ಬ್ರೇಕಿಂಗ್ ನ್ಯೂಸ್
ಕರಾವಳಿಬಂಟ್ವಾಳ

Vittla: ಹನಿಟ್ರ್ಯಾಪ್‌ ಪ್ರಕರಣ – ಪ್ರಮುಖ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಮಂಜೂರು

Vittla: ಕೇರಳ ಮೂಲದ ವ್ಯಕ್ತಿಗೆ ಮದುವೆ ಮಾಡಿಸುವ ಆಮಿಷ ಒಡ್ಡಿ ಹನಿಟ್ರ್ಯಾಪ್ ಮಾಡಿ ಲಕ್ಷಾಂತರ ಹಣ ಸುಲಿಗೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ವಿಟ್ಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎಫ್‌ಐಆರ್‌ ದಾಖಲಾದರೂ ಪೊಲೀಸರು ಆರೋಪಿಗಳನ್ನು ಬಂಧಿಸಿಲ್ಲ ಎಂಬ ಕೂಗು ಕೇಳಿಬಂದಿತ್ತು. ಇದೀಗ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಮಂಜೂರಾಗಿದೆ.

ಕೇರಳ ಮೂಲದ ನಿವಾಸಿ, ಅರಬ್ ರಾಷ್ಟ್ರದಲ್ಲಿ ಉದ್ಯಮಿಯಾಗಿದ್ದ ಅಶ್ರಫ್ ಎಂಬವರನ್ನು ಹನಿ ಟ್ರ್ಯಾಪ್ ನಡೆಸಿ ಬರೋಬ್ಬರಿ 44.80 ಲಕ್ಷ ರೂ.ಗಳನ್ನು ಸುಲಿಗೆ ಮಾಡಿತ್ತು. ಈ ಪ್ರಕರಣದಲ್ಲಿ ಮೂವರು ಪ್ರಮುಖ ಆರೋಪಿಗಳಿಗೆ ಮಂಗಳೂರಿನ ಜಿಲ್ಲಾ ನ್ಯಾಯಾಲಯ ಷರತ್ತು ಬದ್ಧ ನಿರೀಕ್ಷಣಾ ಜಾಮೀನು ನೀಡಿದೆ.

ಕಡಂಬು ಬಶೀರ್, ಮಾಣಿ ಸೆಫಿಯಾ, ಸರಪುದ್ದೀನ್ ಸಹಿತ ಆರು ಜನರ ವಿರುದ್ಧ ವಿಟ್ಲ ಠಾಣೆಯಲ್ಲಿ ಅ.ಕ್ರಂ:145/ 2025ರಂತೆ ಪ್ರಕರಣ ದಾಖಲಾಗಿತ್ತು. ಮಂಗಳೂರಿನ ಎರಡನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಆರೋಪಿಗಳ ಪರವಾಗಿ ವಕೀಲೆ ಚೇತನಾ ಶೆಟ್ಟಿ ದಂಡೆ ವಾದ ಮಂಡಿಸಿದ್ದರು. ಹನಿ ಟ್ರ್ಯಾಪ್ ಸಂತ್ರಸ್ತ ಅಶ್ರಫ್ ಪರವಾಗಿ ಖಾಸಗಿ ವಕೀಲರಿಂದಲೂ ವಾದ ಮಂಡನೆ ಮಾಡಲಾಗಿತ್ತು.

ಪ್ರಕರಣದ ವಿವರ:
ಅಶ್ರಫ್ ಅವರನ್ನು ಮಂಗಳೂರಿನ ಸಿಟಿ ಸೆಂಟರ್ ಮಾಲ್ ಗೆ ಕರೆಸಿದ್ದ ಬಶೀರ್ ಕಡಂಬು, ಮಾಣಿಯಾ ಸೆಪಿಯಾ ತಂಡವು ಅಲ್ಲಿ ಹೆಣ್ಣು ತೋರಿಸಿದೆ. ಆದರೆ ಅಲ್ಲಿ ತೋರಿಸಿದ್ದ ಹುಡುಗಿ ಈಕೆ ಬೇಡ ಎಂದಿದ್ದರು.

ಆನಂತರ, ವಿಟ್ಲದ ಬಳಿಯ ತನ್ನದೇ ಮನೆಗೆ ಕರೆಸಿದ್ದ ಬಶೀರ್ ಕಡಂಬು, ಅಲ್ಲಿ ಒಬ್ಬಳು ಹುಡುಗಿಯನ್ನು ತೋರಿಸಿ ಜೊತೆಗೆ ಕೂರಿಸಿ ವಿಡಿಯೋ ಚಿತ್ರೀಕರಣ ಮಾಡಿದ್ದರು. ಆನಂತರ, ಅಶ್ರಫ್ ಮದುವೆಯಾಗಲು ಒಪ್ಪದೇ ಇದ್ದುದಕ್ಕೆ ನಿನ್ನ ಖಾಸಗಿ ವಿಡಿಯೋ ಇದೆಯೆಂದು ಬ್ಲಾಕ್ಮೇಲ್ ಮಾಡಿ ಲಕ್ಷಾಂತರ ಹಣ ಸುಲಿಗೆ ಮಾಡಿದ್ದಾರೆ.

ಮಂಗಳೂರಿನ ಎರಡನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಆರೋಪಿಗಳ ಪರವಾಗಿ ವಕೀಲೆ ಚೇತನಾ ಶೆಟ್ಟಿ ದಂಡೆ ವಾದ ಮಂಡನೆ ಮಾಡಿದ್ದಾರೆ.

ಹನಿ ಟ್ರ್ಯಾಪ್ ಸಂತ್ರಸ್ತ ಅಶ್ರಫ್ ಪರವಾಗಿ ಖಾಸಗಿ ವಕೀಲರಿಂದಲೂ ವಾದ ಮಂಡನೆ ಮಾಡಲಾಗಿತ್ತು. ಆದರೆ ಆರೋಪಿಗಳ ಪರ ವಾದ ಪುರಸ್ಕರಿಸಿದ ನ್ಯಾಯಪೀಠ, ಷರತ್ತಿಗೊಳಪಟ್ಟು ನಿರೀಕ್ಷಣಾ ಜಾಮೀನು ನೀಡಿದೆ.

ಇದನ್ನೂ ಓದಿ: ಅಬ್ಬಬ್ಬಾ.! ಈ ಎಮ್ಮೆ ಹಾಗೂ ಕುದುರೆಯ ಬೆಲೆ ಎಷ್ಟು ಕೋಟಿ ಗೊತ್ತಾ?

=====================================

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ:https://www.youtube.com/@tulutimess   

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 32

You cannot copy content of this page