ಸಿನೆಮಾ : Tulu Times l ಕನ್ನಡ ಚಿತ್ರರಂಗದ ನಟಿ ರುಕ್ಮಿಣಿ ವಸಂತ್ ಅವರ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ಎಐ ನಿರ್ಮಿತ ಬಿಕಿನಿ ಚಿತ್ರಗಳು ಮತ್ತು ವೀಡಿಯೋಗಳ ವಿರುದ್ಧ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಚಿತ್ರಗಳು ಸಂಪೂರ್ಣ ನಕಲಿ ಮತ್ತು ಕೃತಕವಾಗಿ ಸೃಷ್ಟಿಸಲ್ಪಟ್ಟವು ಎಂದು ಸ್ಪಷ್ಟಪಡಿಸಿರುವ ನಟಿ, ಇದರಲ್ಲಿ ಭಾಗಿಯಾಗಿರುವವರ ವಿರುದ್ಧ ಕಾನೂನು ಹಾಗೂ ಸೈಬರ್ ಕ್ರೈಂ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ದೃಶ್ಯಗಳಲ್ಲಿ ಹಸಿರು ಬಣ್ಣದ ಬಿಕಿನಿ ಧರಿಸಿದ ಮಹಿಳೆ ಸ್ವಿಮ್ಮಿಂಗ್ ಪೂಲ್‌ಗೆ ಇಳಿಯುತ್ತಿರುವುದು ಕಾಣಿಸಿಕೊಂಡಿತ್ತು. ವೃತ್ತಿಪರ ಫೋಟೋಶೂಟ್‌ನಂತಿದ್ದ ಈ ದೃಶ್ಯಗಳನ್ನು ಹಲವರು ನಿಜವೆಂದು ನಂಬಿ ಹಂಚಿಕೊಂಡಿದ್ದರು. ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಪ್ರಕಟಣೆ ಹಂಚಿಕೊಂಡ ರುಕ್ಮಿಣಿ ವಸಂತ್, ವೈರಲ್ ಆಗಿರುವ ದೃಶ್ಯಗಳಿಗೆ ತಮಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದ್ದಾರೆ.

ಅವರು ಪ್ರಕಟಣೆಯಲ್ಲಿ ಹೀಗೆ ತಿಳಿಸಿದ್ದಾರೆ:
ನನ್ನ ಹೆಸರಿನಲ್ಲಿ ಕೆಲವು ಎಐ-ಜನರೇಟ್ ಮಾಡಿದ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದನ್ನು ಗಮನಿಸಿದ್ದು, ಅವು ಸಂಪೂರ್ಣ ನಕಲಿ ಮತ್ತು ಕೃತಕವಾಗಿ ಸೃಷ್ಟಿಸಲ್ಪಟ್ಟವು. ಇಂತಹ ಮಾರ್ಪಡಿಸಿದ ವಿಷಯವನ್ನು ಸೃಷ್ಟಿಸಿ ಹರಡುವುದು ತುಂಬಾ ಜವಾಬ್ದಾರಿಯಿಲ್ಲದ ನಡೆ ಹಾಗೂ ಖಾಸಗಿತನದ ಗಂಭೀರ ಉಲ್ಲಂಘನೆ. ಈ ಪ್ರಕರಣವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ ಮತ್ತು ಇದರಲ್ಲಿ ಭಾಗಿಯಾಗಿರುವವರ ವಿರುದ್ಧ ಕಾನೂನು ಹಾಗೂ ಸೈಬರ್ ಕ್ರೈಂ ಕ್ರಮ ಕೈಗೊಳ್ಳುತ್ತಿದ್ದೇವೆ. ದಯವಿಟ್ಟು ಇಂತಹ ವಿಷಯಗಳನ್ನು ಹಂಚಿಕೊಳ್ಳಬೇಡಿ ಎಂದಿದ್ದಾರೆ. ಈ ಘಟನೆ ಮತ್ತೆ ಎಐ ಮತ್ತು ಡೀಪ್‌ಫೇಕ್ ತಂತ್ರಜ್ಞಾನದ ದುರುಪಯೋಗದ ಬಗ್ಗೆ ಆತಂಕ ಹೆಚ್ಚಿಸಿದೆ. ವಿಶೇಷವಾಗಿ ಸಿನಿತಾರೆಯರ ಚಿತ್ರಗಳು ಮತ್ತು ವಿಡಿಯೊಗಳನ್ನು ಕೃತಕ ಬುದ್ಧಿಮತ್ತೆ ಮೂಲಕ ಬದಲಾಯಿಸಿ ವೈರಲ್ ಮಾಡುವ ಘಟನೆಗಳು ಹೆಚ್ಚುತ್ತಿವೆ.
Actress Rukmini Vasanth outraged over viral photo; warned of legal action – ತುಳು ಟೈಮ್ಸ್
ಇದನ್ನೂ ಓದಿ : ‘ಕಾಕ್‌ರೋಚ್ ಜನತಾ ಪಾರ್ಟಿ’ ಇನ್‌ಸ್ಟಾಗ್ರಾಂ ಖಾತೆ ಹ್ಯಾಕ್: ಸ್ಥಾಪಕ ಅಭಿಜೀತ್ ದಿಪ್ಕೆ ಆರೋಪ
=====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://www.youtube.com/live/4pEuD7fDOuo?si=NM0tBe15Cbzi85Bp











