ಮಡಿಕೇರಿ: Tulu Times l ಎಂಪೀರಿಯಾ ಎಂಟರ್ಟೈನ್ಮೆಂಟ್ ನಿರ್ಮಾಣದ ‘ಕೋವಿ ಮತ್ತು ಕೊಳಲು’ ಚಿತ್ರದ ಮುಹೂರ್ತ ಮೇ 15ರಂದು ಬೆಳಗ್ಗೆ 9.15ಕ್ಕೆ ರಾಜಾಸೀಟ್ನಲ್ಲಿ ನಡೆಯಲಿದೆ ಎಂದು ನಿರ್ದೇಶಕ ಬಾಸುಮ ಕೊಡಗು ತಿಳಿಸಿದರು.
ಮಡಿಕೇರಿಯಲ್ಲಿ ಇಂದು (ಮೇ.13) ನಡೆದ ಪ್ರೆಸ್ ಮೀಟ್ ನಲ್ಲಿ ಮಾತನಾಡಿದ ಇವರು, ಮಡಿಕೇರಿಯಿಂದ ಜಾಲ್ಲೂರುವರೆಗೆ ಚಿತ್ರೀಕರಣ ನಡೆಯಲಿದ್ದು, ಗುರುರಾಜ ಮಾರ್ಪಳ್ಳಿಯವರ ‘ಗರ್ಭ’ ಕಾದಂಬರಿ ಆಧಾರಿತ ಚಿತ್ರವು ಕಲೆ-ಹಣದ ಸಂಘರ್ಷ ಕಥೆ ಹೊಂದಿದೆ ಎಂದು ಹೇಳಿದರು.

ಶೌರ್ಯತೇಜ ಚಿತ್ರಕಥೆ, ದೃಶಾ ಕೊಡಗು ಛಾಯಾಗ್ರಹಣ ಮಾಡಲಿದ್ದು, ಅಕ್ಷತಾ ಪಾಂಡವಪುರ, ನವೀನ್ ಪಡೀಲ್, ಮೋಹನ್ ಶೇಣಿ, ಡಿಂಗ್ರಿ ನರೇಶ್ ಅಭಿನಯಿಸಲಿದ್ದು, ಮಾನ್ಯ ಕುಮಾರ್ ನಾಯಕಿಯಾಗಿ ಪರಿಚಯವಾಗುತ್ತಿದ್ದಾರೆ. ಜೊತೆಗೆ, ಹೇಮಂತ್ ಕುಲಾಲ್, ನಿಶಾನ್ ಕೃಷ್ಣ ಭಂಡಾರಿ ಭಾಗವಹಿಸಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಲೋಕೇಶ್ ಊರುಬೈಲು, ಬಿ.ಡಿ.ಕುಮಾರ್, ಶೌರ್ಯತೇಜ, ತ್ರಿಶಾಂಕ್ ಉಪಸ್ಥಿತರಿದ್ದರು.

‘Kovi and Kolulu’ to be shot from Madikeri to Jalsur – ತುಳು ಟೈಮ್ಸ್
ಇದನ್ನೂ ಓದಿ :ಉದ್ಯೋಗದ ಆಸೆ, ವಂಚಕರಿಗೆ ಅವಕಾಶ: ಲಿಂಕ್ಡಿನ್ ವರದಿಯಲ್ಲಿ ಆತಂಕಕಾರಿ ಮಾಹಿತಿ
===
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://www.youtube.com/live/4pEuD7fDOuo?si=zI2lMHnxZZJbop8t











