ಬ್ರೇಕಿಂಗ್ ನ್ಯೂಸ್
ಕರ್ನಾಟಕ

Sports : ಈ ಬಾರಿ ಬಳ್ಳಾರಿಯಲ್ಲಿ ನಡೆಯಲಿದೆ ಹಿರಿಯರ ಕ್ರೀಡೋತ್ಸವ

Sports : ಕ್ರೀಡೆ ಮತ್ತು‌ ಕಲೆಗೆ ವಯಸ್ಸಿನ ಮಿತಿಯಿಲ್ಲ. ಇಲ್ಲಿ ಆಸಕ್ತರು ಯಾರೂ ಬೇಕಾದರೂ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಬಹುದಾಗಿದೆ. ಅವಕಾಶ ಸಿಕ್ಕಾಗೆಲ್ಲಾ ಅದನ್ನು ಉಪಯೋಗಿಸಿಕೊಳ್ಳುವುದು ಒಬ್ಬ ನಿಜವಾದ‌ ಕ್ರೀಡಾಪಟು/ಕಲಾವಿದನ ಹಕ್ಕಾಗಿರುತ್ತದೆ. ಹಾಗೆಯೇ ಇದೀಗ ಬಂದಿರುವ ಪ್ರಕಟಣೆಯ ಪ್ರಕಾರ, ಕರ್ನಾಟಕ ಹಿರಿಯ ಕ್ರೀಡಾಪಟುಗಳ 45ನೇ ರಾಜ್ಯಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟವು ಈ ವರ್ಷ ಬಳ್ಳಾರಿಯಲ್ಲಿ ಜರುಗಲಿದೆ.

ಹಿರಿಯರು ಕಿರಿಯರು ಸೇರಿದಂತೆ ಎಲ್ಲರೂ ನಿರೀ್ಕ್ಷಿಸಲಿರುವ ವೆಟ್ರನ್ಸ್ ಅಥ್ಲೆಟಿಕ್ ಅಸೋಸಿಯೇಷನ್ ಆಫ್ ಕರ್ನಾಟಕ (VAAK) ಅಂಗಸಂಸ್ಥೆಯಾಗಿರುವ ಬಳ್ಳಾರಿ ಜಿಲ್ಲಾ ವೆಟ್ರನ್ಸ್ ಅಥ್ಲೆಟಿಕ್ ಅಸೋಸಿಯೇಷನ್ ವತಿಯಿಂದ ನವೆಂಬರ್ 22 ಮತ್ತು 23 ರಂದು (ಶನಿವಾರ ಮತ್ತು ಭಾನುವಾರ) ಬಳ್ಳಾರಿ ಜಿಲ್ಲಾ ಕ್ರೀಡಾಂಗಣದಲ್ಲಿ ಈ ಕ್ರೀಡಾ ಮಹೋತ್ಸವ ನಡೆಯಲಿದೆ ಎಂದು ವರದಿಯಾಗಿರುತ್ತದೆ.

ವೆಟ್ರನ್ಸ್ ಅಥ್ಲೆಟಿಕ್ ಫೆಡರೇಷನ್ ಆಫ್ ಇಂಡಿಯಾಕ್ಕೆ ಸಂಯೋಜಿತವಾಗಿರುವ ಈ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಸುಮಾರು 300 ಪುರುಷ ಹಾಗೂ ಮಹಿಳಾ ಕ್ರೀಡಾಪಟುಗಳು ಭಾಗವಹಿಸುವ ನಿರೀಕ್ಷೆ ಇದೆ ಹಾಗೂ ಈ ಸ್ಪರ್ಧೆಗಳಲ್ಲಿ 30 ವರ್ಷದಿಂದ ಹಿಡಿದು 100 ವರ್ಷದವರೆಗಿನ ಹಿರಿಯ ಕ್ರೀಡಾಪಟುಗಳು ಪಾಲ್ಗೊಳ್ಳಲು ಅವಕಾಶವಿದೆ. ಭಾಗವಹಿಸುವ ಕ್ರೀಡಾಪಟುಗಳ ವಯಸ್ಸಿನ ಆಧಾರದ ಮೇಲೆ ಪ್ರತಿ ಐದು ವರ್ಷಗಳ ಅಂತರದಲ್ಲಿ ಪ್ರತ್ಯೇಕ ವಿಭಾಗಗಳನ್ನು ನಿಯೋಜಿಸಲಾಗುತ್ತದೆ. ಪ್ರತೀ ಕ್ರೀಡೆಗೂ ಕ್ರೀಡಾಪಟುಗಳನ್ನು ನಿಯಮಕ್ಕನುಸಾರ ಸೂಚಿಸಲಾಗುತ್ತದೆ.
ಈ ಕ್ರೀಡಾಕೂಟದಲ್ಲಿ 100 ಮೀಟರ್ ಓಟದಿಂದ ಹಿಡಿದು 5000 ಮೀಟರ್ ಓಟದವರೆಗೆ ಓಟದಲ್ಲಿಯೇ ವಿವಿಧ ಸ್ಪರ್ಧೆಗಳು ನಡೆಯಲಿವೆ. 65 ವರ್ಷ ಮೇಲ್ಪಟ್ಟವರಿಗೆ ಕೆಲವು ಸ್ಪರ್ಧೆಗಳನ್ನು ಕಡಿತಗೊಳಿಸಲಾಗುತ್ತದೆ. ಅವರಿಗೆ ದೇಹದ ಶಕ್ತಿಗನುಸಾರ‌ ಕ್ರೀಡೆಗಳು ಅವಲಂಬಿತವಾಗಿರುತ್ತದೆ. ಈ ಕ್ರೀಡಾಕೂಟದಲ್ಲಿ ಭಾಗವಹಿಸುವ ಎಲ್ಲಾ ಕ್ರೀಡಾಪಟುಗಳು ಮತ್ತು ತೀರ್ಪುಗಾರರಿಗೆ ಊಟ ಮತ್ತು ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ. ಸುಮಾರು 70 ಮಂದಿ ತೀರ್ಪುಗಾರರು ಭಾಗವಹಿಸುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.

ಈ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಇದೇ ವರ್ಷ ಡಿ. 13 ಮತ್ತು 14 ರಂದು ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ನಡೆಯಲಿರುವ ದಕ್ಷಿಣ ಭಾರತದ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶ ದೊರೆಯಲಿದೆ. ಪ್ರತಿ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಗಳಿಸಿದವರಿಗೆ ಬಹುಮಾನ ನೀಡಲಾಗುತ್ತದೆ. ಇದೊಂದು ವಿಶೇಷ ಕ್ರೀಡಾ ಸ್ಪರ್ಧೆಯಾಗಿದ್ದು ನೋಡುಗರಿಗೂ ಕ್ರೀಡಾ ಉತ್ಸಾಹವನ್ನು ಹೆಚ್ಚಿಸಬಲ್ಲ ಸುಂದರ ಕಾರ್ಯಕ್ರಮವಾಗಿರುತ್ತದೆ.

ಇದನ್ನೂ ಓದಿ :Vitla: ಚರಂಡಿಗೆ ಬಿದ್ದ ವ್ಯಕ್ತಿ ದುರ್ಮರಣ

………….

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/zBY4CXdK86U?si=njDy5b6YvC72mp8Y

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 223

You cannot copy content of this page