ಎಐ : Tulu Times | ಎಐ ಅಂದ್ರೆ ಸಾಮಾನ್ಯವಾದ ಟೆಕ್ನಾಲಜಿಯಲ್ಲ. ಇದರಲ್ಲಿ ಏನು ಬೇಕಾದರೂ, ಯಾವುದನ್ನು ಬೇಕಾದರೂ ಸೃಷ್ಟಿಸಿ ಜನರನ್ನು ನಂಬಿಸಬಹುದು ಎಂಬುದನ್ನು ಈಗಾಗಲೇ ಸಾಬೀತು ಮಾಡಿದೆ. ಕೃತಕ ಬುದ್ಧಿಮತ್ತೆ ಅಥವಾ ಎಐ ಎನ್ನುವುದು ಮಾನವನಂತೆ ಯೋಚಿಸುವ, ಕಲಿಯುವ, ನಿರ್ಧಾರ ತೆಗೆದುಕೊಳ್ಳುವ ಮತ್ತು ಕೆಲಸಗಳನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿರುವ ಕಂಪ್ಯೂಟರ್ ತಂತ್ರಜ್ಞಾನ. ಇಂದಿನ ಡಿಜಿಟಲ್ ಯುಗದಲ್ಲಿ ಬ್ಯಾಂಕಿಂಗ್, ಕೃಷಿ, ವೈದ್ಯಕೀಯ, ಸಂವಹನ, ಸಾರಿಗೆ, ಶಿಕ್ಷಣ, ಉದ್ಯಮ ಇತ್ಯಾದಿ ಎಲ್ಲಾ ಕ್ಷೇತ್ರಗಳಲ್ಲೂ ಎಐ ಮಹತ್ವದ ಪಾತ್ರ ವಹಿಸುತ್ತಿದೆ.
ಇತ್ತೀಚೆಗೆ ಬಿಡುಗಡೆಯಾದ ಎಐ ನ್ಯಾನೋ ಬನಾನಾ ಟೂಲ್‌ನ ಸಾಮರ್ಥ್ಯವನ್ನು ಪರೀಕ್ಷಿಸಲು ಹೋದ ಉದ್ಯೋಗಿಯೊಬ್ಬರು, ಅದನ್ನು ತಮ್ಮ ರಜೆ ಪಡೆಯುವ ತಂತ್ರವನ್ನಾಗಿ ಬಳಸಿಕೊಂಡ ಘಟನೆ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ನೆಟ್ಟಿಗರು ಎಐನಿಂದ ಎಲ್ಲವೂ ಸಾಧ್ಯ ಎಂದು ಕಾಮೆಂಟ್ ಮಾಡುತ್ತಿದ್ದಾರೆ
ಕೆಲಸಕ್ಕೆ ಹೋಗುತ್ತಿದ್ದ ಉದ್ಯೋಗಿಯೊಬ್ಬರು ರಜೆ ಪಡೆಯಲು ಕೈಗೆ ಗಾಯವಾಗಿರುವ ಹಾಗೆ ನ್ಯಾನೊ ಬನಾನಾ ಎಐನಲ್ಲಿ ಕ್ರಿಯೇಟ್ ಮಾಡಿ ಹೇಗೆ ರಜೆ ಗಿಟ್ಟಿಸಿಕೊಂಡರು, ಇದನ್ನು ಮ್ಯಾನೇಜರ್, ಹೆಚ್‌ಆರ್ ಹೇಗೆ ನಂಬಿಕೊಂಡರು ಎಂಬ ಬಗ್ಗೆ ಲಿಂಕ್ಡಿನ್ ಪೋಸ್ಟ್‌ವೊಂದರಲ್ಲಿ ಹಂಚಿಕೊಂಡಿರುವುದು ವೈರಲ್ ಆಗಿದೆ.
ಮೊದಲು ಉದ್ಯೋಗಿ, ಯಾವುದೇ ಕಲೆ, ಗಾಯವಿರದ ಕೈ ಫೋಟೊವನ್ನು ತನ್ನ ಕೈ ಫೋಟೋವನ್ನು ತೆಗೆದು,ನ್ಯಾನೋ ಬನಾನಾ’ ಟೂಲ್ ಓಪನ್ ಮಾಡಿ, ಕೈಗೆ ಗಾಯವಾದಂತೆ ತೋರಿಸಲು ಒಂದು ಸಣ್ಣ ಪ್ರಾಂಪ್ಟ್ ಹಾಕುತ್ತಾನೆ. ಕೇವಲ ಕೆಲವೇ ಸೆಕೆಂಡುಗಳಲ್ಲಿ, ಆ ಟೂಲ್ ನಂಬಲಸಾಧ್ಯವಾದ ರೀತಿಯಲ್ಲಿ ಫೋಟೋವನ್ನು ಎಡಿಟ್ ಮಾಡಿತು. ಅದರಲ್ಲಿ ನಿಜವಾಗಿಯೂ ಗಾಯವಾಗಿರುವಂತೆ, ಕೆಂಪಾದ ಚರ್ಮ ಮತ್ತು ನೈಜವಾದ ಗಾಯದ ಟೆಕ್ಸ್ಚರ್ ಕಾಣಿಸುತ್ತಿತ್ತು. ತಮಾಷೆಗಾಗಿ ಮಾಡಿದ ಫೋಟೋವನ್ನು ಕೊನೆಗೆ ಆತ ತನ್ನ ಕಂಪನಿಯ ಎಚ್‌ಆರ್‌ಗೆ ಕಳುಹಿಸಿ, ತಾನು ಬೈಕ್‌ನಿಂದ ಬಿದ್ದಿರುವುದಾಗಿ ಸುಳ್ಳು ಹೇಳಿದನು. ಫೋಟೋದಲ್ಲಿನ ಗಾಯವನ್ನು ಕಂಡು ಮರುಗಿದ ಹೆಚ್‌ಆರ್ ತಕ್ಷಣವೇ ಮ್ಯಾನೇಜರ್‌ಗೆ ವಿಷಯ ತಿಳಿಸಿ, ಕಾಳಜಿಯುಳ್ಳ ಸಂದೇಶದೊಂದಿಗೆ ಆತನ ರಜೆಯನ್ನು ಮಂಜೂರು ಮಾಡಲಾಯಿತು. ಎಐನಿಂದ ರಚನೆಯಾದ ಫೋಟೋನ ಅಥವಾ ನಿಜವಾದದ್ದ ಯಾವುದೇ ಮಾಹಿತಿಯ ಮೇಲ್ವಿಚಾರಣೆ ಮಾಡದೆ ರಜೆ ನೀಡಿದರು. ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ಇನ್ನು ಮುಂದೆ ಯಾರನ್ನೂ ನಂಬುವಂತಿಲ್ಲ ಎನ್ನುವ ಸಂದೇಶವನ್ನು ಈ ಘಟನೆಯಿಂದ ತಿಳಿಯಬಹುದು. Employee gets leave from AI Nano Banana tool – ತುಳು ಟೈಮ್ಸ್
ಇದನ್ನೂ ಓದಿ :ಸಮವಸ್ತ್ರ ಧರಿಸಿ ಶಾಲೆಗೆ ಹೋಗಬೇಕಿದ್ದ ಮಕ್ಕಳು ಹತ್ತಿ ತೆಗೆಯಲು ಜಮೀನಿನ ಕಡೆ…!
======
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/9__hBRPRAJ0?si=uR-Fro929bU1qXNb











