ಬೆಳ್ತಂಗಡಿ: Tulu Times | ಬೆಳ್ತಂಗಡಿ ಮೀಣ ಭಾಗದಲ್ಲಿ ಕಾಲುಸಂಕ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸರ್ಕಾರಕ್ಕೆ ಶಾಸಕ ಪೂಂಜರಿಂದ ಪ್ರಸ್ತಾವನೆ ಸಲ್ಲಿಸಲಾಗಿದೆ.
ಇಲ್ಲಿನ ಪ್ರದೇಶದಲ್ಲಿ ಕಾಲುಸಂಕ ಕಾಮಗಾರಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ತಲಾ ರೂ.25 ಲಕ್ಷ ವೆಚ್ಚದಲ್ಲಿ ಒಟ್ಟು ನಾಲ್ಕು ಕಾಮಗಾರಿಗಳು ಅನುಮೋದನೆ ನೀಡಲಾಗಿದೆ. ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕರ ಸಂಪರ್ಕಕ್ಕೆ ಅನುಕೂಲವಾಗುವಂತೆ ತಿಳಿಸಲಾಗಿದೆ.
ಅನುಮೋದನೆಗೊಂಡ ಕಾಮಗಾರಿಗಳ ವಿವರಗಳನ್ನು ನೋಡೋದಾದ್ರೆ, ಮಲವಂತಿಗೆ ಗ್ರಾಮದ ಕುಮೇರು ಪರಿಶಿಷ್ಟ ಪಂಗಡ ಕಾಲೊನಿ ರಸ್ತೆಯಲ್ಲಿ ಕಾಲುಸಂಕ, ವೆರಿಯ ಗ್ರಾಮದ ಪುಲ್ಲಾಜೆ ಎಂಬಲ್ಲಿ ಕಾಲುಸಂಕ, ಸವಣಾಲು ಗ್ರಾಮದ ಕೋಡಿಮುಗೇರು ಎಂಬಲ್ಲಿ. ಕುಕ್ಕೇಡಿ ಗ್ರಾಮದ ಕಾಜಾಲ ಎಂಬಲ್ಲಿ. ಈ ಎಲ್ಲಾ ಕಾಮಗಾರಿಗಳಿಗೆ ಮುಂದಿನ ದೇಗಳಲ್ಲಿ ಟೆಂಡರ್ ಪ್ರಕ್ರಿಯೆಗಳನ್ನು ನಡೆಸಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಕಲ್ಪಿಸಲಿದೆ. ಈ ಕಾರ್ಯಕ್ಕೆ ಶಾಸಕರು ರೂ.1.00ಕೋಟಿ ಅನುದಾನವನ್ನು ಬಿಡುಗಡೆಗೊಳಿಸಿರೋದಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ಪೊಲೀಸರ ಅಮಾನತಿಗೆ ಶೋಭಾ ಕರಂದ್ಲಾಜೆ ಆಗ್ರಹ!
ಬೆಂಗಳೂರು: ಹುಬ್ಬಳ್ಳಿಯಲ್ಲಿ ದಲಿತ ಮಹಿಳೆಯನ್ನು ವಿವಸ್ತ್ರಗೊಳಿಸಿದ ಘಟನೆಗೆ ಸಂಬಂಧಿಸಿದಂತೆ ಠಾಣೆಯ ಪೋಲೀಸ್ ಅಧಿಕಾರಿಗಳನ್ನು ಮತ್ತು ವ್ಯಾನಿನಲ್ಲಿದ್ದ ಪೋಲೀಸರನ್ನು ತಕ್ಷಣ ಅಮಾನತುಗೊಳಿಸಬೇಕು ಹಾಗೂ ಸುಳ್ಳು ಕೇಸು ದಾಖಲಿಸಿದ ಸುವರ್ಣಾರ ಮೇಲೆ ಕೇಸ್ ದಾಖಲಿಸಿ ಅವರನ್ನು ಬಂಧಿಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ಎಸ್.ಐ.ಆರ್. ಸರ್ವೇ ವಿರೋಧಿಸಿ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ್ದಕ್ಕೆ, ದಲಿತ ಮಹಿಳೆ ಮೇಲೆ ದೌರ್ಜನ್ಯ ನಡೆಸಿದ್ದಕ್ಕೆ ಹಾಗೂ ದಲಿತ ಮಹಿಳೆಯನ್ನು ವಿವಸ್ತ್ರಗಿಳಿಸಿದ್ದಕ್ಕೆ ಮೂರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿ ತನಿಖೆ ನಡೆಸಬೇಕು ಎಂದು ಅವರು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಜನವರಿ 1 ಮತ್ತು 2ರಂದು ಹುಬ್ಬಳ್ಳಿಯ ಸೆಂಟ್ರಲ್ ಕ್ಷೇತ್ರ ವಾರ್ಡ್ ಸಂಖ್ಯೆ 59ರಲ್ಲಿ ಬಿ.ಎಲ್.ಎ. ಕುಲಕರ್ಣಿ ಮತ್ತು ಬಿ.ಎಲ್.ಎ.2 ಮರಿಯಾದಾಸ್ ಎಸ್.ಐ.ಆರ್. ಪ್ರೀ ಮ್ಯಾಚಿಂಗ್ ಮಾಡಲು ಮನೆಮನೆ ಸರ್ವೇ ನಡೆಸುವಾಗ ಕಾಂಗ್ರೆಸ್ ಮಾಜಿ ಕಾರ್ಪೊರೇಟರ್ ಸುವರ್ಣಾ ಅವರು ಇದನ್ನು ವಿರೋಧಿಸಿದ್ದಲ್ಲದೆ, ತಂಡದ ಜೊತೆಗಿದ್ದ, ಮರೊಯಾದಾಸ್ ಅವರ ಕುಟುಂಬದವರಾದ ಸುಜಾತಾ ಎಂಬುವರ ಮೇಲೆ ಈIಖ ದಾಖಲಿಸಿದ್ದು, ಒಟ್ಟು ನಾಲ್ಕು ಕೇಸ್ ಅವರ ವಿರುದ್ಧ ದಾಖಲಾಗಿವೆ. ಈ ಸಂಬಂಧವಾಗಿ ಹುಬ್ಬಳಿ ಪೋಲೀಸ್ ಸುಜಾತಾ ಅವರನ್ನು ಅರೆಸ್ಟ್ ಮಾಡಿ ವ್ಯಾನಿನಲ್ಲಿ ಕರೆದುಕೊಂಡು ಹೋಗುವಾಗ ಆಕೆಯನ್ನು ವಿವಸ್ತ್ರಗೊಳಿದ ಘಟನೆ ನಡೆದಿದೆ. ಸುಜಾತಾ ತಾನಾಗಿಯೇ ತನ್ನ ವಸ್ತ್ರ ಹರಿದುಕೊಂಡಿದ್ದಾಳೆ ಎಂದು ಹೇಳುವ ಮೂಲಕ ಪೊಲೀಸರು ಆಕೆಯನ್ನು ಅವಮಾನಿಸಿದ್ದಾರೆ ಎಂದು ಶೋಬಾ ಕರಂದ್ಲಾಜೆ ಆರೋಪಿಸಿದರು.
Belthangady: MLA Harish Poonjar proposes for Kalusanka work- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











