ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಕಡಿಮೆ ಹೆರಿಗೆ ಆಗುವ ಆಸ್ಪತ್ರೆಗಳಿಂದ ವೈದ್ಯರ ಶಿಫ್ಟ್ : ಆರೋಗ್ಯ ಇಲಾಖೆಯಿಂದ ಆದೇಶ

ಬೆಂಗಳೂರು : Tulu Times | ಇನ್ಮುಂದೆ ಸಮುದಾಯ ಆಸ್ಪತ್ರೆಗಳಲ್ಲಿ ಮಕ್ಕಳ ವೈದ್ಯರು, ಪ್ರಸೂತಿ ತಜ್ಞರು, ಅನಾಸ್ತೇಶಿಯಾ ತಜ್ಞರ ಸೇವೆ ಇರಲ್ಲ. ಜಿಲ್ಲಾಸ್ಪತ್ರೆಯಿಂದ 30 ಕಿಲೋ ಮೀಟರ್ ಅಥವಾ 25 ಕಿ.ಮೀ ಗಿಂತಲೂ ದೂರದಲ್ಲಿರುವ ತಾಲೂಕು ಆಸ್ಪತ್ರೆಯಲ್ಲಿರುವ ವೈದ್ಯರನ್ನು ಉಳಿಸಿಕೊಳ್ಳಲಾಗುವುದು ಎಂದು ಸಚಿವ ದಿನೇಶ್ ಗುಂಡೂರಾವ್ ಮಾಧ್ಯಮದೊಂದಿಗೆ ಮಾತನಾಡಿದ್ದು, ತಿಂಗಳಿಗೆ ಮೂವತ್ತು ಹೆರಿಗೆಗಿಂತಲೂ ಕಡಿಮೆ ಹೆರಿಗೆಯಾಗುವ ಆಸ್ಪತ್ರೆಗಳನ್ನ ಪಟ್ಟಿ ಮಾಡಲಾಗಿದೆ. ಕೆಲಸ ಕಡಿಮೆ ಇರುವ ವೈದ್ಯರು ಸರ್ಕಾರದಿಂದ ಬಂದಂತಹ ಸಂಬಳಕ್ಕೆ ತಕ್ಕಂತೆ ಕೆಲಸ ಇರದೆ, ಕಡಿಮೆ ಕೆಲಸ ಇರುವ ವೈದ್ಯರನ್ನು ಶಿಫ್ಟ್ ಮಾಡಲು ಈ ಕಾರಣಕ್ಕಾಗಿ ಆಲೋಚಿಸಲಾಗಿದೆ. ಇನ್ನೂ ಗ್ರಾಮಗಳಲ್ಲಿ ದೂರ ಇರುವಂತಹ ತಾಲೂಕು ಆಸ್ಪತ್ರೆಗಳಲ್ಲಿ ವೈದ್ಯರನ್ನು ಉಳಿಸಲಾಗುವುದು ಎಂದು ಖಚಿತಪಡಿಸಲಾಗಿದೆ.

ಒಂದು ವೈದ್ಯರಿಗೆ 3 ಲಕ್ಷ ಸಂಬಳವನ್ನು ಕೊಡುತ್ತೇವೆ. ಕೆಲಸವೇ ಇಲ್ಲದ ಮೇಲೆ ಅಷ್ಟು ಸಂಬಳವನ್ನು ಯಾವುದಕ್ಕೋಸ್ಕರ ನೀಡಬೇಕು‌ ? ಅದಕ್ಕಾಗಿ 24 ಗಂಟೆಯೂ ಕೆಲಸ ನಿರ್ವಹಿಸುವಂತೆ ಅವರನ್ನು ಜವಾಬ್ದಾರಿಯುತರನ್ನಾಗಿ ಮಾಡುವುದಕ್ಕೋಸ್ಕರ ಬೇರೆ ಕೆಲಸವಿರುವ ಆಸ್ಪತ್ರೆಗಳಿಗೆ ಶಿಫ್ಟ್ ಮಾಡಲಾಗುವುದು ಎಂದು ತೀರ್ಮಾನಿಸಲಾಗಿದೆ. ಸಂಜೆ ನಂತರ (ಡ್ಯೂಟಿ ಅವಧಿ ಮುಗಿದ ನಂತರ) ತಮ್ಮ ಖಾಸಗಿ ಕ್ಲಿನಿಕ್ ಗಳಲ್ಲಿಯೂ ಕೂಡ ಕೆಲಸ ನಿರ್ವಹಿಸುತ್ತಿರುವ ವೈದ್ಯರಿರುವ ಕಾರಣ, ಸಂಬಳಕ್ಕೆ ತಕ್ಕಂತೆ ಕೆಲಸ ನಿರ್ವಹಿಸುವುದಕ್ಕಾಗಿ ಈ ಯೋಜನೆ ಮಾಡಲಾಗಿದೆ ಎಂದಿದ್ದಾರೆ.

ರಾಜ್ಯದಲ್ಲಿ ಸುಮಾರು 270 ಕ್ಕೂ ಹೆಚ್ಚು ಸಮುದಾಯ ಆರೋಗ್ಯ ಕೇಂದ್ರ ;

ಒಂದು ವೇಳೆ ಕಡಿಮೆ ಕೆಲಸವಿರುವ ಒಬ್ಬ ವೈದ್ಯರನ್ನು ಒಂದು ತಾಲೂಕು ಆಸ್ಪತ್ರೆಯಿಂದ ವರ್ಗಾಯಿಸಿದರೆ, ಅಲ್ಲಿಗೆ ಇಬ್ಬರು ಎಂಬಿಬಿಎಸ್ ವೈದ್ಯರನ್ನು ನಿಯೋಜಿಸಲಾಗುವುದು ಎಂದು ಹೇಳಿಕೆ ನೀಡಿದ್ದಾರೆ. ರಾಜ್ಯದಲ್ಲಿ ಸುಮಾರು 270 ಕ್ಕೂ ಹೆಚ್ಚು ಸಮುದಾಯ ಆರೋಗ್ಯ ಕೇಂದ್ರಗಳು ಇವೆ‌. ಈ ಆಸ್ಪತ್ರೆಗಳಲ್ಲಿ ಬೆಳಗಿನಿಂದ ಸಂಜೆವರೆಗೂ ವೈದ್ಯಕೀಯ ಸೇವೆಗಳು ಸಿಗುತ್ತಿವೆ. ಗ್ರಾಮೀಣ ಭಾಗದ ಜನರಿಗೆ ತುಂಬಾ ಅನುಕೂಲ ಆಗ್ತಿತ್ತು. ಆದರೆ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಕಡಿಮೆ ಹೆರಿಗೆ ಆಗುತ್ತಿವೆ. ತಾಲ್ಲೂಕು ಆಸ್ಪತ್ರೆಗಳು 24 ಗಂಟೆಗಳ ಕಾಲ ಸೇವೆ ನೀಡುವುದಕ್ಕೆ ಈ ರೀತಿ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ.

Shift of doctors from hospitals with low birth rates: Order from the Health Department – ತುಳು ಟೈಮ್ಸ್

ಇದನ್ನೂ ಓದಿ :ಮುಳ್ಳಯ್ಯನಗಿರಿಗೆ ಟ್ರಿಪ್ ಹೋಗಿದ್ದ ಜೀಪ್ ಪಲ್ಟಿ!

======

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/c3Lml4k6wi4?si=Y2Bvz2kVYsMjARVU

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 177

You cannot copy content of this page