ಉಪ್ಪಿನಂಗಡಿ: Tulu Times l ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಭಾಗವಾಗಿ ಸರ್ವೀಸ್ ರಸ್ತೆ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಈ ವೇಳೆ ರಸ್ತೆ ಬದಿಯಲ್ಲಿ ಮಲಗಿದ್ದ ವ್ಯಕ್ತಿಯ ಮೇಲೆ ರೋಡ್ ರೋಲರ್ ಹರಿದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.
ರಸ್ತೆ ಕಾಮಗಾರಿ ವೇಳೆ ನಡೆದ ಈ ದುರ್ಘಟನೆಯಲ್ಲಿ ಮೃತಪಟ್ಟಿರುವುದು ಕಾರ್ಮಿಕನೆಂದು ತಿಳಿದು ಬಂದಿದ್ದು, ಘಟನೆ ಮೇ.09ರಂದು ಗಾಂಧಿಪಾರ್ಕ್ ಸಮೀಪ ಸಂಭವಿಸಿದೆ. ಅಪಘಾತದ ತೀವ್ರತೆಗೆ ಮೃತದೇಹ ನಜ್ಜುಗುಜ್ಜಾಗಿರುವುದಾಗಿ ಮೂಲಗಳು ತಿಳಿಸಿವೆ. ಮೃತ ವ್ಯಕ್ತಿ ಉತ್ತರ ಭಾರತದ ಮೂಲದ ಕಾರ್ಮಿಕನಾಗಿರಬಹುದು ಎಂದು ಶಂಕಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.
A person died when a road roller broke during road work – ತುಳುಟೈಮ್ಸ್
ಇದನ್ನೂ ಓದಿ :ರಸ್ತೆ ಕಾಮಗಾರಿ ವೇಳೆ ರೋಡ್ ರೋಲರ್ ಹರಿದು ವ್ಯಕ್ತಿ ಸಾವು
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/0MQyAqLZI3Y?si=eiw4bF5Xh6ZAbjH8











