ಕರ್ನಾಟಕ : Tulu Times l ಕರ್ನಾಟಕ ಹೈಕೋರ್ಟ್ ಮಹಿಳೆಯರ ಆರೋಗ್ಯ ಮತ್ತು ಗೌರವವನ್ನು ಕಾಪಾಡುವ ದಿಟ್ಟ ಹೆಜ್ಜೆಯಾಗಿ ಮಹತ್ವದ ತೀರ್ಪು ನೀಡಿದೆ. ರಾಜ್ಯ ಸರ್ಕಾರವು ಪ್ರತಿ ತಿಂಗಳು 18 ರಿಂದ 52 ವರ್ಷ ವಯಸ್ಸಿನ ಮಹಿಳಾ ಉದ್ಯೋಗಿಗಳಿಗೆ ಮಾಸಿಕ ರಜೆ ನೀಡುವ ನೀತಿಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂದು ನ್ಯಾಯಾಲಯ ಸ್ಪಷ್ಟ ನಿರ್ದೇಶನ ನೀಡಿದೆ.
ಈ ಆದೇಶವು ಕೇವಲ ಐಟಿ ಕಂಪನಿಗಳು ಅಥವಾ ದೊಡ್ಡ ಸಂಸ್ಥೆಗಳಿಗಷ್ಟೇ ಸೀಮಿತವಲ್ಲ. ಎಲ್ಲಾ ನೋಂದಾಯಿತ ಸಂಸ್ಥೆಗಳಲ್ಲಿರುವ ಮಹಿಳೆಯರಿಗೆ—ಸ್ಥಿರ, ಒಪ್ಪಂದ ಮತ್ತು ಔಟ್‌ಸೋರ್ಸ್ ಸಿಬ್ಬಂದಿ ಸೇರಿದಂತೆ—ಇದು ಅನ್ವಯವಾಗುತ್ತದೆ. ಹೋಟೆಲ್ ಕಾರ್ಮಿಕರು, ದಿನಗೂಲಿ ಕೆಲಸಗಾರರು ಸೇರಿದಂತೆ ಅಸಂಘಟಿತ ವಲಯದ ಮಹಿಳೆಯರೂ ಈ ಸೌಲಭ್ಯವನ್ನು ಪಡೆಯಬೇಕು ಎಂದು ನ್ಯಾಯಾಲಯ ಹೇಳಿದೆ.
ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ನೇತೃತ್ವದ ಪೀಠವು, ಮಾಸಿಕ ಆರೋಗ್ಯವು ಮಹಿಳೆಯರ ರೈಟ್ ಆಫ್ ಲೈಪ್ ಅವಿಭಾಜ್ಯ ಅಂಗವಾಗಿದೆ ಎಂದು ಅಭಿಪ್ರಾಯಪಟ್ಟಿದೆ. ಇದು ಕೇವಲ ರಜೆ ವಿಷಯವಲ್ಲ, ಮಹಿಳೆಯರ ಗೌರವದ ಪ್ರಶ್ನೆಯಾಗಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ರಾಜ್ಯ ಸರ್ಕಾರವು ಈ ನೀತಿಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಸಮಗ್ರ ಮಾರ್ಗಸೂಚಿಗಳನ್ನು ಹೊರಡಿಸಬೇಕು ಎಂದು ನ್ಯಾಯಾಲಯ ಸೂಚಿಸಿದೆ. ಜೊತೆಗೆ, ಪ್ರಸ್ತಾಪಿತ Karnataka Menstrual Leave and Hygiene Bill, 2025 ಅನ್ನು ಶೀಘ್ರವೇ ಕಾನೂನಾಗಿ ರೂಪಿಸಲು ಒತ್ತಾಯಿಸಿದೆ.
ಈ ತೀರ್ಪು ಮಹಿಳೆಯರ ಕೆಲಸದ ಸ್ಥಳದ ಹಕ್ಕುಗಳಿಗೆ ಹೊಸ ದಿಕ್ಕನ್ನು ನೀಡಿದೆ. ಆರೋಗ್ಯ, ಗೌರವ ಮತ್ತು ಸಮಾನತೆಗಾಗಿ ಇದು ಮಹತ್ವದ ಮೈಲಿಗಲ್ಲಾಗಿದ್ದು, ಮುಂದಿನ ದಿನಗಳಲ್ಲಿ ಮಹಿಳಾ ಸ್ನೇಹಿ ನೀತಿಗಳಿಗೆ ಪ್ರೇರಣೆ ಆಗುವ ಸಾಧ್ಯತೆ ಇದೆ.
High Court orders to make monthly leave compulsory – ತುಳುಟೈಮ್ಸ್
ಇದನ್ನೂ ಓದಿ :ವಯಸ್ಸು ಹೆಚ್ಚಿದಂತೆ ವ್ಯಕ್ತಿತ್ವ ಏಕೆ ಬದಲಾಗುತ್ತದೆ?
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://www.youtube.com/live/_cOFPNo27XQ?si=cMu7h0oMjZ4EO8tj











