ಬ್ರೇಕಿಂಗ್ ನ್ಯೂಸ್
ಕರ್ನಾಟಕಬಂಟ್ವಾಳ

ಬಂಟ್ವಾಳ: ಬಾವಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ !

ಬಂಟ್ವಾಳ: Tulu Times | ಕೊಳ್ತಾಡು ಗ್ರಾಮದ ಕಲ್ಲಮಜಲು-ಸೆರ್ಕಳ ರಸ್ತೆಯ ವಾಸವಿಲ್ಲದ ದಿ. ಬಟ್ಯ ನಾಯ್ಕರ ಮನೆಯ ಬಾವಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆಯಾಗಿರುವ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ  ನಡೆದಿದೆ.

ಹಲವು ಸಮಯಗಳ ಹಿಂದೆ ನಾಪತ್ತೆಯಾಗಿದ್ದ ಕೊಳ್ತಾಡು ನಿವಾಸಿ ಪೂವಪ್ಪ ಪೂಜಾರಿ ಅವರ ಮೃತದೇಹ ಗುರುತಿಸಲಾಗಿದೆ. ಸ್ಥಳೀಯರಿಗೆ  ವಾಸನೆ ಬಂದ ಕಾರಣ ಇಡೀ ಸುತ್ತಮುತ್ತ ಹುಡುಕಾಟ ನಡೆಸಲಾಗಿದೆ. ಆ ವೇಳೆ,  ವಾಸ್ತವ್ಯವಿಲ್ಲದ ಪಾಳು ಬಿದ್ದ ಮನೆಯಂಗಳದ ಬಾವಿಯಲ್ಲಿ ಶವ ಕಂಡುಬಂದಿದೆ.ಬಳಿಕ ಆ ಕ್ಷಣವೇ ವಿಟ್ಲ ಠಾಣೆಗೆ ಮಾಹಿತಿ ನೀಡಿದ್ದಾರೆ.

ಮುರಳೀಧರ ವಿಟ್ಲ ನೇತೃತ್ವದ ಫ್ರೆಂಡ್ ವಿಟ್ಲ ತಂಡದವರು ಸ್ಥಳಕ್ಕಾಗಮಿಸಿ 57 ಅಡಿ ಆಳದ ಬಾವಿಯೊಳಗೆ ಇದ್ದ ಶವವನ್ನು ಮೇಲಕ್ಕೆತ್ತಿದ್ದಾರೆ.  ಸ್ಥಳೀಯರ ‘ಸಹಕಾರದಿಂದ ಶವ ಮೇಲಕ್ಕೆ ಎತ್ತಲಾಯಿತು. ಪೂವಪ್ಪ ಪೂಜಾರಿ ಆತ್ಮಹತ್ಯೆ ಬಗ್ಗೆ, ಪತ್ನಿ ಸುಶೀಲಾ ಎಂಬವರು ನೀಡಿದ ದೂರಿನಂತೆ  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಫ್ರೆಂಡ್ಸ್ ವಿಟ್ಲ ತಂಡದ ಕಾರ್ಯಕ್ಕೆ ಗ್ರಾಮಸ್ಥರು ಪ್ರಶಂಸೆ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.

ಬಸ್‌ ಚಾಲಕನಿಗೆ ಎದೆನೋವು.. ತಕ್ಷಣ ಏನಾಯ್ತು ಗೊತ್ತಾ..?

ಪ್ರತ್ಯೇಕ ಪ್ರಕರಣದಲ್ಲಿ, ಸುಬ್ರಹ್ಮಣ್ಯದಿಂದ ಕಾರವಾರಕ್ಕೆ ಕೆಎಸ್ಸಾರ್ಟಿಸಿ ಬಸ್ ಅನ್ನು ಚಾಲನೆ ಮಾಡುತ್ತಿದ್ದ ಚಾಲಕನಿಗೆ ಎದೆ ನೋವು ಕಾಣಿಸಿಕೊಂಡ ಘಟನೆ ನಡೆದಿದ್ದು, ತಕ್ಷಣವೇ ಪಯಾಣಿಕರೋರ್ವರ ಬಸ್ ನ್ನು ರಸ್ತೆ ಬದಿ ನಿಲ್ಲಿಸಿ, ಭಾರೀ ದುರಂತವನ್ನು ತಪ್ಪಿಸಿದ್ದಾರೆ. ಸುಬ್ರಹ್ಮಣ್ಯದಿಂದ ಕಾರವಾರಕ್ಕೆ ಕೆಎಸ್ಸಾರ್ಟಿಸಿ ಬಸ್ ಚಾಲನೆ ಮಾಡುತ್ತಿದ್ದ ಚಾಲಕ ಗೋವಿಂದ ನಾಯ್ಕ ಎಂಬವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಪೆರ್ನೆ ಗ್ರಾಮದ ಕರ್ವೇಲು ಎಂಬಲ್ಲಿ ಸಮೀಪಿಸುತ್ತಿದ್ದಾಗ ಅವರಿಗೆ ತೀವ್ರವಾದ ಎದೆನೋವು ಶುರುವಾಗಿದೆ. ಇದನ್ನು ತಿಳಿದ ಬಸ್ ನಲ್ಲಿದ್ದ ಪ್ರಯಾಣಿಕ ಸಮಯ ಪ್ರಜ್ಞೆ ಮೆರೆದಿದ್ದಾರೆ. ಬಸ್ಸಿನಲ್ಲಿದ್ದ ನ್ಯಾಯವಾದಿ ನೆಲ್ಯಾಡಿಯ ಇಸ್ಮಾಯೀಲ್ ಎಂಬವರ ಪುತ್ರ ಸಲ್ಮಾನುಲ್ ಫಾರಿನ್ ತಕ್ಷಣವೇ ಚಾಲಕನತ್ತ ದೌಡಾಯಿಸಿ ಬಸ್ ಅನ್ನು ನಿಧಾನಕ್ಕೆ ಹತೋಟಿಗೆ ತಂದು ರಸ್ತೆ ಬದಿಗೆ ನಿಲ್ಲಿಸಿ, ಜನರ ಜೀವ ಉಳಿಸಿದ್ದಾರೆ. ಉಪ್ಪಿನಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಬಳಿಕ ಸಾರಿಗೆ ನಿಯಂತ್ರಕರ ಸಹಕಾರದಿಂದ ಬಸ್ ಅನ್ನು ಉಪ್ಪಿನಂಗಡಿ ಬಸ್ ನಿಲ್ದಾಣಕ್ಕೆ ತಂದಿಡಲಾಗಿದೆ.

Bantwal: A man’s body was found in a well!- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 179

You cannot copy content of this page