ಬ್ರೇಕಿಂಗ್ ನ್ಯೂಸ್
ಬೆಳ್ತಂಗಡಿ

ದಿಗ್ವಿಜಯ ಸಾಧಿಸಿದ ಬಿಜೆಪಿ : ಬೆಳ್ತಂಗಡಿ ಬಿಜೆಪಿ ಕಾರ್ಯಕರ್ತರಿಂದ ಗೆಲುವಿನ ಸಂಭ್ರಮಾಚರಣೆ

ಬೆಳ್ತಂಗಡಿ : Tulu Times l ಮೇ 04 ಪಶ್ಚಿಮ ಬಂಗಾಳ, ಅಸ್ಸಾಂ, ಪುದುಚೇರಿ ವಿಧಾನ ಸಭಾ ಚುನಾವಣೆಯಲ್ಲಿ ಬಹುಮತದೊಂದಿಗೆ ದಿಗ್ವಿಜಯ ಸಾಧಿಸಿ, ಬಿಜೆಪಿ ಆಡಳಿತ ಚುಕ್ಕಾಣಿ ಪಡೆದು ಇತಿಹಾಸ ನಿರ್ಮಾಣ ಮಾಡಿದ ಪ್ರಯುಕ್ತ ಬೆಳ್ತಂಗಡಿ ಬಿಜೆಪಿ ಮಂಡಲ ವತಿಯಿಂದ ಪಕ್ಷದ ಕಚೇರಿ ಮುಂಭಾಗದಲ್ಲಿ ಸಿಡಿಮದ್ದು ಸಿಡಿಸಿ, ಜೈ ಕಾರ ಘೋಷಣೆ ಮೊಳಗಿಸುವ ಮೂಲಕ, ಸಿಹಿತಿಂಡಿ ಹಂಚಿಕೊಂಡು ಗೆಲುವಿನ ಸಂಭ್ರಮಾಚರಣೆ ಮಾಡಲಾಯಿತು.

ಬೆಳ್ತಂಗಡಿ ಬಿಜೆಪಿ ಮಂಡಲಾಧ್ಯಕ್ಷ ಶ್ರೀನಿವಾಸ್ ರಾವ್ ಮಾತನಾಡಿ, ಪಂಚ ರಾಜ್ಯಗಳಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದೆ. ಪಶ್ಚಿಮ ಬಂಗಾಳದಲ್ಲಿ ಭಯೋತ್ಪಾದನೆಯ 15 ವರ್ಷದ ಆಡಳಿತವನ್ನು ಮತದಾರರು ತಿರಸ್ಕಾರ ಮಾಡಿ ಭಾರತೀಯ ಜನತಾ ಪಾರ್ಟಿ ನರೇಂದ್ರ ಮೋದಿ ನಾಯಕತ್ವವನ್ನು ಮೆಚ್ಚಿ 200 ಸ್ಥಾನದಲ್ಲಿ  ಅವಿಸ್ಮರಣೀಯ ಐತಿಹಾಸಿಕ ಗೆಲುವು ಸಾಧಿಸಿದೆ. ಅದೇ ರೀತಿ  ಅಸ್ಸಾಂ, ಪುದುಚೇರಿ, ರಾಜ್ಯದಲ್ಲಿ ಬಿಜೆಪಿ ಬಹುಮತ ಆಡಳಿತ ಚುಕ್ಕಾಣಿ ಪಡೆದಿದೆ. ಪಂಚ  ರಾಜ್ಯ ಚುನಾವಣೆಯಲ್ಲಿ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಧ್ಯೆಯವನ್ನು ಸ್ವೀಕರಿಸಿದ ಮತದಾರರು ನಾಯಕತ್ವ ವಿಶ್ವಕ್ಕೆ ಮಾದರಿಯಾಗಿದೆ. ಐದು ರಾಜ್ಯದಲ್ಲಿ 3 ರಾಜ್ಯದಲ್ಲಿ ಸ್ಪಷ್ಟ ಬಹುಮತ ಪಡೆದಿದೆ ಎಂದರು.

ಈ ಸಂದರ್ಭದಲ್ಲಿ ಪ್ರಮುಖರಾದ ಪ್ರಸಾದ್ ಕುಮಾರ್, ಬಿಜೆಪಿ ಬೆಳ್ತಂಗಡಿ  ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ, ಮನ್ ಕೀ ಬಾತ್ ಜಿಲ್ಲಾ ಪ್ರಭಾರಿ ಸೀತಾರಾಮ್ ಬೆಳಾಲು, ಜಿಲ್ಲಾ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಉಮೇಶ್ ಕುಲಾಲ್, ಮಂಡಲ ಯುವಮೋರ್ಚಾ ಮೋರ್ಚಾ ಉಪಾಧ್ಯಕ್ಷರಾದ ಗಣೇಶ್ ಲಾಯಿಲ, ಕಾರ್ಯದರ್ಶಿ ಜಗದೀಶ್ ಕನ್ನಾಜೆ, ಲಾಯಿಲ ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಅರವಿಂದ್ ಲಾಯಿಲ, ನಗರ ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಶರತ್, ಗಿರೀಶ್ ಡೋಂಗ್ರೆ ಲಾಯಿಲ, ಸುಧಾಕರ್ ಬಿ. ಎಲ್, ವಿಠಲ್ ಗುರುವಾಯನಕೆರೆ, ಮಹೇಶ್, ಇನ್ನೂ ಅನೇಕ ಪ್ರಮುಖರು ಉಪಸ್ಥಿತರಿದ್ದರು.

BJP achieves victory: Belthangady BJP workers celebrate victory – ತುಳುಟೈಮ್ಸ್

ಇದನ್ನೂ ಓದಿ :ಬೇಸಿಗೆಯ ಬಿಸಿಲಿಗೂ ಮನುಷ್ಯನ ಸಿಟ್ಟಿಗೂ ವಿಜ್ಞಾನದಲ್ಲಿ ಏನು ಸಂಬಂಧ?

===

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ :https://www.youtube.com/live/4pEuD7fDOuo?si=es4tLDMxk5rshEBm

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 14

You cannot copy content of this page