ಕರ್ನಾಟಕ : Tulu Times l ಕರ್ನಾಟಕ ಸರ್ಕಾರವು ಮದ್ಯದ ಮೇಲಿನ ತೆರಿಗೆ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತರಲು ಮುಂದಾಗಿದೆ. ಈ ಹೊಸ ನೀತಿ ಜಾರಿಗೆ ಬಂದರೆ, ಪ್ರೀಮಿಯಂ ಹಾಗೂ ಮಧ್ಯಮ ದರದ ಮದ್ಯಗಳ ಬೆಲೆ ಹೆಚ್ಚಾಗಲಿದ್ದು, ಕಡಿಮೆ ದರದ ಮದ್ಯಗಳ ಬೆಲೆ ಗಣನೀಯವಾಗಿ ಕಡಿಮೆಯಾಗುವ ಸಾಧ್ಯತೆ ಇದೆ.
ಪ್ರಸ್ತುತ ಇಂಡಿಯನ್ ಮೇಡ್ ಲಿಕರ್ (IML) — ಬ್ರಾಂಡಿ, ವಿಸ್ಕಿ, ಜಿನ್, ರಮ್ ಗಳಿಗೆ 16 ತೆರಿಗೆ ಸ್ಲ್ಯಾಬ್‌ಗಳು ಇವೆ. ಹೊಸ ಪ್ರಸ್ತಾವನೆಯ ಪ್ರಕಾರ, ಇವುಗಳನ್ನು 8 ಸ್ಲ್ಯಾಬ್‌ಗಳಿಗೆ ಕಡಿಮೆ ಮಾಡಲು ಸರ್ಕಾರ ಯೋಚಿಸಿದೆ. ಇದರಿಂದ ತೆರಿಗೆ ವ್ಯವಸ್ಥೆ ಸರಳವಾಗಲಿದೆ.
ಕಡಿಮೆ ದರದ ಮದ್ಯಕ್ಕೆ ದೊಡ್ಡ ರಿಯಾಯಿತಿ;
₹0–₹470 ದರದ ಮೊದಲ ಸ್ಲ್ಯಾಬ್‌ನಲ್ಲಿ ಈಗ ಇರುವ ₹297 ಹೆಚ್ಚುವರಿ ಅಬಕಾರಿ ಸುಂಕವನ್ನು ₹50ಕ್ಕೆ ಇಳಿಸುವ ಪ್ರಸ್ತಾವ ಇದೆ. ₹471–₹520 ದರದ ಎರಡನೇ ಸ್ಲ್ಯಾಬ್‌ನಲ್ಲಿ ₹367ರಿಂದ ₹220ಕ್ಕೆ ಇಳಿಕೆ ಸಾಧ್ಯತೆ ಇದೆ.
ಉನ್ನತ ಸ್ಲ್ಯಾಬ್‌ನಲ್ಲಿ ಭಾರೀ ಏರಿಕೆ; ಪ್ರಸ್ತುತ ₹20,001ಕ್ಕಿಂತ ಹೆಚ್ಚಿನ ಮದ್ಯಗಳಿಗೆ ₹3,000 ಹೆಚ್ಚುವರಿ ಸುಂಕವಿದೆ. ಹೊಸ ಪ್ರಸ್ತಾವದಲ್ಲಿ ₹5,001 ಮೇಲ್ಪಟ್ಟ ಮದ್ಯಗಳಿಗೆ ₹3,700 ತೆರಿಗೆ ವಿಧಿಸಲು ಯೋಜಿಸಲಾಗಿದೆ. ಉದಾಹರಣೆಗೆ, ಈಗ ₹5,001 ದರದ ಮದ್ಯಕ್ಕೆ ₹1,600 ತೆರಿಗೆ ಇದ್ದರೆ, ಹೊಸ ನೀತಿಯಲ್ಲಿ ಇದು ₹2,100ಕ್ಕೆ ಏರಿಕೆಯಾಗಲಿದೆ.
ಈ ಬದಲಾವಣೆಯಿಂದ ಕಡಿಮೆ ಆದಾಯದ ಗ್ರಾಹಕರಿಗೆ ಸಡಿಲಿಕೆ ನೀಡುವುದರ ಜೊತೆಗೆ, ಪ್ರೀಮಿಯಂ ಮದ್ಯ ಬಳಕೆದಾರರಿಂದ ಹೆಚ್ಚು ಆದಾಯ ಸಂಗ್ರಹಿಸುವುದು ಸರ್ಕಾರದ ಉದ್ದೇಶವಾಗಿದೆ. ಈ ಮದ್ಯ ನೀತಿ ಕುರಿತ ಅಂತಿಮ ನಿರ್ಧಾರ ಶೀಘ್ರದಲ್ಲೇ ಹೊರಬರುವ ನಿರೀಕ್ಷೆಯಿದೆ.
Premium liquor becomes expensive – relaxation for low-income consumers – ತುಳುಟೈಮ್ಸ್
ಇದನ್ನೂ ಓದಿ :ಎಸ್‌ಎಸ್‌ಎಲ್‌ಸಿ ಫಲಿತಾಂಶ ವಿಳಂಬವಾಗುವ ಸಾಧ್ಯತೆ?
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://www.youtube.com/live/SP5XEPndc6w?si=bDy7bEIUmfJh-ezw











