧಪಡಿಸಲಾಗುತ್ತಿದೆ.

New impetus for paddy cultivation in Dakshina Kannada: 1,000 acres target – ತುಳು ಟೈಮ್ಸ್

ಇದನ್ನೂ ಓದಿ : ಕರ್ನಾಟಕ ಕಾಂಗ್ರೆಸ್ ನಾಯಕತ್ವ ಬದಲಾವಣೆಯಲ್ಲಿ ಪ್ರಿಯಾಂಕಾ ಗಾಂಧಿಯ ಪಾತ್ರವಿದೆಯೇ?

====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://www.youtube.com/live/4pEuD7fDOuo?si=NM0tBe15Cbzi85Bp

ಈ ಸುದ್ದಿಯನ್ನು ಶೇರ್ ಮಾಡಿ

Related Posts

You cannot copy content of this page