ಬ್ರೇಕಿಂಗ್ ನ್ಯೂಸ್
ಕರ್ನಾಟಕಮಂಗಳೂರು

ಕಾರ್ಕಳದಲ್ಲಿ ವೃದ್ಧರೊಬ್ಬರು ನೇಣಿಗೆ ಶರಣು!

ಕಾರ್ಕಳ:Tulu Times | ಅಜೆಕಾರು ಮರ್ಣೆ ಗ್ರಾಮದಲ್ಲಿ ವೈದ್ಯರೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ದೇವರಾಯ ಹೆಗ್ಡೆ (80) ಮೃತ ದುರ್ದೈವಿಯಾಗಿದ್ದಾರೆ.

ಇದನ್ನೂ ಓದಿ: ಪ್ರೀತಿಗಾಗಿ ‘ಸೂರ್ಯ’ನ ಸಾಹಸ.. ಅತ್ತೆ ಮಗಳ ಹಾಡು ಬಿಡುಗಡೆ..!

ದೇವರಾಯ ಹೆಂಡತಿ ಒಂದು ವರ್ಷದ ಹಿಂದೆ ನಿಧನರಾಗಿದ್ದಾರೆ. ದೇವರಾಯ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಜ. 15ರ ರಾತ್ರಿ ಅವರು ಊಟ ಮಾಡಿ ಮಲಗಿ, ಜ.16ರ ಬೆಳಗ್ಗೆ, ಸೊಸೆ ಮನೆಯ ಹಿಂಬಾಗಿಲು ತೆರೆದು ಹೊರಗೆ ಹೋದಾಗ ಮನೆಯ ಹಿಂಬದಿಯ ಮಾಡಿನ ಪಕ್ಕಾಸಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾನಸಿಕ ಖಿನ್ನತೆಯಿಂದ  ದೇವರಾಯ ಹೆಗ್ಡೆ  ಜೀವನದಲ್ಲಿ ಜಿಗುಪ್ಪೆಗೊಂಡು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮಗ ದಾಮೋದರ ಹೆಗ್ಡೆ ದೂರು ನೀಡಿದ್ದಾರೆ.  ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಇದನ್ನೂ ಓದಿ:‌ ಗ್ರೀನ್‌ಮೆಟ್ರಿಕ್ ವಿಶ್ವವಿದ್ಯಾಲಯ ರ‍್ಯಾಂಕಿಂಗ್‌ : ಭಾರತದಲ್ಲಿ ಮೂರನೇ ಸ್ಥಾನ ಪಡೆದ ಮಂಗಳೂರು ವಿಶ್ವವಿದ್ಯಾಲಯ

ಮಂಗಳೂರು: ಸೋಷಿಯಲ್‌ ಮೀಡಿಯಾದಲ್ಲಿ ಪ್ರಚೋದನಕಾರಿ ಪೋಸ್ಟ್ ಹಾಕಿದವರ ಬಂಧನ!

ಮಂಗಳೂರು: ಸೋಷಿಯಲ್ ಮೀಡಿಯಾದಲ್ಲಿ ಪ್ರಚೋದನಕಾರಿ ಪೋಸ್ಟ್ ಹಾಕಿದ್ದ ಇಬ್ಬರ ವಿರುದ್ಧ ಮಂಗಳೂರಿನಲ್ಲಿ ಎಫ್‌ಐಆರ್ ದಾಖಲಿಸಿ ಓರ್ವನ ಬಂಧಿಸಿದ್ದಾರೆ.

ಕಾನೂನಿನ ಪ್ರಕಾರ ಗಡಿವಾರು ಮಾಡಲಾಗುವುದು ಎಂದು ಪೊಲೀಸರು ಹೇಳಿಕೆ!

ಮಂಗಳೂರಿನಲ್ಲಿ ಭಾರತೀಯ ವಲಸೆ ಕಾರ್ಮಿಕನ ಮೇಲೆ ಇಂತಹ ದಾಳಿ ನಡೆದಿರುವುದನ್ನು ನಾವು ಈಗಾಗಲೇ ನೋಡಿದ್ದೇವೆ ಮತ್ತು ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಕೆಲವು ಜನರು ವಾಟ್ಸಾಪ್‌ನಲ್ಲಿ ಸಂದೇಶಗಳನ್ನು ಪೋಸ್ಟ್ ಮಾಡುತ್ತಿದ್ದಾರೆ, ಇದು ಅಮಾಯಕರ ವಿರುದ್ಧ ದಾಳಿಗೆ ಕಾರಣವಾಗಬಹುದು. ಈ ಕುಟುಂಬದ ಹಿನ್ನೆಲೆಯನ್ನು ನಾವು ವರಿಶೀಲಿಸಿದ್ದೇವೆ ಮತ್ತು ಅವರ ಹೆಸರಿನಲ್ಲಿ 2014ರಲ್ಲಿ ಆಸ್ತಿ. ಖರೀದಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ. ಸರಿಯಾದ ಪರಿಶೀಲನೆಯ ನಂತರ ಅವರ ಮೇಲೆ ಕಾನೂನು ಕ್ರಮ ಜರುಗಿಸಿ ಕಾನೂನಿನ ಪ್ರಕಾರ ಗಡಿಪಾರು ಮಾಡಲಾಗುವುದು, ಬಾಂಗ್ಲಾದೇಶದಿಂದ ಬಂದಿರುವ ಶಂಕಿತರ ಬಗ್ಗೆ ಯಾರಿಗಾದರೂ ಯಾವುದೇ ಮಾಹಿತಿ ಇದ್ದರೆ, ಅವರು ಠಾಣೆಗಳಲ್ಲಿ ಅಥವಾ ಎಸಿಪಿಗಳಿಗೆ ಅಥವಾ ಸಿಪಿ ಕಚೇರಿಗೆ ಮಾಹಿತಿ ನೀಡಬಹುದು ಮತ್ತು ಪೊಲೀಸರು ಹೇಳಿದ್ದಾರೆ.

An elderly man hangs himself in Karkala!- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 215

You cannot copy content of this page