ಪುತ್ತೂರು: Tulu Times l ಪುತ್ತೂರಿನ ಪಡೀಲ್ ಪ್ರದೇಶದಲ್ಲಿ ಬೈಕ್ ಡಿವೈಡರ್‌ಗೆ ಡಿಕ್ಕಿ ಹೊಡೆದು ಲೈಟ್ ಕಂಬಕ್ಕೆ ಅಪ್ಪಳಿಸಿದ ಪರಿಣಾಮ ಸವಾರನೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಮೃತನನ್ನು ಬೆಳ್ಳಿಪ್ಪಾಡಿ ಧನರಾಜ್ (21) ಎಂದು ಗುರುತಿಸಲಾಗಿದ್ದು, ಅಪಘಾತದಲ್ಲಿ ಧನರಾಜ್ ಅವರಿಗೆ ತಲೆಯ ಭಾಗಕ್ಕೆ ಗಂಭೀರ ಗಾಯವಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಧನರಾಜ್ ಸ್ನೇಹಿತರೊಂದಿಗೆ ಪುತ್ತೂರು ಜಾತ್ರೆ ಗದ್ದೆಯಲ್ಲಿ ಆಹಾರ ಸ್ವಾಲ್ ಹಾಕಿಕೊಂಡಿದ್ದರು ಎನ್ನಲಾಗಿದೆ. ನಿನ್ನೆ (ಏ.17) ಮುರ ಪ್ರದೇಶದ ಸ್ನೇಹಿತನ ಮನೆಯಲ್ಲಿ ತಂಗಿದ್ದ ಅವರು, ಇಂದು (ಏ.18) ಬೆಳಿಗ್ಗೆ ಬಟ್ಟೆ ಬದಲಾಯಿಸಿ ಸ್ಟಾಲ್‌ಗೆ ತೆರಳಲು ಬೈಕ್‌ನಲ್ಲಿ ಮನೆ ಕಡೆ ಪ್ರಯಾಣಿಸುತ್ತಿದ್ದರು. ಈ ವೇಳೆ ನಿಯಂತ್ರಣ ತಪ್ಪಿದ ಬೈಕ್ ಮೊದಲು ಡಿವೈಡರ್‌ಗೆ, ಬಳಿಕ ಲೈಟ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಅದರ ಪರಿಣಾಮವಾಗಿ ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಮತ್ತೊಂದು ಬೈಕ್‌ಗೆ ಕೂಡ ಅಪ್ಪಳಿಸಿದೆ ಎಂದು ತಿಳಿದುಬಂದಿದೆ.
ಮೃತದೇಹವನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಶವಾಗಾರದಲ್ಲಿ ಇರಿಸಲಾಗಿದೆ. ಘಟನಾ ಸ್ಥಳಕ್ಕೆ ಪುತ್ತೂರು ಸಂಚಾರಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ. ಮೃತರು ತಂದೆ, ತಾಯಿ ಹಾಗೂ ಸಹೋದರನನ್ನು ಅಗಲಿದ್ದಾರೆ.
Puttur: Bike accident: Rider dies on the spot – ತುಳುಟೈಮ್ಸ್
ಇದನ್ನೂ ಓದಿ :‘ಅರಿಷ್ಟ’ ಸೇವನೆಯ ನಂತರ ಆದಿವಾಸಿ ವ್ಯಕ್ತಿ ಸಾವು: ವಯನಾಡಿನಲ್ಲಿ ತನಿಖೆ ಆರಂಭ
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://www.youtube.com/live/72r5CpeVf6k?si=WpYqqxftQjJIiKza











