ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಮಿಲ್ಕ್ ಶೇಕ್ ಅಥವಾ ಸ್ಮೂದೀಸ್ ಇವೆರಡರಲ್ಲಿ ರಕ್ತದಲ್ಲಿನ ಸಕ್ಕರೆಮಟ್ಟ ಹೆಚ್ಚಿಸುವುದು ಯಾವುದು?

ಆಹಾರ : Tulu Times l ಬೇಸಿಗೆಯಲ್ಲಿ ತಂಪಾದ ಪಾನೀಯಗಳನ್ನು ಕುಡಿಯಲು ಎಲ್ಲರಿಗೂ ಇಷ್ಟ. ಆದರೆ ಮಧುಮೇಹ ಅಥವಾ ಪ್ರೀ-ಡಯಾಬಿಟಿಸ್ ಇರುವವರು ಶೇಕ್ಸ್‌ ಮತ್ತು ಸ್ಮೂಥೀಸ್‌ ಬಗ್ಗೆ ಹೆಚ್ಚು ಎಚ್ಚರಿಕೆ ವಹಿಸಬೇಕು. ಆರೋಗ್ಯಕರವೆಂದು ಕಾಣುವ ಸ್ಮೂಥಿಯೂ ಕೆಲವೊಮ್ಮೆ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ವೇಗವಾಗಿ ಹೆಚ್ಚಿಸಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ.

ಮಿಲ್ಕ್‌ಶೇಕ್‌ ಸಾಮಾನ್ಯವಾಗಿ ಹಾಲು, ಐಸ್‌ಕ್ರೀಂ, ಸಕ್ಕರೆ ಹಾಗೂ ಸಿಹಿ ಸಿರಪ್‌ಗಳಿಂದ ತಯಾರಿಸಲಾಗುತ್ತದೆ. ಇದರಲ್ಲಿ ಹೆಚ್ಚು ಪ್ರಮಾಣದ ಸಂಸ್ಕರಿತ ಸಕ್ಕರೆ ಮತ್ತು ಕೊಬ್ಬು ಇರುತ್ತದೆ.
ಸ್ಮೂಥಿ ಸಾಮಾನ್ಯವಾಗಿ ಹಣ್ಣುಗಳು, ತರಕಾರಿಗಳು, ಮೊಸರು ಅಥವಾ ಸಸ್ಯಾಧಾರಿತ ಹಾಲನ್ನು ಬೆರೆಸಿ ತಯಾರಿಸಲಾಗುತ್ತದೆ. ಇದರಲ್ಲಿ ನಾರಿನಾಂಶ (ಫೈಬರ್) ಇದ್ದರೂ, ಹಣ್ಣುಗಳನ್ನು ಸಂಪೂರ್ಣವಾಗಿ ಬ್ಲೆಂಡ್ ಮಾಡುವುದರಿಂದ ಅವುಗಳ ಮೂಲ ರಚನೆ ಬದಲಾಗುತ್ತದೆ.

ಸಂಶೋಧನೆಗಳ ಪ್ರಕಾರ, ಹಣ್ಣನ್ನು ಸಂಪೂರ್ಣವಾಗಿ ತಿನ್ನುವುದಕ್ಕಿಂತ ಅದನ್ನು ಜ್ಯೂಸ್‌ ಅಥವಾ ಸ್ಮೂಥಿಯಾಗಿ ಸೇವಿಸಿದಾಗ ಸಕ್ಕರೆ ವೇಗವಾಗಿ ದೇಹಕ್ಕೆ ಹೀರಿಕೊಳ್ಳುತ್ತದೆ.
ಹಣ್ಣುಗಳನ್ನು ಬ್ಲೆಂಡ್ ಮಾಡುವಾಗ ಅವುಗಳ ನಾರಿನಾಂಶದ ರಚನೆ ಹಾನಿಗೊಳಗಾಗುತ್ತದೆ. ಇದರಿಂದ ಹೊಟ್ಟೆಯಿಂದ ಆಹಾರ ವೇಗವಾಗಿ ಹೊರಬಂದು, ಅದರಲ್ಲಿರುವ ನೈಸರ್ಗಿಕ ಸಕ್ಕರೆಗಳು ತ್ವರಿತವಾಗಿ ರಕ್ತದಲ್ಲಿ ಸೇರುತ್ತವೆ. ಪರಿಣಾಮವಾಗಿ ರಕ್ತದಲ್ಲಿನ ಗ್ಲೂಕೋಸ್ ಮಟ್ಟ ತಕ್ಷಣ ಏರಿಕೆಯಾಗಬಹುದು.

ಮಿಲ್ಕ್‌ಶೇಕ್‌ಗಳಲ್ಲಿ ಹೆಚ್ಚುವರಿ ಸಕ್ಕರೆ, ಐಸ್‌ಕ್ರೀಂ ಮತ್ತು ಕೊಬ್ಬಿನ ಪ್ರಮಾಣ ಅಧಿಕವಾಗಿರುವುದರಿಂದ ರಕ್ತದಲ್ಲಿನ ಸಕ್ಕರೆ ತಕ್ಷಣವೇ ಹೆಚ್ಚಾಗುತ್ತದೆ. ಜೊತೆಗೆ ಹೆಚ್ಚಿನ ಕೊಬ್ಬು ದೇಹದಲ್ಲಿ ಇನ್ಸುಲಿನ್‌ ಪ್ರತಿರೋಧವನ್ನು ಹೆಚ್ಚಿಸಬಹುದು. ಆದರೆ ಸ್ಮೂದಿಗಳು ಸಂಪೂರ್ಣ ಸುರಕ್ಷಿತವೆಂದಲ್ಲ. ಬಾಳೆಹಣ್ಣು, ಮಾವಿನಹಣ್ಣು, ಖರ್ಜೂರ ಹಾಗೂ ಜೇನುತುಪ್ಪವನ್ನು ಸೇರಿಸಿ ತಯಾರಿಸಿದ ಸ್ಮೂದಿಯೂ ಹೆಚ್ಚಿನ ಪ್ರಮಾಣದ ಸಕ್ಕರೆಯನ್ನು ಒದಗಿಸಿ ಗ್ಲೂಕೋಸ್‌ ಮಟ್ಟವನ್ನು ಹೆಚ್ಚಿಸಬಹುದು.

ಸಾಮಾನ್ಯ ಮಿಲ್ಕ್‌ಶೇಕ್‌ಗಳು ಮಧುಮೇಹಿಗಳಿಗೆ ಹೆಚ್ಚು ಅಪಾಯಕಾರಿ, ಏಕೆಂದರೆ ಅವುಗಳಲ್ಲಿ ಸಂಸ್ಕರಿತ ಸಕ್ಕರೆ ಮತ್ತು ಕೊಬ್ಬಿನ ಪ್ರಮಾಣ ಅಧಿಕವಾಗಿರುತ್ತದೆ. ಆದರೆ ಹೆಚ್ಚು ಹಣ್ಣುಗಳಿಂದ ತಯಾರಿಸಿದ ಸ್ಮೂದಿಗಳೂ ರಕ್ತದಲ್ಲಿನ ಸಕ್ಕರೆಯನ್ನು ವೇಗವಾಗಿ ಹೆಚ್ಚಿಸಬಹುದು. ಆದ್ದರಿಂದ ಪ್ರೋಟೀನ್‌, ನಾರಿನಾಂಶ ಮತ್ತು ಆರೋಗ್ಯಕರ ಕೊಬ್ಬುಗಳನ್ನು ಒಳಗೊಂಡ ಸಮತೋಲನಿತ ಸ್ಮೂದಿಯೇ ಮಧುಮೇಹಿಗಳಿಗೆ ಉತ್ತಮ ಆಯ್ಕೆಯಾಗಿದೆ. ಮಧುಮೇಹ ಇರುವವರು ಯಾವುದೇ ಪಾನೀಯವನ್ನು ಸೇವಿಸಿದ ನಂತರ ತಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಪರಿಶೀಲಿಸಿ, ವೈದ್ಯರು ಅಥವಾ ಪೌಷ್ಟಿಕ ತಜ್ಞರ ಸಲಹೆ ಪಡೆಯುವುದು ಉತ್ತಮ.

Which increases blood sugar levels, milkshakes or smoothies? – ತುಳುಟೈಮ್ಸ್

ಇದನ್ನೂ ಓದಿ :ರಾಜ್ಯದ ಸರ್ಕಾರಿ ಕಾಲೇಜುಗಳಲ್ಲಿ 50 ಕೃತಕ ಬುದ್ಧಿಮತ್ತೆ ಪ್ರಯೋಗಾಲಯಗಳಿಗೆ ಅನುಮೋದನೆ

===

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ :https://www.youtube.com/live/4pEuD7fDOuo?si=V8irPRmp1dzzXMkT

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 184

You cannot copy content of this page