ಉಡುಪಿ: Tulu Times | ಪ್ರಧಾನಿ ನರೇಂದ್ರ ಮೋದಿ ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ, ಕನಕದಾಸರಿಗೆ ಪುಷ್ಪಾರ್ಚನೆ ಮಾಡಿದ ನಂತರ ಕನಕನ ಕಿಂಡಿಗೆ ಹೊದಿಸಿರುವ ಚಿನ್ನದ ಕವಚ, ಸುವರ್ಣ ತೀರ್ಥ ಮಂಟಪವನ್ನುಅನಾವರಣಗೊಳಿಸಲಿದ್ದಾರೆ. ಇನ್ನು ಪ್ರಧಾನಿ ನರೇಂದ್ರ ಮೋದಿ ಉಡುಪಿಯಲ್ಲಿ ರೋಡ್ ಶೋ ಮಾಡಲಿದ್ದಾರೆ. ಹೀಗಾಗಿ ಸಾರ್ವಜನಿಕರಿಗೆ ಕೆಲವೊಂದು ಕಡ್ಡಾಯವಾದ ನಿಯಮಗಳನ್ನು ಸೂಚಿಸಲಾಗಿದೆ.
ಉಡುಪಿ ಜಿಲ್ಲಾ ಪೊಲೀಸ್ – ರೋಡ್ ಶೋನಲ್ಲಿ ಭಾಗವಹಿಸುವ ಸಾರ್ವಜನಿಕರಿಗೆ ಮುಖ್ಯ ಸೂಚನೆಗಳೇನು..?
1. 28/11/2025ರ ರೋಡ್ ಶೋಗೆ ಬರುವ ಸಾರ್ವಜನಿಕರು ಬೆಳಿಗ್ಗೆ 10:30ರೊಳಗಾಗಿ ನಿಗದಿತ ಸ್ಥಳಗಳನ್ನು ತಲುಪಬೇಕು. ತಡವಾಗಿ ಬರುವವರ ಪ್ರವೇಶ ನಿರ್ಬಂಧಿತ. 2. ರೋಡ್ ಶೋ ಮಾರ್ಗದ ಎರಡೂ ಬದಿಗಳಲ್ಲಿ ಅಳವಡಿಸಿದ ಪೊಲೀಸ್ ಬ್ಯಾರಿಕೇಡ್‌ಗಳನ್ನು ದಾಟುವುದು ನಿಷೇಧ. 3. ರೋಡ್ ಶೋ ಮಾರ್ಗದಲ್ಲಿ ಕೆಳಗಿನ ವಸ್ತುಗಳನ್ನು ಕಟ್ಟುನಿಟ್ಟಿನ ನಿಷೇಧ: ನೀರಿನ ಬಾಟಲಿ, ಬ್ಯಾಗ್‌ಗಳು, ಹೂವಿನ ಬೊಕ್ಕೆ, ಗಿಫ್ಟ್‌ಗಳು, ಕ್ಯಾಮೆರಾ, ಬಾಕ್ಸ್‌ಗಳು, ಶಸ್ತ್ರಾಸ್ತ್ರಗಳು, ಚಾಕು, ಬೆಂಕಿ ಸಾಮಗ್ರಿಗಳು, ಶಸ್ತ್ರಾಸ್ತ್ರಗಳು, ಚಾಕು, ಬೆಂಕಿ ಸಾಮಗ್ರಿಗಳು, ಡೋನ್‌ಗಳು, ಸ್ಪೋಟಕ ವಸ್ತುಗಳು, ಲೇಸರ್ ಲೈಟ್, ಧ್ವಜದ ಕಂಬಗಳು ಇತ್ಯಾದಿ.
4. ಎಲ್ಲಾ ಸಾರ್ವಜನಿಕರು ಕಡ್ಡಾಯವಾಗಿ ಪೊಲೀಸ್ ಸುರಕ್ಷತಾ ಪರಿಶೀಲನೆಗೆ ಒಳಗಾಗಬೇಕು. 5. ರೋಡ್ ಶೋ ಮಾರ್ಗದ ಬಳಿ ಇರುವ ಯಾವುದೇ ಕಟ್ಟಡದ ಮೇಲೆ ಹತ್ತುವುದು ನಿಷೇಧ. 6. ಹಿರಿಯರು, ಮಹಿಳೆಯರು, ಮಕ್ಕಳಿಗೆ ಆದ್ಯತೆ ನೀಡಬೇಕು. 3 ವರ್ಷದ ಒಳಗಿನ ಮಕ್ಕಳನ್ನು ಕರೆತರಬಾರದು. 7. ಯಾವುದೇ ಸಂಶಯಾಸ್ಪದ ವ್ಯಕ್ತಿ/ವಸ್ತು ಕಂಡರೆ ತಕ್ಷಣ ಹತ್ತಿರದ ಪೊಲೀಸ್ ಸಿಬ್ಬಂದಿಗೆ ಮಾಹಿತಿ ನೀಡಬೇಕು. 8. ಯಾವುದೇ ಧ್ವಜ, ಚಿತ್ರಪಟ, ಬ್ಯಾನರ್‌ಗಳನ್ನು ತರಲು ಅನುಮತಿ ಇಲ್ಲ. 9. ಸಾರ್ವಜನಿಕರು ನೂಕುನುಗ್ಗಲು, ಗದ್ದಲ, ಉದ್ವೇಗಕಾರಿ ವರ್ತನೆ ಮಾಡಬಾರದು ಎಂದು ಜಿಲ್ಲಾ ಪೊಲೀಸ್ ಇಲಾಖೆ ತಿಳಿಸಿದೆ.
ಉಡುಪಿಯಾದ್ಯಂತ ಸುಮಾರು 3000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, 10 ಮಂದಿ ಪೊಲೀಸ್ ಆಯುಕ್ತರು ಸೇರಿದಂತೆ 8ಕ್ಕೂ ಹೆಚ್ಚು ಜಿಲ್ಲೆಗಳಿಂದ ಪೊಲೀಸ್ ಸಿಬ್ಬಂದಿಯನ್ನು ಕರೆಸಿಕೊಳ್ಳಲಾಗಿದೆ. ಒಟ್ಟು ಬಂದೋಬಸ್ತ್ ವ್ಯವಸ್ಥೆ ಎಡಿಜಿಪಿ ಜಿತೇಂದ್ರ ಕುಮಾರ್ ಅವರ ಮೇಲ್ವಿಚಾರಣೆಯಲ್ಲಿ, ಐಜಿ ಸಂದೀಪ್ ಪಟೀಲ್ ಮತ್ತು ಐಜಿ ಚಂದ್ರಗುಪ್ತ ನೇತೃತ್ವದಲ್ಲಿ ನಡೆಯಲಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಹೇಳಿದ್ದಾರೆ.
Modi’s road show in Udupi today.. What are the mandatory instructions for the public..?- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











