ಬ್ರೇಕಿಂಗ್ ನ್ಯೂಸ್
ಕರ್ನಾಟಕ

Mahanati : ‘ಮಹಾನಟಿ ಸೀಸನ್ – 2’ ಚಿನ್ನದ ಕಿರೀಟ ಮುಡಿಗೇರಿಸಿಕೊಂಡ ಮಂಗಳೂರಿನ ವಂಶಿ ರತ್ನಕುಮಾರ್

Mahanati : ಮಹಾನಟಿ ಸೀಸನ್ – 2 ನಲ್ಲಿ ಮಂಗಳೂರಿನ‌ ವಂಶಿ ರತ್ನಕುಮಾರ್ ವಿಜಯಶಾಲಿಯಾಗಿದ್ದಾರೆ. ವೈಟ್ ಗೋಲ್ಡ್ ವತಿಯಿಂದ ಕೊಡಲ್ಪಡುವ 15 ಲಕ್ಷ ಮೌಲ್ಯದ ಕಿರೀಟವನ್ನು ತನ್ನ ಮುಡಿಗೇರಿಸಿಕೊಂಡಿರುತ್ತಾರೆ. ಇದರ ಮೊದಲ ರನ್ನರ್ ಅಪ್ ಆಗಿ ಬೆಳಗಾವಿಯ ವರ್ಷಾ ಡಿಗ್ರಜೆ ಯವರಿಗೆ ಜಾರ್ ಆ್ಯಪ್ ವತಿಯಿಂದ ರೂ.10 ಲಕ್ಷ ನಗದು ಬಹುಮಾನ ಪಡೆದುಕೊಂಡಿದ್ದು, ಹಾಗೆಯೇ, ಎರಡನೇ ರನ್ನರ್ ಅಪ್ ಮೈಸೂರಿನ ಶ್ರೀಯ ಅಗಮ್ಯ ಅವರಿಗೂ ನಗದು ಬಹುಮಾನ ಸಿಕ್ಕಿರುತ್ತದೆ.

ಮಹಾ ನಟಿ ಕಾರ್ಯಕ್ರಮವು ಝೀ ಕನ್ನಡ ವಾಹಿನಿಯ ಹೊಸ ಪ್ರಯತ್ನವಾಗಿದ್ದು, ಸಿನೆಮಾ ರಂಗ ಪ್ರವೇಶಿಸಲು ಬಯಸುವ ಪ್ರತಿಭಾವಂತ ನಟಿಯರನ್ನು ಪರಿಚಯಿಸುವ ಉದ್ದೇಶದಿಂದ ನಿರ್ಮಿಸಲಾದ ಕಿರುತೆರೆಯ ಹೊಚ್ಚ ಹೊಸ ಕಾರ್ಯಕ್ರಮ ಈಗಾಗಲೇ ಮಹಾನಟಿ ಸೀಸನ್ ಒಂದು ಕಳೆದಿದ್ದು ಇದೀಗಾ ಮಹಾನಟಿ ಸೀಸನ್ ಎರಡರ ಸಕ್ಸಸ್ ಅನ್ನು ಪಡೆದುಕೊಂಡಿದೆ.
ಇದರಲ್ಲಿ ಅನೇಕ ಸ್ಪರ್ಧಿಗಳು ಭಾಗವಹಿಸಿದ್ದು ಒಬ್ಬರಕ್ಕಿಂತ ಒಬ್ಬರು ಪ್ರತಿಭಾವಂತರಾಗಿದ್ದು, ನಟನೆಯಲ್ಲಿ ವಿಭಿನ್ನವಾಗಿ ತಮ್ಮನ್ನು ತಾವು ಪ್ರೇಕ್ಷಕರಿಗೆ ಪರಿಚಯಿಸಿಕೊಂಡಿದ್ದರು. ಸದಾ ಕನ್ನಡದ ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತಾ ಬಂದಿರುವ ಝೀ ಕನ್ನಡ ಮಹಾನಟಿ ಸೀಸನ್ 2ನ ಮೂಲಕ ಮತ್ತೊಮ್ಮೆ ಯುವ ಪ್ರತಿಭೆಗಳಿಗೆ ಅವಕಾಶಗಳನ್ನು ಕಲ್ಪಿಸಿ ಕನ್ನಡ ಸಿನಿಮಾರಂಗಕ್ಕೆ ಪರಿಚಯಿಸುತ್ತಾ ಬೆಳ್ಳಿತೆರೆಯಲ್ಲಿ ಅಭಿನಯದ ಚಾಪು ಮೂಡಿಸಿರುವ ಮಹಾನಟಿ ಕಾರ್ಯಕ್ರಮ ಅತ್ಯುತ್ತಮವಾಗಿ ಮೂಡಿ ಬಂದಿರುತ್ತದೆ.

5 ನಟಿಯರು ಮಹಾನಟಿ ಸೀಸನ್ 2 ನಲ್ಲಿ ಫೈನಲ್ ಹಂತಕ್ಕೆ ಬಂದಿದ್ದರು. ಅದರಲ್ಲಿ ಮಾನ್ಯ ರಮೇಶ್, ವರ್ಷಾ ಡಿಗ್ರಜೆ, ವಂಶಿ ರತ್ನಕುಮಾರ್, ಶ್ರೀಯ ಅಗಮ್ಯ ಹಾಗೂ ಭೂಮಿಕ ತಮ್ಮೇಗೌಡರು ಭಾಗವಹಿಸಿದ್ದರು. ಥೀಯೇಟರ್ ನಲ್ಲಿ ಪ್ರಸಾರವಾದ ಕಿರುಚಿತ್ರಗಳು ತಾವು ತೋರಿದ ನಟನೆಯ ಸಮರ್ಪಣೆ, ಜೊತೆಗೆ ನಿರ್ದೇಶಕರು ಹೇಳಿದಂತೆ ಕಥೆಗೆ ಅರ್ಥವನ್ನು ನೀಡಿದ ನಟಿಯರು ತೀರ್ಪುಗಾರರ ಮೆಚ್ಚುಗೆಗೂ ಪಾತ್ರರಾಗಿದ್ದರು.

ಮಹಾನಟಿ ಸೀಸನ್ 2 ಲನ ತೀರ್ಪುಗಾರಿಕೆಯು ನ್ಯಾಯಯುತವಾಗಿದ್ದು, ಇದರಲ್ಲಿ ಗೆದ್ದಿರುವಂತಹ ವಂಶಿ ರತ್ನಕುಮಾರ್ ಅವರು ಮಾತನಾಡಿ, ತುಂಬಾ ಖುಷಿಯಾಗಿದೆ‌ ನನಗೆ ಈ ಬಹುಮಾನವನ್ನು ಪಡೆದುಕೊಂಡು. ಬಿ ಸರೋಜಾ ದೇವಿ ಅವರನ್ನು ನೋಡಿಲ್ಲ ನಾನು ಆದರೆ, ಅವರ ನಟನೆಯನ್ನು ನೋಡಿಕೊಂಡು ಬಂದಿದ್ದೇನೆ. ಈ ಟ್ರೋಫಿ ಮೂಲಕ ಅವರ ಆಶೀರ್ವಾದ ನನಗೆ ಸಿಕ್ಕಂತಾಗಿದೆ. ನಾನು ಸಿನಿಮಾದಲ್ಲಿ ನಟಿಸಬೇಕು ಎಂಬ ಕನಸಿಗೆ ಇದೊಂದು ಸಣ್ಣ ಹೆಜ್ಜೆಯಾಗಿದೆ. ನಿಮ್ಮೆಲ್ಲರ ಆಶೀರ್ವಾದ ಬೇಕು ಎಂದಿದ್ದಾರೆ.

ಇದನ್ನೂ ಓದಿ :Ugram Manju: ಸರಳವಾಗಿ ಎಂಗೇಜ್‌ ಮೆಂಟ್‌ ಮಾಡಿಕೊಂಡ ನಟ ಉಗ್ರಂ ಮಂಜು..!

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/zBY4CXdK86U?si=njDy5b6YvC72mp8Y

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 176

You cannot copy content of this page