ಬ್ರೇಕಿಂಗ್ ನ್ಯೂಸ್
ದೇಶ

ವಿಮಾನ ಕಂಪನಿಗಳಿಗೆ ರಿಲೀಫ್: ಪ್ರಮುಖ ವಿಮಾನ ನಿಲ್ದಾಣ ಶುಲ್ಕದಲ್ಲಿ 25% ಕಡಿತ

ನವದೆಹಲಿ: Tulu Times l ದೇಶೀಯ ವಿಮಾನ ಸೇವೆಗಳಿಗೆ ಸಂಬಂಧಿಸಿದಂತೆ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಲ್ಯಾಂಡಿಂಗ್ ಹಾಗೂ ಪಾರ್ಕಿಂಗ್ ಶುಲ್ಕಗಳನ್ನು 25% ಕಡಿತಗೊಳಿಸಲು ಭಾರತದ ಏರ್‌ಪೋರ್ಟ್ ಟ್ಯಾರಿಫ್ ನಿಯಂತ್ರಕರಿಂಷ ಆದೇಶ ನೀಡಲಾಗಿದೆ. ಈ ರಿಯಾಯಿತಿ ಮೂರು ತಿಂಗಳ ಕಾಲ ಜಾರಿಯಲ್ಲಿರಲಿದೆ.

ಇರಾನ್ ಯುದ್ಧದ ಪರಿಣಾಮದಿಂದ ಆರ್ಥಿಕ ಒತ್ತಡ ಎದುರಿಸುತ್ತಿರುವ ವಿಮಾನ ಕಂಪನಿಗಳಿಗೆ ಇದು ಮಹತ್ವದ ನೆರವಾಯಿತು. ಜೊತೆಗೆ, ಪಾಕಿಸ್ತಾನದ ಗಗನಪಥವನ್ನು ಬಳಸಲು ನಿರ್ಬಂಧ ಇರುವುದರಿಂದ ಭಾರತೀಯ ವಿಮಾನ ಕಂಪನಿಗಳು ಹೆಚ್ಚುವರಿ ಸವಾಲುಗಳನ್ನು ಎದುರಿಸುತ್ತಿವೆ.

ಇಂಡಿಗೋ, ಏರ್ ಇಂಡಿಯಾ ಮನವಿ ಹಿನ್ನೆಲೆ ಇಂಡಿಗೋ ಮತ್ತು ಏರ್ ಇಂಡಿಯಾ ಕಂಪನಿಗಳು ವಿಮಾನ ನಿಲ್ದಾಣ ಶುಲ್ಕಗಳನ್ನು ಪರಿಷ್ಕರಿಸುವಂತೆ ಮನವಿ ಮಾಡಿದ ಹಿನ್ನೆಲೆ ಈ ನಿರ್ಧಾರ ಕೈಗೊಳ್ಳಲಾಗಿದೆ. ದೇಶದ ಪ್ರಮುಖ ಎರಡು ವಿಮಾನ ಕಂಪನಿಗಳಾದ ಇವುಗಳು ಈಗ ದ್ವಿಗುಣ ಒತ್ತಡಕ್ಕೆ ಸಿಲುಕಿವೆ.

ವಿಮಾನೋದ್ಯಮದಲ್ಲಿ ಹೆಚ್ಚಿದ ವೆಚ್ಚ;

ಇಂಧನ ಮತ್ತು ಕಾರ್ಮಿಕ ವೆಚ್ಚಗಳ ನಂತರ ವಿಮಾನ ನಿಲ್ದಾಣ ಮತ್ತು ಏರ್ ನ್ಯಾವಿಗೇಶನ್ ಸೇವೆಗಳ ಶುಲ್ಕವು ವಿಮಾನ ಕಂಪನಿಗಳ ಮೂರನೇ ಅತಿ ದೊಡ್ಡ ವೆಚ್ಚವಾಗಿದ್ದು, ಅಂತರಾಷ್ಟ್ರೀಯ ಏರ್ ಟ್ರಾನ್ಸ್‌ಪೋರ್ಟ್ ಅಸೋಸಿಯೇಷನ್ ತಿಳಿಸಿದೆ.

ಷೇರು ಮಾರುಕಟ್ಟೆಯಲ್ಲಿ ಏರಿಕೆ;

ಈ ನಿರ್ಧಾರದಿಂದ ಇಂಡಿಗೋ ಕಂಪನಿಯ ಷೇರುಗಳು ಬುಧವಾರ ಸುಮಾರು 10% ಏರಿಕೆ ಕಂಡವು. ಅಮೆರಿಕಾದಿಂದ ಇರಾನ್ ಜೊತೆ ಎರಡು ವಾರಗಳ ಯುದ್ಧ ವಿರಾಮ ಘೋಷಣೆಯಾದ ಹಿನ್ನೆಲೆ, ವಿಮಾನೋದ್ಯಮ ಕ್ಷೇತ್ರದಲ್ಲಿ ಹೂಡಿಕೆದಾರರ ವಿಶ್ವಾಸ ಹೆಚ್ಚಾಗಿದೆ.

ಸರ್ಕಾರದ ನಿರ್ದೇಶನದ ಮೇರೆಗೆ ಏರ್‌ಪೋರ್ಟ್‌ಗಳ ಆರ್ಥಿಕ ನಿಯಂತ್ರಣ ಪ್ರಾಧಿಕಾರ (AERA) ಈ ಕ್ರಮ ಕೈಗೊಂಡಿದ್ದು, ಕಡಿತಗೊಂಡ ಶುಲ್ಕಗಳಿಂದ ಉಂಟಾಗುವ ಆದಾಯ ಕೊರತೆಯನ್ನು ಭವಿಷ್ಯದ ಟ್ಯಾರಿಫ್ ಪರಿಷ್ಕರಣೆ ವೇಳೆ ಪರಿಗಣಿಸಲಾಗುತ್ತದೆ ಎಂದು ತಿಳಿಸಿದೆ. ಈ ಕ್ರಮವು ದೇಶೀಯ ವಿಮಾನ ಸೇವೆಗಳ ನಿರ್ವಹಣೆಗೆ ಸಹಾಯವಾಗುವ ಜೊತೆಗೆ ಪ್ರಯಾಣಿಕರಿಗೆ ಸಹ ಪರೋಕ್ಷವಾಗಿ ಲಾಭಕಾರಿಯಾಗುವ ನಿರೀಕ್ಷೆ ಇದೆ.

Relief for airlines: 25% reduction in major airport charges – ತುಳುಟೈಮ್ಸ್

ಇದನ್ನೂ ಓದಿ :ಭಾರತ–ಅಮೆರಿಕಾ ವ್ಯಾಪಾರ ವೃದ್ಧಿಗೆ ಹೊಸ ಪೋರ್ಟಲ್: ಪಿಯೂಷ್ ಗೋಯಲ್ ಕರೆ

===

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ :https://www.youtube.com/live/fyRbYgSgCAw?si=3rWFFV3RIKKCjp5J

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 20

You cannot copy content of this page