ಬ್ರೇಕಿಂಗ್ ನ್ಯೂಸ್
ಸುಳ್ಯ

ಆಟಿಯ ಸೊಗಡು, ಗಮ್ಮತ್ತಿನ ಸಂಭ್ರಮ; ಸುಳ್ಯದಲ್ಲಿ ವಿಶೇಷ ಆಟಿಕೂಟ

ಸುಳ್ಯ: Tulu Times l ಜೇಸಿಐ ಸುಳ್ಯ ಸಿಟಿ ಹಾಗೂ ಮ್ಯಾಟ್ರಿಕ್ಸ್ ಎಜ್ಯುಕೇಶನಲ್ ಇನ್ಸಿಟ್ಯೂಟ್ ಸುಳ್ಯ, ಗ್ಲೋಬಲ್ ಕಂಪ್ಯೂಟರ್ & ಟೈಪ್‌ರೈಟಿಂಗ್ ಶಿಕ್ಷಣ ಸಂಸ್ಥೆ, ಸುಳ್ಯ ಕಲರ್ಸ್ ಗಾರ್ಮೆಂಟ್ಸ್ ಹೊಲಿಗೆ ತರಬೇತಿ ಕೇಂದ್ರಗಳ ಸಹಯೋಗದಲ್ಲಿ ಆಟಿಕೂಟ ಕಾರ್ಯಕ್ರಮ ಆ.15ರಂದು ಸುಳ್ಯದ ಅಂಬಟೆಡ್ಕದಲ್ಲಿರುವ ವರ್ತಕರ ಸಮುದಾಯ ಭವನದಲ್ಲಿ ನಡೆಯಿತು.

ಜೇಸಿಐ ಸುಳ್ಯ ಸಿಟಿ ಅಧ್ಯಕ್ಷೆ ನಾಗವೇಣಿ ದಾಮೋದರ ಕೋರಡ್ಕ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅರೆಭಾಷೆ ಅಕಾಡೆಮಿಯ ಮಾಜಿ ಸದಸ್ಯ ಯಶವಂತ ಕುಡೆಕಲ್ಲು ಅವರು ಆಟಿ ತಿಂಗಳ ಆಚರಣೆ, ಅದರ ವೈಶಿಷ್ಟ್ಯ ಹಾಗೂ ತುಳುನಾಡು–ಕೊಡಗು ಭಾಗದ ಸಾಂಸ್ಕೃತಿಕ ಪರಂಪರೆಯಲ್ಲಿ ಆಟಿಯ ಮಹತ್ವದ ಕುರಿತು ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಅತಿಥಿಗಳಾಗಿ ಆಗಮಿಸಿದ ಜೇಸಿ ವಲಯ ಸಂಯೋಜಕರಾದ ಪ್ರದೀಪ್ ಕುಮಾರ್ ರೈ ಹಾಗೂ ವಿಷ್ಣುಪ್ರಕಾಶ್ ನಾರ್ಕೋಡು ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ಶುಭಾಶಯಗಳನ್ನು ಸಲ್ಲಿಸಿದರು.

Process to purchase 15,000 new buses set in motion: Transport Minister Byrathi Suresh
Credit to original source

ವೇದಿಕೆಯಲ್ಲಿ ಕಲರ್ಸ್ ಗಾರ್ಮೆಂಟ್ಸ್ ಮಾಲಕಿ ರಜನಿ ಶುಭಕರ, ಗ್ಲೋಬಲ್ ಕಂಪ್ಯೂಟರ್‌ನ ತೇಜಾಕ್ಷಿ ನಂದಕುಮಾರ್, ಜೇಸಿಐ ಸುಳ್ಯ ಸಿಟಿ ಕಾರ್ಯದರ್ಶಿ ತೇಜಸ್ವಿನಿ ಪ್ರಕಾಶ್ ಹಾಗೂ ಕಾರ್ಯಕ್ರಮ ಸಂಯೋಜಕ ಸುನಿಲ್ ಆರಂಬೂರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಂಗವಾಗಿ ವಿವಿಧ ಮನೋರಂಜನಾ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಭಾಗವಹಿಸಿದವರು ಉತ್ಸಾಹದಿಂದ ಪಾಲ್ಗೊಂಡರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಆಟಿ ತಿಂಗಳ ಸಾಂಪ್ರದಾಯಿಕ ವಾತಾವರಣವನ್ನು ನೆನಪಿಸುವ ರೀತಿಯಲ್ಲಿ ಕಾರ್ಯಕ್ರಮದಲ್ಲಿ ವಿವಿಧ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು.

‘ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಅವಾರ್ಡ್’

ಇದೇ ಸಂದರ್ಭದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಹಿರಿಯ ಕ್ರೀಡಾಪಟು ರಾಮಯ್ಯ ಮಾದನಮನೆ ಅವರಿಗೆ ‘ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಅವಾರ್ಡ್’ ನೀಡಿ ಗೌರವಿಸಲಾಯಿತು. ಅವರ ಕ್ರೀಡಾ ಸೇವೆ ಹಾಗೂ ಸಾಧನೆಯನ್ನು ಸ್ಮರಿಸಿ ಸನ್ಮಾನಿಸಲಾಯಿತು. ರಂಜಿತ್ ಅವರು ಜೇಸಿವಾಣಿ ವಾಚಿಸಿದರು. ಉಮಾ ಅವರು ಸನ್ಮಾನ ಪತ್ರವನ್ನು ವಾಚಿಸಿದರು. ಆಟಿಕೂಟದಲ್ಲಿ ಭಾಗವಹಿಸಿದ ಎಲ್ಲರಿಗೂ ಆಟಿ ತಿಂಗಳ ಸಾಂಸ್ಕೃತಿಕ ಸೊಗಡಿನೊಂದಿಗೆ ಉತ್ತಮ ಅನುಭವ ದೊರೆಯಿತು.

The charm and delightful festivities of ‘Aati’; a special ‘Aatikoota’ in Sullia. – ತುಳು ಟೈಮ್ಸ್

ಇದನ್ನೂ ಓದಿ : ಸುಳ್ಯ : ಮಹಿಳೆಯರೇ ಗಮನಿಸಿ, ಸುಳ್ಯದಲ್ಲಿ ಶುರುವಾಗಿದೆ ಸೀರೆಗಳ ಹಬ್ಬ

====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/5C4rFNGDf_w

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 14

You cannot copy content of this page