ಸುಳ್ಯ: Tulu Times l ಮಳೆಗಾಲದಲ್ಲಿ ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸಿ ಆರೋಗ್ಯವನ್ನು ಸಹಜವಾಗಿ ಕಾಪಾಡುವ ಉದ್ದೇಶದಿಂದ ಸುಳ್ಯದ ಕೆವಿಜಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ವಿಶೇಷ ‘ಕರ್ಕಾಟಕ ಚಿಕಿತ್ಸೆ’ ಆರಂಭಿಸಲಾಗಿದೆ. ಈ ವಿಶೇಷ ಚಿಕಿತ್ಸೆ ಆಗಸ್ಟ್ 15, 2026ರವರೆಗೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಆಯುರ್ವೇದದ ಪ್ರಕಾರ, ಮಳೆಗಾಲ ದೇಹದಲ್ಲಿ ವಾತ, ಪಿತ್ತ ಮತ್ತು ಕಫ ದೋಷಗಳಲ್ಲಿ ಅಸಮತೋಲನ ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ. ಈ ಹಿನ್ನೆಲೆಯಲ್ಲಿ ಕರ್ಕಾಟಕ ಚಿಕಿತ್ಸೆಯು ದೇಹವನ್ನು ಶುದ್ಧೀಕರಿಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಆರೋಗ್ಯವನ್ನು ಸುಧಾರಿಸಲು ನೆರವಾಗುತ್ತದೆ.

ಈ ಚಿಕಿತ್ಸಾ ಪ್ಯಾಕೇಜ್‌ನಲ್ಲಿ ತೈಲ ಮಸಾಜ್ (Oil Massage), ಕಿಝಿ (Kizhi), ಸ್ಟೀಮ್ ಬಾತ್, ಧಾರಾ, ಪಿಝಿಚಿಲ್, ಲೇಪನ ಸೇರಿದಂತೆ ವಿವಿಧ ಆಯುರ್ವೇದ ಚಿಕಿತ್ಸೆಗಳು ಲಭ್ಯವಿವೆ. ರೋಗಿಯ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಿದ ಬಳಿಕ ವೈದ್ಯರ ಸಲಹೆಯಂತೆ ಸೂಕ್ತ ಚಿಕಿತ್ಸೆಯನ್ನು ನೀಡಲಾಗುತ್ತದೆ.
ಆಸ್ಪತ್ರೆಯ ಮಾಹಿತಿಯ ಪ್ರಕಾರ, ಈ ಚಿಕಿತ್ಸೆಯಿಂದ ದೇಹದ ಶುದ್ಧೀಕರಣ, ರೋಗನಿರೋಧಕ ಶಕ್ತಿ ವೃದ್ಧಿ, ತ್ರಿದೋಷಗಳ ಸಮತೋಲನ, ಇಂದ್ರಿಯಗಳಿಗೆ ಪೋಷಣೆ ಹಾಗೂ ವಯೋಸಹಜ ಸಮಸ್ಯೆಗಳನ್ನು ವಿಳಂಬಗೊಳಿಸುವ ಪ್ರಯೋಜನಗಳನ್ನು ಪಡೆಯಬಹುದು. ಮಳೆಗಾಲದಲ್ಲಿ ಶೀತ, ಸಂಧಿವಾತ, ಸ್ನಾಯು ನೋವು, ಆಯಾಸ, ಜೀರ್ಣಕ್ರಿಯೆಯ ಸಮಸ್ಯೆಗಳು ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಹೆಚ್ಚಾಗುವ ಹಿನ್ನೆಲೆಯಲ್ಲಿ, ಆಯುರ್ವೇದದ ಮೂಲಕ ದೇಹವನ್ನು ಬಲಪಡಿಸಲು ಮತ್ತು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಈ ವಿಶೇಷ ಚಿಕಿತ್ಸಾ ಕಾರ್ಯಕ್ರಮ ಸಹಕಾರಿಯಾಗಲಿದೆ ಎಂದು ಆಸ್ಪತ್ರೆ ತಿಳಿಸಿದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಸುಳ್ಯ ಕೆವಿಜಿ ಆಯುರ್ವೇದ ವೈದ್ಯಕೀಯ ಆಸ್ಪತ್ರೆಯನ್ನು ಸಂಪರ್ಕಿಸಿ ಚಿಕಿತ್ಸೆಯ ಪ್ರಯೋಜನ ಪಡೆಯಬಹುದಾಗಿದೆ.
KVG Ayurveda Hospital’s ‘Karkataka Chikitsa’ to maintain health during the monsoon – ತುಳುಟೈಮ್ಸ್
ಇದನ್ನೂ ಓದಿ :ಪಡಿತರ ಬೇಕಾದರೆ ಸಿನಿಮಾ ಟಿಕೆಟ್ ಕೊಂಡುಕೊಳ್ಳಿ ; ಹಾವೇರಿಯಲ್ಲಿ ಹೊಸ ವಿವಾದ
===
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/IKW_z7twgxc











