ಬೆಳ್ತಂಗಡಿ : Tulu Times l ದಿನಾಂಕ 16, ಗುರುವಾರ ಬೆಳಿಗ್ಗೆ ಗಂಟೆ 5-30ರಿಂದ ಉಷಃಪೂಜೆ, ಮಹಾಗಣಪತಿ ಹೋಮ, ಅವಗಾಹ, ಪಂಚಕ ಬಿಂಬಶುದ್ಧಿ, ಖನನಾದಿ ಸ್ಥಳಶುದ್ಧಿ, ಪ್ರೋಕ್ತ ಹೋಮ, ಪ್ರಾಯಶ್ಚಿತ್ತ ಹೋಮಗಳು ಇತ್ಯಾದಿ ಕಾರ್ಯಕ್ರಮ ನಡೆಯುತ್ತವೆ. ಜೊತೆಗೆ ಬೆಳಗ್ಗೆ ಹಾಗೂ ಸಂಜೆ ಉಪ್ಪಿನಂಗಡಿ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
ಮಧ್ಯಾಹ್ನ ಗಂಟೆ 12-00ಕ್ಕೆ : ಹೋಮಗಳ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದ್ದು, ಸಂಜೆ ಗಂಟೆ 5-30ರಿಂದ : ದೀಪಾರಾಧನೆ, ಅಂಕುರಪೂಜೆ, ಕುಂಡಶುದ್ದಿ, ದುರ್ಗಾಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.
ಧಾರ್ಮಿಕ ಸಭಾ ಕಾರ್ಯಕ್ರಮ ರಾತ್ರಿ ಗಂಟೆ 7-00 ರಿಂದ 8-30 ;
ವಿಧಾನ ಸಭಾ ಕ್ಷೇತ್ರ, ಬೆಳ್ತಂಗಡಿ ಶಾಸಕರು ಹರೀಶ್ ಪೂಂಜಾ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ಹರಿಕೃಷ್ಣ ಬಂಟ್ವಾಳ ಇವರಿಂದ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ. ಜೊತೆಗೆ, ವಿವಿಧ ಕ್ಷೇತ್ರದವರನ್ನು ಗುರುತಿಸಿ ಈ ದಿನ ಕಾರ್ಯಕ್ರಮದಲ್ಲಿ ಗೌರವಿಸಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮ ;
* ಬೆಳಗ್ಗೆ 10-00 ಗಂಟೆಯಿಂದ ಬೊಳುವಾರು ಆಂಜನೇಯ ಮಹಿಳಾ ಯಕ್ಷಗಾನ ಸಂಘದಿಂದ ‘ತಾಳಮದ್ದಲೆ’ಯು ಭಾಸ್ಕರ ಬಾರ್ಯ ನಿರ್ದೇಶನದಲ್ಲಿ ಮೂಡಿಬರಲಿದೆ. ಪ್ರಸಂಗ : ಓಂ ನಮಃ ಶಿವಾಯ
• ಸಂಜೆ 4-00 ರಿಂದ 6-30ರ ತನಕ ಮಂಗಳೂರು ನಾದ ಬ್ರಹ್ಮ ಸಂಗೀತ ಬಳಗದಿಂದ ‘ಭಕ್ತಿಗಾನ ಸುಧಾ’ ಕಾರ್ಯಕ್ರಮ.
• ರಾತ್ರಿ 9.00 ಗಂಟೆಯಿಂದ ಶಾರದಾ ಕಲಾಕೇಂದ್ರ ಟ್ರಸ್ಟ್ (ರಿ.) ದರ್ಬೆ, ಪುತ್ತೂರು ವಿದ್ವಾನ್ ಸುದರ್ಶನ್ ಎಂ.ಎಲ್ ಭಟ್ ಇವರ ನಿರ್ದೇಶನದಲ್ಲಿ ವಿದುಷಿ ಡಿಂಪಲ್ ಶಿವರಾಜ್ ಇವರಿಂದ ನೃತ್ಯಾರ್ಚನೆ ಮತ್ತು ಶ್ರೀನಿವಾಸ ಕಲ್ಯಾಣ ನೃತ್ಯರೂಪಕ ನಡೆಯಲಿದೆ. ತುಳುಟೈಮ್ಸ್ ನಲ್ಲಿ ಈ ಎಲ್ಲಾ ಕಾರ್ಯಕ್ರಮಗಳ ನೇರಪ್ರಸಾರ ಇರಲಿದೆ.
Karaya Brahmakalash Today’s (Apr. 16) Programs – ತುಳುಟೈಮ್ಸ್
ಇದನ್ನೂ ಓದಿ :ಮಧ್ಯಪ್ರಾಚ್ಯ ಉದ್ವಿಗ್ನತೆ ಪರಿಣಾಮ: ಬೆಂಗಳೂರಿನಲ್ಲಿ ಆಮದು ಹಣ್ಣುಗಳ ಬೆಲೆ ದ್ವಿಗುಣ
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://www.youtube.com/live/_cOFPNo27XQ?si=vYqTAgeYwWPBJEVp











