ಸ್ಯಾಂಡಲ್ ವುಡ್: Tulu Times | ಇಂದು ಚ್ಯಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬದ ಸಂಭ್ರಮ. ಸದ್ಯ ಜೈಲಿನಲ್ಲಿರುವ ದರ್ಶನ್ ಗೆ ಅಬಿಮಾನಿಗಳು ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಇನ್ನುತನ್ನ ಪತ್ನಿ ವಿಜಯಲಕ್ಷ್ಮಿ ಕೇಕ್ ನಲ್ಲಿ ಸ್ಪೆಷಲ್ ಮೆಸೇಜ್ ಒಂದನ್ನು ತಿಳಿಸಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ದರ್ಶನ್ ಪರಪ್ಪನ ಅಗ್ರಹಾರ ಕೇಂದ್ರೀಯ ಕಾರಾಗೃಹದಲ್ಲಿದ್ದಾರೆ. ಆದರೂ ಅವರ ಕುಟುಂಬ, ಸ್ನೇಹಿತರು, ಅಭಿಮಾನಿಗಳ ಸಂಭ್ರಮ ಕಡಿಮೆಯಾಗಿಲ್ಲ. ದರ್ಶನ್ ಪತ್ನಿ ವಿಜಯಲಕ್ಷ್ಮೀ ಪತಿ ದರ್ಶನ್ಗೆ ಸ್ಪೆಷಲ್ ವಿಷ್ ಮಾಡಿದ್ದಾರೆ. ಇನ್ನು ದರ್ಶನ್ ಪತ್ನಿ ಪತಿ ದರ್ಶನ್ ಮತ್ತು ಮಗ ವಿನೀಶ್ ಜೊತೆಗಿರುವ ಫೋಟೋ ಹಂಚಿಕೊಂಡು ಅಲ್ಲಿರುವ ಕೇಕ್ನ್ಲೂ ಸ್ಪೆಷಲ್ ಮೆಸೇಜ್ ನೀಡಿದ್ದಾರೆ. ಇದನ್ನು ಕಂಡು ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ದರ್ಶನ್ ಜೀವನದಲ್ಲಿ ಮೊದಲ ಬಾರಿಗೆ ಜೈಲಿನಲ್ಲೇ ಜನ್ಮದಿನ ಆಚರಿಸುತ್ತಿದ್ದು, ಹೆಚ್ಚಿನ ಸಂಭ್ರಮಕ್ಕೆ ಅವಕಾಶವಿಲ್ಲ.
ಇದನ್ನೂ ಓದಿ: ‘ಡಾರ್ಕ್ ಶವರ್’ ಟ್ರೆಂಡ್ ಏನು? ಇದು ನಿದ್ರೆ ಬೇಗ ಬರಲು ಸಹಾಯ ಮಾಡುತ್ತದೆಯೇ?
ದರ್ಶನ್ ಹುಟ್ಟುಹಬ್ಬ ನಿಮಿತ್ತ ಇಂದು ಪತ್ನಿ ವಿಜಯಲಕ್ಷ್ಮೀ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಲಿದ್ದಾರೆ. ನಂತರ ವಿಶೇಷ ಅನುಮತಿ ಪಡೆದು ಜೈಲಿಗೆ ತೆರಳಿ ಪತಿಯನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಕೇಕ್ ಮೇಲೆ ಆನೆಯ ಚಿತ್ರವನ್ನು ಬಿಡಿಸಲಾಗಿದೆ. ದರ್ಶನ್ ಅವರಿಗೆ ಆನೆ ಎಂದರೆ ಬಹಳ ಇಷ್ಟ ಎಂದು ಎಲ್ಲರಿಗೂ ಗೊತ್ತು. ಈ ಕಾರಣದಿಂದ ಕೇಕ್‌ನಲ್ಲಿ ಆನೆಯನ್ನು ಇರಿಸಲಾಗಿದೆ. ಜೊತೆಗೆ ಒಂದು ಲವ್ ಮೆಸೇಜ್ ಕೂಡ ನೀಡಿದ್ದಾರೆ. ಪೋಸ್ಟ್‌ನಲ್ಲಿ ವಿಜಯಲಕ್ಷ್ಮೀ ಬರೆದಿರುವ ಮಾತುಗಳು ಭಾವುಕವಾಗಿವೆ. “ಪ್ರತಿ ದಿನವನ್ನೂ ಸಂಭ್ರಮಿಸುವ ವ್ಯಕ್ತಿಗೆ ಜನ್ಮದಿನದ ಶುಭಾಶಯಗಳು” ಎಂದು ಬರೆಯಲಾಗಿದೆ.
Darshan’s wife Vijayalakshmi’s special message on his birthday!- ತುಳುಟೈಮ್ಸ್











