ನವದೆಹಲಿ: Tulu Times l ದೇಶದಾದ್ಯಂತ ಮೊಬೈಲ್ ಬಳಕೆದಾರರಿಗೆ ಮತ್ತೊಮ್ಮೆ ರೀಚಾರ್ಜ್ ದರ ಏರಿಕೆಯ ಆತಂಕ ಎದುರಾಗಿದೆ. ಮುಂದಿನ ಮೂರರಿಂದ ನಾಲ್ಕು ತಿಂಗಳೊಳಗೆ ಮೊಬೈಲ್ ರೀಚಾರ್ಜ್ ದರಗಳು ಶೇ.12ರಿಂದ 15ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಆರ್ಥಿಕ ಸಂಶೋಧನಾ ಸಂಸ್ಥೆ ಸೆಂಟ್ರಮ್ ಇನ್‌ಸ್ಟಿಟ್ಯೂಷನಲ್ ರಿಸರ್ಚ್ ತನ್ನ ಇತ್ತೀಚಿನ ವರದಿಯಲ್ಲಿ ಅಂದಾಜಿಸಿದೆ. ವರದಿಯ ಪ್ರಕಾರ, ಭಾರತದ ದೂರಸಂಪರ್ಕ ಕ್ಷೇತ್ರದಲ್ಲಿ ಈಗ ಕೆಲವೇ ಪ್ರಮುಖ ಕಂಪನಿಗಳು ಉಳಿದಿದ್ದು, ಮಾರುಕಟ್ಟೆ ಸೀಮಿತ ಸ್ಪರ್ಧೆಯತ್ತ ಸಾಗುತ್ತಿದೆ. ಪ್ರಸ್ತುತ ರಿಲಾಯನ್ಸ್ ಜಿಯೋ, ಏರ್ಟೆಲ್, ಒಡಾಫೋನ್ ಐಡಿಯಾ ಹಾಗೂ ಬಿಎಸ್ಎನ್ಎಲ್ ಪ್ರಮುಖ ಸೇವಾದಾರರಾಗಿದ್ದು, ಈ ಸ್ಥಿತಿಯನ್ನು ವರದಿ ‘3+1 ಮಾರುಕಟ್ಟೆ ರಚನೆ’ ಎಂದು ವಿವರಿಸಿದೆ.

ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ಕಂಪನಿಗಳ ಸಂಖ್ಯೆ ಕಡಿಮೆಯಾಗಿರುವುದರಿಂದ ಟೆಲಿಕಾಂ ಸಂಸ್ಥೆಗಳಿಗೆ ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಲು ದರ ಪರಿಷ್ಕರಣೆ ಮಾಡುವ ಅವಕಾಶ ಹೆಚ್ಚಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಕಳೆದ ವರ್ಷವೂ ಮೊಬೈಲ್ ರೀಚಾರ್ಜ್ ದರಗಳು ಏರಿಕೆಯಾಗಿದ್ದವು. ಇದೀಗ ಮತ್ತೊಮ್ಮೆ ದರ ಹೆಚ್ಚಳವಾದರೆ, ಕೋಟ್ಯಂತರ ಗ್ರಾಹಕರ ಮಾಸಿಕ ಮೊಬೈಲ್ ವೆಚ್ಚ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ. ಆದಾಗ್ಯೂ, ಮೊಬೈಲ್ ರೀಚಾರ್ಜ್ ದರ ಹೆಚ್ಚಳದ ಕುರಿತು ಯಾವುದೇ ಟೆಲಿಕಾಂ ಸಂಸ್ಥೆ ಇನ್ನೂ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ. ಅಂತಿಮ ನಿರ್ಧಾರ ಕಂಪನಿಗಳ ಮುಂದಿನ ಘೋಷಣೆಯ ಬಳಿಕವೇ ಸ್ಪಷ್ಟವಾಗಲಿದೆ.
Are mobile recharge rates set to rise again? Users may face an additional burden. – ತುಳು ಟೈಮ್ಸ್
ಇದನ್ನೂ ಓದಿ :ಕೇರಳದ ವಯನಾಡಿನಲ್ಲಿ ಭಾರೀ ಭೂಕುಸಿತ: 3 ಸಾವು, ಹಲವರು ನಾಪತ್ತೆ
===
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/zL6G6JE_ZwA











