ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಭಾರತೀಯ ಮನೆಗಳಲ್ಲಿ ರಾತ್ರಿ ವೇಳೆಯಲ್ಲಿ ಗಂಭೀರವಾದ ಬಿಸಿಗಾಳಿ ಸಮಸ್ಯೆ

ಬಿಸಿಗಾಳಿ : Tulu Times l ಭಾರತೀಯ ಮನೆಗಳಲ್ಲಿ ರಾತ್ರಿ ವೇಳೆಯಲ್ಲೂ ಉಷ್ಣಾಂಶ ಹೆಚ್ಚಾಗಿರುವುದು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಹೊಸ ಅಧ್ಯಯನ ತಿಳಿಸಿದೆ. ವಿಶೇಷವಾಗಿ ಉಷ್ಣತೆಯ ಅಲೆಗಳ ಸಮಯದಲ್ಲಿ ರಾತ್ರಿ ತಾಪಮಾನ ಏರಿಕೆಯಿಂದ ಸಾವಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧ್ಯಯನ ಎಚ್ಚರಿಸಿದೆ.

ಅಧ್ಯಯನದ ಪ್ರಕಾರ, ಮನೆಯೊಳಗಿನ ತಾಪಮಾನ 26ರಿಂದ 28 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾದರೆ ನಿದ್ರೆಯ ಗುಣಮಟ್ಟ ಕುಸಿಯುತ್ತದೆ. 30 ಡಿಗ್ರಿಗಿಂತ ಹೆಚ್ಚು ಉಷ್ಣಾಂಶ ದಾಖಲಾಗಿದ್ದರೆ ದೀರ್ಘಕಾಲದ ಅಸ್ವಸ್ಥತೆ ಹಾಗೂ ದೇಹದ ಮೇಲೆ ನಿರಂತರ ಒತ್ತಡ ಉಂಟಾಗುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಏರುತ್ತಿರುವ ತಾಪಮಾನ ಮತ್ತು ತೀವ್ರ ಹವಾಮಾನ ಘಟನೆಗಳು ನಮ್ಮ ನಗರಗಳು, ಹಳ್ಳಿಗಳು, ಆರ್ಥಿಕತೆ ಮತ್ತು ಜನರ ದೈನಂದಿನ ಬದುಕಿನ ಮೇಲೆ ಪರಿಣಾಮ ಬೀರುತ್ತಿವೆ. ಹೀಟ್ ಸ್ಟ್ರೆಸ್ ನಮ್ಮ ಕಾಲದ ದೊಡ್ಡ ಸವಾಲುಗಳಲ್ಲಿ ಒಂದಾಗಿದೆ ಎಂದು ಎನ್ನಲಾಗಿದೆ.‌

ತಜ್ಞರ ಪ್ರಕಾರ, ಕಾಂಕ್ರೀಟ್ ಕಟ್ಟಡಗಳು, ಕಡಿಮೆ ಗಾಳಿಯ ಹರಿವು, ಹಸಿರು ಪ್ರದೇಶಗಳ ಕೊರತೆ ಮತ್ತು ನಗರೀಕರಣದ ವೇಗದಿಂದ ಮನೆಗಳು ದಿನದ ಬಿಸಿಯನ್ನು ರಾತ್ರಿ ವೇಳೆಯಲ್ಲೂ ಹಿಡಿದುಕೊಳ್ಳುತ್ತಿವೆ. ಇದರಿಂದ ವಿಶೇಷವಾಗಿ ಹಿರಿಯರು, ಮಕ್ಕಳು ಮತ್ತು ದಿನಗೂಲಿ ಕಾರ್ಮಿಕರ ಆರೋಗ್ಯಕ್ಕೆ ಹೆಚ್ಚಿನ ಅಪಾಯ ಎದುರಾಗುತ್ತಿದೆ. ಅದಕ್ಕಾಗಿ, ಉಷ್ಣತೆಯ ಸಮಸ್ಯೆ ಎದುರಿಸಲು ಮನೆಗಳಲ್ಲಿ ಉತ್ತಮ ಗಾಳಿಯ ಹರಿವು, ಹಸಿರು ವಾತಾವರಣ, ತಂಪು ಮೇಲ್ಚಾವಣಿ ತಂತ್ರಜ್ಞಾನ ಮತ್ತು ಸಮರ್ಪಕ ನಗರ ಯೋಜನೆ ಅಗತ್ಯವೆಂದು ಅಧ್ಯಯನ ಸೂಚಿಸಿದೆ.

Indian homes face serious heatwave problem at night – ತುಳುಟೈಮ್ಸ್

ಇದನ್ನೂ ಓದಿ :ದೆಹಲಿಯಲ್ಲಿ ಖಾಸಗಿ ಬಸ್‌ನಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ

====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ :https://www.youtube.com/live/4pEuD7fDOuo?si=4W2UiQle94XRVA9w

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 170

You cannot copy content of this page