ಬ್ರೇಕಿಂಗ್ ನ್ಯೂಸ್
ಕರ್ನಾಟಕ

Viral News: ಬಿಕಿನಿ ತೊಟ್ಟು ಗಂಗಾಸ್ನಾನ ಮಾಡಿದ ಮಹಿಳೆ..!

Viral news:‌ ಋಷಿಕೇಶದ  ಗಂಗಾ ನದಿಯಲ್ಲಿ ವಿದೇಶಿ ಮಹಿಳೆಯೊಬ್ಬರು ಬಿಕಿನಿ ಧರಿಸಿ  ಸ್ನಾನ ಮಾಡುತ್ತಿರುವ ವೀಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ. ಇದನ್ನು ನೋಡಿದ ನೆಟ್ಟಿಗರು ತರಹೇವಾರು ಕಾಮೆಂಟ್‌ ಮಾಡುತ್ತಿದ್ದಾರೆ.

ಇದನ್ನೂ ಓದಿ: ಜೀವನದಲ್ಲಿ ನೊಂದು ಸೋತು ಜಿಗುಪ್ಸೆಗೆ ಜಾರಿದ್ದೀರಾ..? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ!

ವಿದೇಶಿ ಮಹಿಳೆಯೊಬ್ಬಳ ಈ ವರ್ತನೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ದಾರಿಯಾಗಿದೆ. ಈ ವಿಡಿಯೋ ನೋಡಿದ ಕೆಲವರು ಇದು ಹಿಂದೂ ಸಂಪ್ರದಾಯಗಳಿಗೆ ಅಗೌರವ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಹಲವು ಮಂದಿ ಮಹಿಳೆಗೆ ತಿಳುವಳಿಕೆ ಇಲ್ಲದಿರಬಹುದು ಎಂದು ಬರೆದಿದ್ದಾರೆ.

ಇದನ್ನೂ ಓದಿ: ಬಿಗ್‌ ಬಾಸ್‌ ಮನೇಲಿ ಮಾತಲ್ಲೇ ಗತ್ತು ತೋರಿಸುವ ಮಾಳು ಆಟ ಹೇಗಿದೆ.?‌ ಈತ ನಿಜಕ್ಕೂ ಮುಗ್ಧನಾ?

ಋಷಿಕೇಶದ ಲಕ್ಷ್ಮಣ್ ಝೂಲಾ ಬಳಿ ಇರುವ ಪವಿತ್ರ ಗಂಗಾ ನದಿಯಲ್ಲಿ ಈಕೆ ಸ್ನಾನ ಮಾಡಲು ಬಿಕಿನಿ ತೊಟ್ಟುಕೊಂಡು ಹೋಗಿದ್ದಾಳೆ. ಮಹಿಳೆ ಬಿಕಿನಿ ಮತ್ತು ಹೂವಿನ ಹಾರವನ್ನು ಧರಿಸಿ ನದಿಯಲ್ಲಿ ಈಜುತ್ತಿದ್ದಾಳೆ. ಮಹಿಳೆಯ ಈ ವರ್ತನೆಯಿಂದ ಸಂಸ್ಕೃತಿ ಹಾಗೂ ಸಂಪ್ರದಾಯಗಳಿಗೆ ಧಕ್ಕೆಯಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ವಿಡಿಯೋ ಇನ್ಸ್ಟಾಗ್ರಾಮ್​​ನಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಧಾರ್ಮಿಕ ಹಾಗೂ ಪವಿತ್ರ ಸ್ಥಳಗಳಲ್ಲಿ ಈ ರೀತಿ ಮಾಡುವುದು ಸರಿಯಲ್ಲ ಎಂದು ಜನ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ಧರ್ಮಸ್ಥಳದಲ್ಲಿ ಕಾಣೆಯಾದ ಮಹಿಳೆಯರ ತನಿಖೆಯಾಗ್ಬೇಕು..!

ಸೋಷಿಯಲ್‌ ಮೀಡಿಯಾದಲ್ಲಿ ಜನ ಹೇಳೋದೇನು..?

ಭಾರತೀಯರಿಗೆ ಗಂಗಾನದಿ ಪವಿತ್ರ ನದಿ, ವಿದೇಶಿಗರು ತಮಗೆ ಒಪ್ಪಿಗೆ ಆಗುವ ಬಟ್ಟೆಗಳನ್ನು ಧರಿಸುವುದರಲ್ಲಿ ಯಾವ ಸಮಸ್ಯೆಗಳು ಇಲ್ಲ. ಆದರೆ ಧಾರ್ಮಿಕ ಕೇಂದ್ರಗಳಲ್ಲಿ ವಿಚಾರ–ಆಚಾರಗಳನ್ನು ಪಾಲಿಸಬೇಕು ಎಂದು ಸ್ಥಳೀಯರು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಆಕೆ ಪರಿಶುದ್ಧವಾಗಿದ್ದು, ನದಿಯನ್ನು ಅಗೌರವಿಸುವ ಉದ್ದೇಶ ಹೊಂದಿಲ್ಲ  ಎಂದು ಕೆಲವರು ಹೇಳಿದ್ರೆ,  ಇನ್ನೂ ಕೆಲವರು ಆ ಮಹಿಳೆಗೆ ನಮ್ಮ ಸಂಸ್ಕೃತಿ ಹಾಗೂ ಇಲ್ಲಿ ಯಾವ ಬಟ್ಟೆ ಧರಿಸಬೇಕು ಎಂಬ ತಿಳಿವಳಿಕೆ ಇಲ್ಲದಿರಬಹುದು. ಉದ್ದೇಶಪೂರಕವಾಗಿ ಹೀಗೆ ಮಾಡಿರಲು ಸಾಧ್ಯವಿಲ್ಲ ಎಂದು ಸೋಷಿಯಲ್​​ ಮೀಡಿಯಾದಲ್ಲಿ ನೆಟ್ಟಿಗರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 209

You cannot copy content of this page