ಬ್ರೇಕಿಂಗ್ ನ್ಯೂಸ್
ಶೈಕ್ಷಣಿಕ

ಕೈಬರಹದಿಂದ ಅಂಕಕ್ಕೆ ಸಮಸ್ಯೆ ಆಗುತ್ತಾ? ಎಸ್ಎಸ್ಎಲ್ ಸಿ, ಪಿಯುಸಿ ಆನ್‌ಲೈನ್ ಮೌಲ್ಯಮಾಪನಕ್ಕೆ ಆತಂಕ

ಬೆಂಗಳೂರು: Tulu Times l ಕರ್ನಾಟಕದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ಡಿಜಿಟಲ್ ಅಥವಾ ಆನ್‌ಲೈನ್ ವ್ಯವಸ್ಥೆಗೆ ವರ್ಗಾಯಿಸುವ ಕುರಿತು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ. ಪರೀಕ್ಷಾ ಫಲಿತಾಂಶಗಳನ್ನು ತ್ವರಿತವಾಗಿ ಪ್ರಕಟಿಸುವ ಉದ್ದೇಶದಿಂದ ತಂತ್ರಜ್ಞಾನ ಆಧಾರಿತ ಮೌಲ್ಯಮಾಪನ ವ್ಯವಸ್ಥೆ ಜಾರಿಗೆ ತರಲು ಸಿದ್ಧತೆ ನಡೆಯುತ್ತಿದ್ದು, ಮೊದಲ ಹಂತವಾಗಿ ಈ ವರ್ಷ ಕೆಲವು ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳು ಬರೆಯುವ ಪರೀಕ್ಷೆಗಳಲ್ಲಿ ಪೈಲಟ್ ಯೋಜನೆ ಆರಂಭಿಸುವ ಸಾಧ್ಯತೆಯಿದೆ.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಪ್ರಾಯೋಗಿಕವಾಗಿ ವೃತ್ತಿಪರ ಶಿಕ್ಷಣ, ಸಂಗೀತ ಹಾಗೂ ನೃತ್ಯ ಪರೀಕ್ಷೆಗಳ ಉತ್ತರ ಪತ್ರಿಕೆಗಳನ್ನು ಡಿಜಿಟಲ್ ರೀತಿಯಲ್ಲಿ ಮೌಲ್ಯಮಾಪನ ಮಾಡುವ ಸಾಧ್ಯತೆ ಇದೆ. ಈ ವಿಷಯಗಳಿಗೆ ಹಾಜರಾಗುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರುವುದರಿಂದ, ಉತ್ತರ ಪತ್ರಿಕೆಗಳನ್ನು ಸ್ಕ್ಯಾನ್ ಮಾಡಿ ಆನ್‌ಲೈನ್ ವ್ಯವಸ್ಥೆಯಲ್ಲಿ ಪರಿಶೀಲಿಸುವ ಪ್ರಕ್ರಿಯೆಯನ್ನು ಪರೀಕ್ಷಿಸಲು ಅನುಕೂಲವಾಗಲಿದೆ.

Process to purchase 15,000 new buses set in motion: Transport Minister Byrathi Suresh
Credit to original source

ಪೈಲಟ್ ಯೋಜನೆಯ ಮೂಲಕ ಸ್ಕ್ಯಾನಿಂಗ್, ಅಪ್‌ಲೋಡ್, ಡಿಜಿಟಲ್ ಮೌಲ್ಯಮಾಪನ ಸೇರಿದಂತೆ ವಿವಿಧ ಹಂತಗಳಲ್ಲಿ ಎದುರಾಗಬಹುದಾದ ತಾಂತ್ರಿಕ ಸಮಸ್ಯೆಗಳನ್ನು ಗುರುತಿಸಿ ಪರಿಹರಿಸಲು ಇಲಾಖೆ ಉದ್ದೇಶಿಸಿದೆ. ಪ್ರಯೋಗ ಯಶಸ್ವಿಯಾದ ಬಳಿಕ ಹೆಚ್ಚಿನ ಪ್ರಮಾಣದ ವಿದ್ಯಾರ್ಥಿಗಳು ಬರೆಯುವ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳಿಗೂ ಈ ವ್ಯವಸ್ಥೆಯನ್ನು ವಿಸ್ತರಿಸುವ ಬಗ್ಗೆ ನಿರ್ಧಾರ ಕೈಗೊಳ್ಳಬಹುದು. ಆದರೆ ಆನ್‌ಲೈನ್ ಮೌಲ್ಯಮಾಪನದ ಕುರಿತು ಕೆಲವು ಶಿಕ್ಷಕರು ಹಾಗೂ ಪರೀಕ್ಷಾ ವ್ಯವಸ್ಥೆಯೊಂದಿಗೆ ಸಂಬಂಧ ಹೊಂದಿರುವವರಿಂದ ಆತಂಕವೂ ವ್ಯಕ್ತವಾಗಿದೆ. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಉತ್ತರ ಪತ್ರಿಕೆಗಳಲ್ಲಿ ವಿದ್ಯಾರ್ಥಿಗಳು ಹಲವು ಪುಟಗಳಲ್ಲಿ ಉತ್ತರ ಬರೆಯುವುದರಿಂದ ಪ್ರತಿಯೊಂದು ಪುಟವನ್ನೂ ಪ್ರತ್ಯೇಕವಾಗಿ ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಬೇಕಾಗುತ್ತದೆ. ಈ ಸಂದರ್ಭದಲ್ಲಿ ಪುಟಗಳು ತಪ್ಪಾಗಿ ಅಪ್‌ಲೋಡ್ ಆಗುವುದು ಅಥವಾ ತಾಂತ್ರಿಕ ದೋಷಗಳು ಸಂಭವಿಸುವ ಸಾಧ್ಯತೆ ಇದೆ. ಇದರ ಜತೆಗೆ ವಿದ್ಯಾರ್ಥಿಗಳ ಕೈಬರಹವನ್ನು ಡಿಜಿಟಲ್ ರೂಪದಲ್ಲಿ ಸ್ಪಷ್ಟವಾಗಿ ಓದಲು ಸಾಧ್ಯವಾಗದಿದ್ದರೆ ಅಂಕಗಳ ಮೇಲೆ ಪರಿಣಾಮ ಬೀರುವ ಆತಂಕವೂ ಇದೆ. ಸರಿಯಾದ ಉತ್ತರ ಬರೆದಿದ್ದರೂ ಕೈಬರಹ ಅಥವಾ ಸ್ಕ್ಯಾನಿಂಗ್ ಸಮಸ್ಯೆಯಿಂದ ಮೌಲ್ಯಮಾಪನದಲ್ಲಿ ವ್ಯತ್ಯಾಸವಾಗಬಾರದು ಎಂಬುದು ಪ್ರಮುಖ ಬೇಡಿಕೆಯಾಗಿದೆ. ಹೀಗಾಗಿ ವೇಗವಾಗಿ ಫಲಿತಾಂಶ ನೀಡುವ ಉದ್ದೇಶದ ಜತೆಗೆ ಮೌಲ್ಯಮಾಪನದ ನಿಖರತೆ, ಪಾರದರ್ಶಕತೆ ಹಾಗೂ ವಿದ್ಯಾರ್ಥಿಗಳ ಅಂಕಗಳಿಗೆ ಯಾವುದೇ ರೀತಿಯ ಹಾನಿಯಾಗದಂತೆ ವ್ಯವಸ್ಥೆ ರೂಪಿಸುವುದು ಶಿಕ್ಷಣ ಇಲಾಖೆಯ ಮುಂದಿರುವ ಪ್ರಮುಖ ಸವಾಲಾಗಿದೆ.

Will handwriting affect marks? Concerns regarding online evaluation for SSLC and PUC. – ತುಳು ಟೈಮ್ಸ್

ಇದನ್ನೂ ಓದಿ : ಗ್ರಾಮೀಣ ಮಕ್ಕಳಿಗೆ ‘ವಿದ್ಯಾರ್ಥಿ ಸಹಾಯಹಸ್ತ’; ವೃತ್ತಿಪರ ಶಿಕ್ಷಣಕ್ಕೆ 7.5% ಮೀಸಲು

====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/5C4rFNGDf_w

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 2

You cannot copy content of this page