ಬ್ರೇಕಿಂಗ್ ನ್ಯೂಸ್
ಕರ್ನಾಟಕ

ದ್ವಿತೀಯ ಪಿಯುಸಿ ಫಲಿತಾಂಶ : 86% ಉತ್ತೀರ್ಣತೆ

ಕರ್ನಾಟಕ : Tulu Times l 2026ನೇ ಸಾಲಿನ ದ್ವಿತೀಯ ಪಿಯುಸಿ (2nd PUC) ಪರೀಕ್ಷೆ-1ರ ಫಲಿತಾಂಶ ಪ್ರಕಟವಾಗಿದ್ದು, ರಾಜ್ಯದಾದ್ಯಂತ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದಾರೆ. ಈ ಬಾರಿ ಒಟ್ಟು ಉತ್ತೀರ್ಣ ಪ್ರಮಾಣ 86% ಆಗಿದ್ದು, ಕಳೆದ ವರ್ಷದ 73.45% ಗೆ ಹೋಲಿಸಿದರೆ ಗಮನಾರ್ಹ ಏರಿಕೆ ಕಂಡುಬಂದಿದೆ.

ಈ ವರ್ಷ ಒಟ್ಟು 7,10,363 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಸುಮಾರು 6.10 ಲಕ್ಷ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಮೂಡಬಿದ್ರಿಯ ಆಳ್ವಾಸ್ ಕಾಲೇಜಿನ ದಿಶಾ ಅವರು 600ಕ್ಕೆ 600 ಅಂಕ ಗಳಿಸಿ ರಾಜ್ಯದ ಟಾಪರ್ ಆಗಿ ಹೊರಹೊಮ್ಮಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಎಕ್ಸ್ಪರ್ಟ್ ಕಾಲೇಜಿನ ನಂದನ್ ನಾಯಕ್ ಮತ್ತು ಸಾಮನ್ಯು ಎಸ್. ಶೆಟ್ಟಿ ಅವರು ತಲಾ 99.67% ಅಂಕ ಗಳಿಸಿ ಅಗ್ರಸ್ಥಾನ ಪಡೆದಿದ್ದಾರೆ. ಇವರನ್ನು ಅನುಸರಿಸಿ ದೀಕ್ಷಾ ಶೆಣಾಯ್, ಆದಿತಿ ಐ. ರೆಡ್ಡಿ, ಅಮೋಘ್ ಬಿ. ಲೋಕ ಮತ್ತು ಸುಶಾನ್ ನಾರಾಯಣ ಬಿಲ್ಲವ ಅವರು ತಲಾ 99.33% ಅಂಕಗಳನ್ನು ಪಡೆದು ಮಿಂಚಿದ್ದಾರೆ.

ಕಾರ್ಕಳದ ಜ್ಞಾನಸುಧಾ ಪಿಯು ಕಾಲೇಜಿನ ಚೈತ್ರಿಕಾ ಚೌಧರಿ ಅವರು ವಿಜ್ಞಾನ ವಿಭಾಗದಲ್ಲಿ 597 ಅಂಕಗಳನ್ನು ಗಳಿಸಿದ್ದು, ವೈಷ್ಣವಿ ಕುಲಕರ್ಣಿ ಮತ್ತು ಅನರ್ವಿ ಅವರು ಕೂಡ 597 ಅಂಕಗಳನ್ನು ಪಡೆದು ಅಗ್ರ ಸಾಧಕರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಕಾರ್ಕಳದ ಕ್ರಿಯೇಟಿವ್ ಕಾಲೇಜಿನ ಪ್ರೇರಣಾ ರಾಮಚಂದ್ರ ಹೆಗ್ಡೆ ಅವರು 598 ಅಂಕಗಳನ್ನು ಪಡೆದು (99.67%) ಅತ್ಯುತ್ತಮ ಸಾಧನೆ ತೋರಿದ್ದಾರೆ.

Second PUC result: 86% pass rate – ತುಳುಟೈಮ್ಸ್

ಇದನ್ನೂ ಓದಿ :ರೈತರಿಗೆ ಸಿಹಿ ಸುದ್ದಿ: ರಂಜಕ ಮತ್ತು ಪೊಟ್ಯಾಷ್ ರಸಗೊಬ್ಬರಕ್ಕೆ ಸಹಾಯಧನ ಘೋಷಣೆ

===

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ :https://www.youtube.com/live/fyRbYgSgCAw?si=89L5WHMo06JixxaT

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 155

You cannot copy content of this page