Karthika Deepa : ಕಾರ್ತಿಕ ದೀಪೋತ್ಸವವು ಹಿಂದೂ ಸಂಪ್ರದಾಯದಲ್ಲಿ ಕಾರ್ತಿಕ ಮಾಸದಲ್ಲಿ ಆಚರಿಸಲಾಗುವ ಅತ್ಯಂತ ಪವಿತ್ರ ಮತ್ತು ಶುಭ ಆಚರಣೆಯಾಗಿದೆ. ಇದನ್ನು ಕಾರ್ತಿಕ ಮಾಸದ ದೀಪೋತ್ಸವ, ದೀಪಾವಳಿ ನಂತರದ ದೀಪಾರಾಧನೆ, ಅಥವಾ ತೈಲ ದೀಪೋತ್ಸವ ಎಂದೂ ಕರೆಯುತ್ತಾರೆ.
ಕಾರ್ತಿಕ ಮಾಸದ ಕೊನೆಯ ಸೋಮವಾರ ;
ಈ ತಿಂಗಳಲ್ಲಿ ದೀಪ ಹಚ್ಚುವುದರಿಂದ ಪಾಪಕ್ಷಯ, ಪುಣ್ಯ, ಆರೋಗ್ಯ, ಶಾಂತಿ ದೊರೆಯುತ್ತವೆ ಎಂಬ ನಂಬಿಕೆ ಇದೆ. ಹಾಗೆಯೇ, ಹೆಚ್ಚಾಗಿ ಶಿವನಿಗೆ ದೀಪ ಹಚ್ಚಿದರೆ ಅಜ್ಞಾನಾಂಧಕಾರದ ನಂಬಿಕೆಯಿದೆ. ಕಾರ್ತಿಕ ದೀಪೋತ್ಸವ ಒಂದು ಭಕ್ತಿ, ಪರಿಶುದ್ಧತೆ, ಬೆಳಕು ಮತ್ತು ಶುಭದ ಸಂಕೇತವಾಗಿದ್ದು, ಮನೆ ಮನೆಯಲ್ಲೂ ಮತ್ತು ದೇವಾಲಯಗಳಲ್ಲೂ ಅದ್ದೂರಿಯಾಗಿ ಆಚರಿಸುತ್ತಾರೆ.
ಕಾರ್ತಿಕ ಮಾಸದ ಕೊನೆಯ ಸೋಮವಾರವಾದ ಇವತ್ತು ಭಕ್ತರ ಮನೆ ಮನಗಳಲ್ಲೂ ಕಾರ್ತಿಕ ದೀಪ ಬೆಳಕು ಹರಡಿತ್ತು.
ಮರಳ ಸಿದ್ಧೇಶ್ವರ ಸ್ವಾಮಿಗೆ ಸಾವಿರದ ಎಂಟು ಲೀಟರ್ ಹಾಲಿನ ಅಭಿಷೇಕ ;
ಶಿವನ ದೇಗುಲಗಳಲ್ಲಿ ಕಳೆ ಕಟ್ಟಿರುವಂತಹ ಸಡಗರ ಸಂಭ್ರಮವನ್ನು ನೋಡುವುದೇ ಒಂದು ಹಬ್ಬ. ಮಲೆ ಮಾದೇಶ್ವರನ ದೇವಸ್ಥಾನದಲ್ಲಿ ಜನರು ಕಿಕ್ಕಿರಿದ ಸಂಭ್ರಮ ಇವತ್ತಿನ ದಿನ ಆಗಿತ್ತು. ಇಲ್ಲಿ ಕಾರ್ತಿಕ ಮಾಸದಲ್ಲಿ ದೀಪಾರಾಧನೆಗೆ ಬಹಳ ಮಹತ್ವವಿರುವ ಕಾರಣ ಹಲವಾರು ಭಕ್ತರು ಈ ದಿನದಂದು ಇಲ್ಲಿಗೆ ಆಗಮಿಸಿ ತಮ್ಮ ಮನೋಭಿಲಾಶವನ್ನು ಈಡೇರಿಸಿಕೊಳ್ಳುತ್ತಿದ್ದರು. ಇತ್ತ ಚಿಕ್ಕಬಳ್ಳಾಪುರದ ಮರಳ ಸಿದ್ಧೇಶ್ವರ ಸ್ವಾಮಿಗೆ ಸಾವಿರದ ಎಂಟು ಲೀಟರ್ ಹಾಲಿನ ಅಭಿಷೇಕವಾಗುತ್ತದೆ. ಅಲ್ಲದೇ,ಇವತ್ತು ಕಾರ್ತಿಕ ಮಾಸದ ಕೊನೆಯ ದಿನವಾದ ಕಾರಣ, ಭಕ್ತರ ಸಾಗರವೇ ಹರಿದು ಬಂದಿತ್ತು.
ಇದನ್ನೂ ಓದಿ :Belagavi Zoo : ಮರಣ ಮೃದಂಗವಾಗುತ್ತಿರುವ ಮೃಗಾಲಯ : ಸಾವಿನ ಸಂಖ್ಯೆ 31 ಕ್ಕೆ ಏರಿಕೆ…!
……
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/vXhwD33EPDk?si=KRIGAzO0rhTFKOng











