ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಪರೀಕ್ಷೆ ಬರೆದ ಕೆಲವೇ ಕೆಲವು ಗಂಟೆಯಲ್ಲಿ ಫಲಿತಾಂಶ ನೀಡಿದ ವಿಶ್ವವಿದ್ಯಾನಿಲಯ

ಹಾವೇರಿ : Tulu Times ಪರೀಕ್ಷೆ ಬರೆದ ನಂತರ ಎಲ್ಲಾ ವಿದ್ಯಾರ್ಥಿಗಳು ಹಾಗೂ ಪೋಷಕರು ಫಲಿತಾಂಶಕ್ಕಾಗಿ ಕಾಯೋದು ಸಹಜ. ಕೆಲವೊಮ್ಮೆ ತಿಂಗಳಾನುಗಟ್ಟಲೆ ಫಲಿತಾಂಶ ನೀಡಲು ಕೆಲವು ವಿಶ್ವಿವಿದ್ಯಾನಿಲಯಗಳು ಕಾಯಿಸಿದರೆ, ಇನ್ನು ಕೆಲವು ಬಹಳ ಬೇಗ ವಿದ್ಯಾರ್ಥಿಗಳಿಗೆ ಫಲಿತಾಂಶವನ್ನು ನೀಡುತ್ತಾರೆ. ಆದರೆ ಇಲ್ಲೊಂದು ವಿಶ್ವವಿದ್ಯಾನಿಲಯವು ಕೇವಲ ಮೂರೇ ಮೂರು ಗಂಟೆಯಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಫಲಿತಾಂಶ ನೀಡಿದ ದಾಖಲೆ ಇದಾಗಿದೆ.

ಜಾನಪದ ಸಾಹಿತ್ಯ ವಿಭಾಗ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಕನ್ನಡ ಮತ್ತು ಜಾನಪದ ವಿಭಾಗ, ಎಂಬಿಎ ಆರ್‌ಟಿಎಂ ವಿಭಾಗ, ಎಂಬಿಎ ಪ್ರವಾಸೋದ್ಯಮ ವಿಭಾಗಗಳ ದ್ವಿತೀಯ ಸೆಮಿಸ್ಟರ್ ಫಲಿತಾಂಶ, ಎಂಎ ಜಾನಪದ ವಿಜ್ಞಾನ ವಿಭಾಗದ 2, 4ನೇ ಸೆಮಿಸ್ಟರ್ ಫಲಿತಾಂಶವನ್ನ ಪರೀಕ್ಷೆ ಮುಗಿದ 3 ಗಂಟೆಗಳಲ್ಲೇ ವಿಶ್ವವಿದ್ಯಾಲಯ ಪ್ರಕಟಿಸಿದೆ. ಪರೀಕ್ಷೆ ಮುಗಿದ ದಿನದಂದೇ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಿಸಿರುವುದು ದಾಖಲೆ ಮತ್ತು ಹೆಮ್ಮೆ ಎಂದು ಜಾನಪದ ವಿವಿಯ ವಿಸಿ ಪ್ರೊ.ಟಿ.ಎಂ.ಭಾಸ್ಕರ್ ಹೇಳಿದ್ದಾರೆ.

ಪರೀಕ್ಷೆ ಮುಗಿದ 3 ಗಂಟೆಗಳಲ್ಲೇ ಫಲಿತಾಂಶ ಪ್ರಕಟಿಸುವ ಮೂಲಕ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ‌ಗೋಟಗೋಡಿ ಬಳಿ ಇರುವ ಜಾನಪದ ವಿಶ್ವವಿದ್ಯಾಲಯ ಹೊಸ ದಾಖಲೆ ಬರೆದಿದೆ. ಮೌಲ್ಯಮಾಪನ ಕುಲಸಚಿವ ಡಾ.ಕೆ. ಶಿವಶಂಕರ್ ನೇತೃತ್ವದಲ್ಲಿ ವಿಶಿಷ್ಟ ಸಾಧನೆ ಮಾಡಲಾಗಿದ್ದು, ಕೇವಲ 3 ಗಂಟೆಗಳ ಅವಧಿಯಲ್ಲಿ 6 ವಿಭಾಗಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡಿ ಫಲಿತಾಂಶ ಪ್ರಕಟ ಮಾಡಲಾಗಿದೆ. ಇದು ವಿದ್ಯಾರ್ಥಿಗಳಿಗೂ ಹಾಗೂ ಪೋಷಕರಿಗೂ ಅಚ್ಚರಿಯನ್ನು ತಂದಿದ್ದು, ಇಲ್ಲಿನ ಶಿಕ್ಷಕರ ಪಾತ್ರ ಹಾಗೂ ಶ್ರಮವನ್ನು ನಿಜವಾಗಿಯೂ ಮೆಚ್ಚಲೇ ಬೇಕು. The university gave the result within a few hours of the exam – ತುಳು ಟೈಮ್ಸ್

ಇದನ್ನೂ ಓದಿ :ಜನವರಿಯಿಂದ ‘ಆಹಾರ ಕಿಟ್’ ವಿತರಣೆ : ಗ್ಯಾರಂಟಿ ಉತ್ಸವ ಕಾರ್ಯಕ್ರಮಕ್ಕೆ ಚಾಲನೆ

=========

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/B7DSbRcw80Q?si=U42XMUvT9of7QRAN

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 177

You cannot copy content of this page