ಬೇಸಿಗೆ : Tulu Times l ಉಷ್ಣತೆಯ ತೀವ್ರತೆ ದಿನೇ ದಿನೇ ಹೆಚ್ಚುತ್ತಿರುವ ಈ ದಿನಗಳಲ್ಲಿ, ನಾವು ಏನು ತಿನ್ನುತ್ತೇವೆ ಎಂಬುದು ನೀರು ಕುಡಿಯುವಷ್ಟೇ ಮುಖ್ಯವಾಗುತ್ತಿದೆ. ಬೇಸಿಗೆಯಲ್ಲಿ ಸಾಮಾನ್ಯವಾಗಿ ಹಣ್ಣುಗಳು, ತಂಪು ಪಾನೀಯಗಳು ಹೆಚ್ಚು ಗಮನ ಸೆಳೆಯುತ್ತವೆ. ಆದರೆ ಎಲ್ಲಾ ತರಕಾರಿಗಳೂ ಈ ಸಮಯದಲ್ಲಿ ಸಮಾನವಾಗಿ ಅನುಕೂಲಕರವಲ್ಲ. ಕೆಲವು ತರಕಾರಿಗಳು ದೇಹದ ಉಷ್ಣತೆಯನ್ನು ಹೆಚ್ಚಿಸಬಹುದು ಅಥವಾ ಜೀರ್ಣಕ್ರಿಯೆಗೆ ಹೆಚ್ಚಿನ ಒತ್ತಡ ತರುತ್ತವೆ. ಆದ್ದರಿಂದ, ಈ ಬಿಸಿಗಾಳಿಯ ಸಮಯದಲ್ಲಿ ಯಾವ ತರಕಾರಿಗಳನ್ನು ಮಿತವಾಗಿ ಸೇವಿಸಬೇಕು ಎಂಬ ಅರಿವು ಅಗತ್ಯ.
ದೇಹದ ಉಷ್ಣತೆಯನ್ನು ಹೆಚ್ಚಿಸಬಹುದಾದ 6 ತರಕಾರಿಗಳು
1. ಕ್ಯಾರೆಟ್, ಮೂಲಂಗಿ, ಶಲಗಂ ; ಇವುಗಳಲ್ಲಿ ಕಾಂಪ್ಲೆಕ್ಸ್ ಕಾರ್ಬೋಹೈಡ್ರೇಟ್ ಮತ್ತು ಫೈಬರ್ ಹೆಚ್ಚಿದ್ದು, ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಇದರ ಪರಿಣಾಮವಾಗಿ ದೇಹದಲ್ಲಿ ಮೆಟಬಾಲಿಕ್ ಹೀಟ್ ಹೆಚ್ಚಾಗಬಹುದು.
2. ಬದನೇಕಾಯಿ ; ಸ್ವಾಭಾವಿಕವಾಗಿ ‘ಥರ್ಮೋಜೆನಿಕ್’ ಗುಣ ಹೊಂದಿರುವುದರಿಂದ ದೇಹದ ಉಷ್ಣತೆಯನ್ನು ಹೆಚ್ಚಿಸಬಹುದು. ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ಹೊಟ್ಟೆ ಉಬ್ಬರವೂ ಉಂಟಾಗಬಹುದು.
3. ಸಾಸಿವೆ ಸೊಪ್ಪು; ಇವು ದೇಹದಲ್ಲಿ ಉಷ್ಣತೆಯನ್ನು ಹೆಚ್ಚಿಸುವ ಗುಣ ಹೊಂದಿದ್ದು, ಬಿಸಿಗಾಳಿಯಲ್ಲಿ ಚರ್ಮದ ಸಮಸ್ಯೆಗಳು (ಹೀಟ್ ರ್ಯಾಶ್) ಹೆಚ್ಚಾಗುವ ಸಾಧ್ಯತೆ ಇದೆ.
4. ನುಗ್ಗೆಕಾಯಿ; ಹೆಚ್ಚು ಫೈಬರ್ ಹೊಂದಿರುವುದರಿಂದ ಜೀರ್ಣಕ್ರಿಯೆಯನ್ನು ಉತ್ತೇಜಿಸಿ ದೇಹದ ಒಳಗಿನ ಉಷ್ಣತೆಯನ್ನು ಸ್ವಲ್ಪ ಹೆಚ್ಚಿಸಬಹುದು.
5. ಈರುಳ್ಳಿ;
ಸ್ವಲ್ಪ ಪ್ರಮಾಣದಲ್ಲಿ ತಂಪು ನೀಡಿದರೂ, ಹೆಚ್ಚು ಸೇವಿಸಿದರೆ ಗ್ಯಾಸು ಮತ್ತು ಅಜೀರ್ಣಕ್ಕೆ ಕಾರಣವಾಗಬಹುದು.
6. ಗುಾರ್ ಫಳ್ಳಿ (Cluster Beans)
ಇವುಗಳಲ್ಲಿ ಇರುವ ಒಲಿಗೋಸ್ಯಾಕ್ರೈಡ್ಸ್ ಜೀರ್ಣವಾಗುವಾಗ ಫರ್ಮೆಂಟೇಶನ್ ಆಗಿ ಹೊಟ್ಟೆ ಅಸ್ವಸ್ಥತೆ ಉಂಟುಮಾಡಬಹುದು, ಇದು ಡೀಹೈಡ್ರೇಶನ್ ಅಪಾಯವನ್ನು ಹೆಚ್ಚಿಸುತ್ತದೆ.
ಅಡುಗೆ ವಿಧಾನವೂ ಮುಖ್ಯ; ತರಕಾರಿಗಳಷ್ಟೇ ಅಲ್ಲ, ಅವುಗಳನ್ನು ಹೇಗೆ ತಯಾರಿಸುತ್ತೇವೆ ಎಂಬುದೂ ದೇಹದ ಮೇಲೆ ಪರಿಣಾಮ ಬೀರುತ್ತದೆ: ಡೀಪ್ ಫ್ರೈ ಮಾಡಿದ ಆಹಾರಗಳು (ಉದಾ: ಬದನೇಕಾಯಿ ಫ್ರೈ, ಆಲೂ ಟಿಕ್ಕಿ) → ದೇಹದ ಉಷ್ಣತೆ ಹೆಚ್ಚಿಸುತ್ತದೆ.
ಡ್ರೈ ರೋಸ್ಟ್ : ತೇವಾಂಶ ಕಡಿಮೆಯಾಗುತ್ತದೆ, ಹೀಟ್ ಹೆಚ್ಚಿಸುವ ಅಂಶಗಳು ಗಟ್ಟಿಯಾಗುತ್ತವೆ
ಭಾರಿ ಮಸಾಲೆ ತಡ್ಕಾ (ಮೆಣಸಿನಕಾಯಿ, ಮೆಣಸು, ಗರಂ ಮಸಾಲಾ) : ದೇಹದಲ್ಲಿ ಉಷ್ಣತೆ ಮತ್ತು ಡೀಹೈಡ್ರೇಶನ್ ಹೆಚ್ಚಿಸುತ್ತದೆ.
ಹೆಚ್ಚು ಎಣ್ಣೆ ಬಳಕೆ : ಜೀರ್ಣಕ್ರಿಯೆ ನಿಧಾನಗೊಳಿಸುತ್ತದೆ
ಈ ತರಕಾರಿಗಳನ್ನು ಸಂಪೂರ್ಣವಾಗಿ ತಪ್ಪಿಸುವ ಅಗತ್ಯವಿಲ್ಲ. ಆದರೆ: ಮಿತ ಪ್ರಮಾಣದಲ್ಲಿ ಸೇವಿಸಬೇಕು, ಹೆಚ್ಚು ನೀರಿನಾಂಶ ಇರುವ ತರಕಾರಿಗಳ ಜೊತೆ ಸೇರಿಸಿ ತಿನ್ನಬೇಕು, ಕುದಿಸಿ, ಸ್ಟೀಮ್ ಮಾಡಿ ಅಥವಾ ಕಡಿಮೆ ಮಸಾಲೆಯಲ್ಲಿ ತಯಾರಿಸುವುದು ಉತ್ತಮ.ಬಿಸಿಗಾಳಿಯಲ್ಲಿ ದೇಹವನ್ನು ತಂಪಾಗಿ ಮತ್ತು ಹೈಡ್ರೇಟೆಡ್ ಆಗಿ ಇಡುವುದು ಅತ್ಯಂತ ಮುಖ್ಯ. ಆಹಾರದ ಸಣ್ಣ ಬದಲಾವಣೆಗಳು ದೊಡ್ಡ ಪರಿಣಾಮ ಬೀರುತ್ತವೆ. ಸರಿಯಾದ ಆಯ್ಕೆ ಮತ್ತು ಅಡುಗೆ ವಿಧಾನಗಳಿಂದ ಬೇಸಿಗೆಯನ್ನು ಆರೋಗ್ಯಕರವಾಗಿ ಎದುರಿಸಬಹುದು.
Here are 6 vegetables that increase body temperature in summer – ತುಳುಟೈಮ್ಸ್
ಇದನ್ನೂ ಓದಿ :ವಿಜಯ್ ರಾಜಕೀಯ ಪಯಣದ ‘ಸೆಕೆಂಡ್ ಹಾಫ್’ ಆರಂಭ
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://www.youtube.com/live/4pEuD7fDOuo?si=oOZCKjq7EZ-e2CBd











