ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಇನ್ನು ಆಧಾರ್ ಸೇವೆ ಮತ್ತಷ್ಟು ಡಿಜಿಟಲ್; ಇಮೇಲ್ ಅಪ್ಡೇಟ್ ಗೆ ಹೊಸ ವ್ಯವಸ್ಥೆ

ಆಧಾರ್ ಸೇವೆ : Tulu Times l ಆಧಾರ್‌ದಾರರಿಗೆ ಮತ್ತೊಂದು ಮಹತ್ವದ ಸೌಲಭ್ಯವನ್ನು ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (UIDAI) ಪರಿಚಯಿಸಿದೆ. ಹೌದು…! ಇನ್ನು ಮುಂದೆ ಆಧಾರ್ ದಾಖಲೆಯಲ್ಲಿನ ಇಮೇಲ್ ಐಡಿಯನ್ನು ಸೇರಿಸಲು ಅಥವಾ ನವೀಕರಿಸಲು ಆಧಾರ್ ನೋಂದಣಿ ಕೇಂದ್ರಕ್ಕೆ ತೆರಳುವ ಅಗತ್ಯವಿಲ್ಲ. ಈ ಸೇವೆಯನ್ನು ನೇರವಾಗಿ ಆಧಾರ್ ಆ್ಯಪ್ ಮೂಲಕ ಪಡೆಯಬಹುದಾಗಿದೆ.

ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ನೀಡಿರುವ ಮಾಹಿತಿಯಂತೆ, ಈ ಹೊಸ ಸೇವೆ ಜುಲೈ 1, 2026ರಿಂದ ಜಾರಿಗೆ ಬಂದಿದ್ದು, ಆರು ತಿಂಗಳವರೆಗೆ ಸಂಪೂರ್ಣ ಉಚಿತವಾಗಿ ಲಭ್ಯವಿರಲಿದೆ.
ಸಚಿವಾಲಯದ ಪ್ರಕಾರ, ಈ ಸೌಲಭ್ಯದಿಂದ ನಿವಾಸಿಗಳು ತಮ್ಮ ಆಧಾರ್ ಮಾಹಿತಿಯನ್ನು ಸುಲಭವಾಗಿ ಹಾಗೂ ವೇಗವಾಗಿ ನವೀಕರಿಸಿಕೊಳ್ಳಬಹುದು. ಹೊಸ ಸೇವೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಆರಂಭವಾದ ಎರಡು ದಿನಗಳಲ್ಲೇ 2.5 ಲಕ್ಷಕ್ಕೂ ಹೆಚ್ಚು ಮಂದಿ ತಮ್ಮ ಇಮೇಲ್ ವಿಳಾಸವನ್ನು ಆಧಾರ್ ಆ್ಯಪ್ ಮೂಲಕ ನವೀಕರಿಸಿದ್ದಾರೆ ಎಂದು ಪ್ರಾಧಿಕಾರವು ತಿಳಿಸಿದೆ.

ಇಮೇಲ್ ಲಿಂಕ್ ಮಾಡಿದರೆ ಏನು ಪ್ರಯೋಜನ?
ಆಧಾರ್‌ಗೆ ಇಮೇಲ್ ಐಡಿ ಜೋಡಿಸಿದರೆ, ಆಧಾರ್ ದೃಢೀಕರಣ ನಡೆದಾಗಲೆಲ್ಲ ಬಳಕೆದಾರರಿಗೆ ಇಮೇಲ್ ಮೂಲಕ ತಕ್ಷಣದ ಮಾಹಿತಿ ದೊರೆಯುತ್ತದೆ. ಇದರಿಂದ ಆಧಾರ್ ದುರುಪಯೋಗವನ್ನು ತಡೆಯಲು ಮತ್ತು ಭದ್ರತೆಯನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ. ಆಧಾರ್ ಆ್ಯಪ್ ಮೂಲಕ ಬಳಕೆದಾರರು ಹಲವು ಸೇವೆಗಳನ್ನು ಪಡೆಯಬಹುದು. ಅವುಗಳಲ್ಲಿ ಪ್ರಮುಖವಾಗಿ:
* ಮೊಬೈಲ್ ಸಂಖ್ಯೆ ನವೀಕರಣ
* ವಿಳಾಸ ಬದಲಾವಣೆ
* ಇತರೆ ಆಧಾರ್ ಸಂಬಂಧಿತ ಸೇವೆಗಳ ನಿರ್ವಹಣೆ
UIDAI ಮಾಹಿತಿ ಪ್ರಕಾರ, ಇದುವರೆಗೆ 4 ಕೋಟಿಗೂ ಹೆಚ್ಚು ಮಂದಿ ಆಧಾರ್ ಆ್ಯಪ್ ಮೂಲಕ ಮೊಬೈಲ್ ಸಂಖ್ಯೆಯನ್ನು ನವೀಕರಿಸಿದ್ದರೆ, ಸುಮಾರು 10 ಲಕ್ಷ ಮಂದಿ ವಿಳಾಸವನ್ನು ಅಪ್ಡೇಟ್ ಮಾಡಿದ್ದಾರೆ. ಈ ಹೊಸ ಉಚಿತ ಸೌಲಭ್ಯದ ಪ್ರಯೋಜನ ಪಡೆಯಲು ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಆಧಾರ್ ಆ್ಯಪ್‌ನ ಇತ್ತೀಚಿನ ಆವೃತ್ತಿಯನ್ನು ಡೌನ್‌ಲೋಡ್ ಅಥವಾ ಅಪ್ಡೇಟ್ ಮಾಡಿಕೊಳ್ಳುವಂತೆ ಪ್ರಾಧಿಕಾರ ಮನವಿ ಮಾಡಿದೆ.

Aadhaar services go further digital; new system for email updates. – ತುಳು ಟೈಮ್ಸ್

ಇದನ್ನೂ ಓದಿ : ಟೀಂ ಇಂಡಿಯಾಗೆ ಹೊಸ ಸ್ಟಾರ್ ಎಂಟ್ರಿ; ಸಚಿನ್‌ ದಾಖಲೆಗೆ ಬ್ರೇಕ್ ಹಾಕಿದ 15ರ ಹುಡುಗ

===

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtube.com/shorts/SbFyw13ZxBo?feature=share

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 208

You cannot copy content of this page