ಬ್ರೇಕಿಂಗ್ ನ್ಯೂಸ್
ಕ್ರೀಡೆ

ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ಭಕ್ತಿಭಾವದ 48 ದಿನಗಳ ಪೂಜಾ ವೈಭವ

ಪೆರುವಾಜೆ: Tulu Times l ಸುಳ್ಯ, ಪುತ್ತೂರು ಹಾಗೂ ಕಡಬ ತಾಲೂಕಿನ 21 ಗ್ರಾಮಗಳ ಮುಖ್ಯ ಕ್ಷೇತ್ರವಾಗಿರುವ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ಆಷಾಢ ಮಾಸದ ಅಂಗವಾಗಿ ನಡೆಯುತ್ತಿರುವ 48 ದಿನಗಳ ವಿಶೇಷ ಶ್ರೀ ಗಣಪತಿ ಹೋಮ ಹಾಗೂ ಶ್ರೀ ದುರ್ಗಾಪೂಜೆ ಭಕ್ತಿಭಾವದಿಂದ ಸಾಗುತ್ತಿದೆ. ಜುಲೈ 17ರಿಂದ ಆರಂಭಗೊಂಡಿರುವ ಈ ವಿಶೇಷ ಪೂಜಾ ಕಾರ್ಯಕ್ರಮವು ಸೆಪ್ಟೆಂಬರ್ 2ರವರೆಗೆ ನಡೆಯಲಿದ್ದು, ಪ್ರತಿದಿನ ನೂರಾರು ಭಕ್ತರು ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗುತ್ತಿದ್ದಾರೆ.

ಈ ಅವಧಿಯಲ್ಲಿ ಉದ್ಭವ ಶ್ರೀ ಜಲದುರ್ಗಾದೇವಿ ಹಾಗೂ ಉದ್ಭವ ಶ್ರೀ ಮಹಾಗಣಪತಿ ಸನ್ನಿಧಿಯಲ್ಲಿ ವಿಶೇಷ ಗಣಪತಿ ಹೋಮ, ದುರ್ಗಾಪೂಜೆ, ಅಲಂಕಾರ ಮತ್ತು ವಿವಿಧ ಧಾರ್ಮಿಕ ವಿಧಿವಿಧಾನಗಳು ನೆರವೇರುತ್ತಿವೆ. ಆಷಾಢ ಮಾಸದಲ್ಲಿ ದೇವಿ ಹಾಗೂ ಗಣಪತಿಯ ಆರಾಧನೆಗೆ ವಿಶೇಷ ಮಹತ್ವವಿದ್ದು, ಈ ಸೇವೆಯಲ್ಲಿ ಭಕ್ತಿಯಿಂದ ಪಾಲ್ಗೊಂಡರೆ ಇಷ್ಟಾರ್ಥ ಸಿದ್ಧಿ, ಕುಟುಂಬದ ಕ್ಷೇಮ, ಆರೋಗ್ಯ ಹಾಗೂ ನೆಮ್ಮದಿ ದೊರೆಯುತ್ತದೆ ಎಂಬುದು ಭಕ್ತರ ನಂಬಿಕೆಯಾಗಿದೆ.

ಪೆರುವಾಜೆ ಕ್ಷೇತ್ರದ ವಿಶೇಷತೆ ಎಂದರೆ ಉದ್ಭವ ಶ್ರೀ ಜಲದುರ್ಗಾದೇವಿ ಮತ್ತು ಉದ್ಭವ ಶ್ರೀ ಮಹಾಗಣಪತಿ ಎರಡೂ ದೇವತಾ ಸನ್ನಿಧಿಗಳು ಒಂದೇ ಕ್ಷೇತ್ರದಲ್ಲಿ ಉದ್ಭವ ರೂಪದಲ್ಲಿ ವಿರಾಜಮಾನವಾಗಿರುವುದು. ಈ ಕಾರಣದಿಂದ ಕ್ಷೇತ್ರಕ್ಕೆ ವಿಶಿಷ್ಟ ಧಾರ್ಮಿಕ ಮಹತ್ವ ಲಭಿಸಿದೆ. 48 ದಿನಗಳ ವಿಶೇಷ ಪೂಜೆಯಲ್ಲಿ ಭಕ್ತರು ತಮ್ಮ ಹೆಸರಿನಲ್ಲಿ ಶ್ರೀ ಗಣಪತಿ ಹೋಮ ಹಾಗೂ ಶ್ರೀ ದುರ್ಗಾಪೂಜೆ ನಡೆಸಬಹುದಾಗಿದೆ. ಸೇವೆಗೆ ರೂ.300 ಶುಲ್ಕ ನಿಗದಿಪಡಿಸಲಾಗಿದ್ದು, ಮುಂಚಿತವಾಗಿ ರಶೀದಿ ಪಡೆದು ಸೇವಾ ದಿನಾಂಕ ಕಾಯ್ದಿರಿಸಬಹುದು. ಪ್ರತಿದಿನ ವಿವಿಧ ಭಾಗಗಳಿಂದ ಆಗಮಿಸುವ ಭಕ್ತರು ಸೇವೆಯಲ್ಲಿ ಭಾಗವಹಿಸುತ್ತಿದ್ದಾರೆ.

ಪ್ರತಿ ವರ್ಷ ಮನೆಮನೆಯ ಬಲಿವಾಡು ಸಮರ್ಪಣೆ, ವಿಶಿಷ್ಟ ನವರಾತ್ರಿ ಆಚರಣೆ ಹಾಗೂ ಮಲ್ಲಿಗೆ ಶಯನೋತ್ಸವದಂತಹ ಅಪರೂಪದ ಸಂಪ್ರದಾಯಗಳಿಂದ ಪ್ರಸಿದ್ಧಿಯಾಗಿರುವ ಈ ಕ್ಷೇತ್ರದಲ್ಲಿ ನಡೆಯುವ 48 ದಿನಗಳ ವಿಶೇಷ ಪೂಜೆಗಳು ನವರಾತ್ರಿ ಮಹೋತ್ಸವಕ್ಕೆ ಮುನ್ನುಡಿಯಾಗಿವೆ.

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುನಿಲ್ ಕುಮಾರ್ ರೈ ಪೆರುವಾಜೆ ಮಾತನಾಡಿ, ಸತತ 48 ದಿನಗಳ ಕಾಲ ಶ್ರೀ ಗಣಪತಿ ಹೋಮ ಹಾಗೂ ಶ್ರೀ ದುರ್ಗಾಪೂಜೆ ನಡೆಯುವುದು ಈ ಕ್ಷೇತ್ರದ ವಿಶಿಷ್ಟ ಸಂಪ್ರದಾಯ. ಈ ಸೇವೆಯಲ್ಲಿ ಭಕ್ತಿಯಿಂದ ಪಾಲ್ಗೊಂಡರೆ ಇಷ್ಟಾರ್ಥ ಸಿದ್ಧಿ, ಕುಟುಂಬದ ಕ್ಷೇಮ ಹಾಗೂ ನೆಮ್ಮದಿ ದೊರೆಯುತ್ತದೆ ಎಂಬ ನಂಬಿಕೆಯಿದ್ದು, ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

48 days of devotional puja glory at Sri Jaladurgadevi temple in Peruvaje – ತುಳುಟೈಮ್ಸ್

ಇದನ್ನೂ ಓದಿ :ತಮಿಳುನಾಡು ಬಜೆಟ್‌ ಬಂಪರ್‌ ಕೊಡುಗೆ; ನವಜಾತ ಶಿಶುವಿಗೆ ಚಿನ್ನದ ಉಂಗುರ

====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ :https://youtu.be/IKW_z7twgxc

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 7

You cannot copy content of this page