ಬೆಳ್ತಂಗಡಿ: Tulu Times | ವೃದ್ಧ ರೊಬ್ಬರು ಮನೆಯಿಂದ ಕಾಣೆಯಾಗಿ, ಮನೆಗೆ ಮತ್ತೆ ವಾಪಾಸಾಗದೆ ಇದ್ದರು. ಈ ಬಗ್ಗೆ ಮನೆಮಂದಿ ಪೊಲೀಸರಿಗೆ ದೂರು ಕೂಡ ಕೊಟ್ಟಿದ್ದರು, ಇದೀಗ ವೃದ್ಧ ಮರಳಿ ಮತ್ತೆ ಮನೆಗೆ ಬಂದಿದ್ದಾರೆ ಎನ್ನಲಾಗಿದ್ದು, ವೇಣೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ನಾಪತ್ತೆ ಪ್ರಕರಣ ಸುಖಾಂತ್ಯ ಕಂಡಿದೆ.
ಈ ವೃದ್ದನಿಗೆ ಮಾನಸಿಕ ಖಿನ್ನತೆ ಇತ್ತು ಎನ್ನಲಾಗಿದೆ. ವೃದ್ಧನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ತಾಲೂಕಿನ ಕೊಕ್ರಾಡಿ ಗ್ರಾಮದಲ್ಲಿ ಒಬ್ಬರೇ ವಾಸವಾಗಿದ್ದ ರಾಘು ಶೆಟ್ಟಿ @ ಅನ್ನೋಜಿ(70) ಹಲವು ವರ್ಷಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಇದವರಿಗೆ ಔಷದಿ ಇದ್ದು. ಕಳೆದ ಒಂದೂವರೆ ವರ್ಷಗಳಿಂದ ತನ್ನ ಚಿಕ್ಕಪ್ಪನೊಂದಿಗೆ ವಾಸವಾಗಿದ್ದರು. ಜ.18 ರಂದು ಸಂಜೆ 3 ಗಂಟೆಗೆ ಯಾರು ಇಲ್ಲದ ವೇಳೆಗೆ ಮನೆಯಿಂದ ಹೊರಹೋದವರು ವಾಪಸ್ ಮನೆಗೆ ಬಾರದೆ ಕಾಣೆಯಾಗಿದ್ದರು. ಎಲ್ಲಾ ಕಡೆ ಹುಡುಕಾಟ ನಡೆಸಿದರೂ ಪತ್ತೆಯಾಗದ ಕಾರಣ ವೇಣೂರು ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತು. ಜ.21 ರಂದು ಇವರ ಮಗ ಹೊಸಂಗಡಿ ಗ್ರಾಮದ ಕುರ್ಲೊಟ್ಟು ನಿವಾಸಿ ಅಶೋಕ್ ಶೆಟ್ಟಿ ದೂರು ನೀಡಿದ್ದರು. ಜ.23 ರಂದು ಮಧ್ಯಾಹ್ನದ ವೇಳೆಗೆ ಮರಳಿ ಮನೆಯತ್ತ ಬಂದಿದ್ದಾರೆ. ವೃದ್ದ ರಾಘು ಶೆಟ್ಟಿ @ ಅನ್ನೋಜಿ (70) ಇವರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಉಡುಪಿ: ಟ್ರಕ್ ನಡಿ ಸಿಲುಕಿ ಬೈಕ್ ಸವಾರ ಭೀಕರ ಸಾವು
ಉಡುಪಿ: ಪ್ರತ್ಯೇಕ ಪ್ರಕರಣದಲ್ಲಿ,ಉಳ್ಳೂರು ಕೆ.ಜಿ ರೋಡ್ ಬಳಿ 14 ಚಕ್ರಗಳ ಟ್ರಕ್ಕಿನ ಚಕ್ರದಡಿ ಸಿಲುಕಿ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ನಡೆದಿದೆ. ಚಕ್ರದಡಿ ಸಿಲುಕಿದ ಬೈಕ್ ಸವಾರನ ದೇಹ ಛಿದ್ರಗೊಂಡಿದ್ದು, ದೇಹದಿಂದ ರುಂಡ ಬೆರ್ಪಟ್ಟು ಚಕ್ರದಡಿ ಸಿಲುಕಿಕೊಂಡಿರುವ ಭೀಕರ ದೃಶ್ಯ ಎಂತವರಿಗೂ ಅಚ್ಚರಿ ತಂದಿದೆ. ಮೃತ ಸವಾರ ಬ್ರಹ್ಮರ ಮಟಪಾಡಿಯ ನಿವಾಸಿ ಎನ್ನಲಾಗಿದೆ.
ಶವ ತೆರವು ಹಾಗೂ ಅಜ್ಜರಕಾಡು ಜಿಲ್ಲಾಸ್ಪತ್ರೆಯ ಮರಣೋತ್ತರ ಪರೀಕ್ಷಾ ಕೇಂದ್ರಕ್ಕೆ ಸಾಗಿಸಲು ಸಮಾಜಸೇವಕ ನಿತ್ಯಾನಂದ ಒಳಕಾಡು, ಮತ್ತು ಬ್ರಹ್ಮಾವರದ ಅಂಬುಲೆನ್ಸ್ ಚಾಲಕ ನೆರವಾದರು. ಘಟನಾ ಸ್ಥಳಕ್ಕೆ ಬಂದು ಬ್ರಹ್ಮಾವರ ಆರಕ್ಷಕ ಠಾಣೆಯ ಮುಖ್ಯ ಆರಕ್ಷಕ ಮಹಾಲಿಂಗ ಮಹಜರು ಪ್ರಕ್ರಿಯೆ ನಡೆಸಿದರು.
Belthangady: Missing elderly woman arrives at home..!- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ:https://www.youtube.com/@tulutimess











