ಬೆಂಗಳೂರು: Tulu Times l ಕರ್ನಾಟಕದ ದ್ವಿತೀಯ ಪಿಯುಸಿ ಫಲಿತಾಂಶಕ್ಕಾಗಿ ಕಾಯುತ್ತಿರುವ ಲಕ್ಷಾಂತರ ವಿದ್ಯಾರ್ಥಿಗಳಿಗೆ ನಿರೀಕ್ಷೆಯಲ್ಲೊಂದು ತಿರುವು ಎದುರಾಗಿದೆ. ಏಪ್ರಿಲ್ 7ರಂದು ಫಲಿತಾಂಶ ಪ್ರಕಟವಾಗಲಿದೆ ಎಂಬ ನಿರೀಕ್ಷೆ ಇದ್ದರೂ, ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯಮಾಪನ ಮಂಡಳಿಯಿಂದ ಫಲಿತಾಂಶ ಪ್ರಕಟಿಸುವುದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಕೊನೆ ಹಂತದ ಮೌಲ್ಯಮಾಪನ ಕೆಲಸ ಬಾಕಿ ಇರುವುದಾಗಿ ವರದಿಯಾಗಿದೆ.
ಮೂಲಗಳ ಪ್ರಕಾರ, ರಾಜ್ಯದಲ್ಲಿ ಜಾರಿಯಲ್ಲಿರುವ ಚುನಾವಣಾ ನಿಯಮಗಳು (Election Code of Conduct) ಫಲಿತಾಂಶ ಪ್ರಕಟಣೆಗೆ ಪ್ರಮುಖ ಅಡ್ಡಿಯಾಗಿವೆ. ಸರ್ಕಾರದ ಅಧಿಕೃತ ಅನುಮೋದನೆ ಅಗತ್ಯವಾಗಿರುವುದರಿಂದ, ಚುನಾವಣಾ ನಿಯಮಾವಳಿ ಸಡಿಲವಾದ ಬಳಿಕವೇ ಫಲಿತಾಂಶ ಪ್ರಕಟಿಸುವ ಸಾಧ್ಯತೆ ಇದೆ. ಕೆಎಸ್ಇಎಬಿ ಅಧ್ಯಕ್ಷ ಪ್ರಕಾಶ್ ಮಾಹಿತಿ ನೀಡಿದ್ದು, ಎರಡು ದಿನ ಫಲಿತಾಂಶ ಪ್ರಕಟವಾಗಲ್ಲ ಎಂದು ಹೇಳಿಕೆ ನೀಡಿರುತ್ತಾರೆ.
ಶೀಘ್ರದಲ್ಲೇ ಫಲಿತಾಂಶ ;
ಈ ವರ್ಷದ ಪರೀಕ್ಷಾ ವೇಳಾಪಟ್ಟಿ ಕಳೆದ ವರ್ಷದಂತೆಯೇ ಇರುವುದರಿಂದ, ಮೌಲ್ಯಮಾಪನ ಪ್ರಕ್ರಿಯೆ ಈಗಾಗಲೇ ಪೂರ್ಣಗೊಂಡಿದೆ. ಅಧಿಕಾರಿಗಳು ಚುನಾವಣಾ ನಿರ್ಬಂಧಗಳು ತೆಗೆಯುತ್ತಿದ್ದಂತೆಯೇ, ಮುಂದಿನ ವಾರದೊಳಗೆ ಫಲಿತಾಂಶ ಪ್ರಕಟವಾಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರಾಜ್ಯದಾದ್ಯಂತ 7 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ದಿನಾಂಕದ ಬಗ್ಗೆ ಸ್ಪಷ್ಟತೆ ಇಲ್ಲದಿದ್ದರೂ, ಶೀಘ್ರದಲ್ಲೇ ಅಧಿಕೃತ ಘೋಷಣೆ ಆಗಲಿದೆ ಎಂಬ ನಿರೀಕ್ಷೆ ಇದೆ.
ಫಲಿತಾಂಶ ಪರಿಶೀಲನೆ ಹೇಗೆ?
ಫಲಿತಾಂಶ ಪ್ರಕಟವಾದ ಬಳಿಕ ವಿದ್ಯಾರ್ಥಿಗಳು ಕೆಳಗಿನ ಅಧಿಕೃತ ವೆಬ್‌ಸೈಟ್‌ಗಳಲ್ಲಿ ತಮ್ಮ ಫಲಿತಾಂಶ ಪರಿಶೀಲಿಸಬಹುದು:
karresults.nic.in
kseab.karnataka.gov.in
ರಿಜಿಸ್ಟರ್ ನಂಬರ್ ನಮೂದಿಸಿ ಅಂಕಪಟ್ಟಿಯನ್ನು ಪಡೆಯಬಹುದು. ವಿದ್ಯಾರ್ಥಿಗಳು ಮತ್ತು ಪೋಷಕರು ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಅಪೂರ್ಣ ಮಾಹಿತಿಗೆ ಒಳಗಾಗದೇ, ಅಧಿಕೃತ ವೆಬ್‌ಸೈಟ್‌ಗಳನ್ನೇ ನಂಬಬೇಕು. ಫಲಿತಾಂಶ ಪ್ರಕಟಣೆ ಸ್ವಲ್ಪ ವಿಳಂಬವಾಗಿದ್ದರೂ, ಅದು ಶೀಘ್ರದಲ್ಲೇ ಹೊರಬರುವ ನಿರೀಕ್ಷೆಯಿದೆ. ವಿದ್ಯಾರ್ಥಿಗಳು ಧೈರ್ಯ ಕಳೆದುಕೊಳ್ಳದೇ, ಅಧಿಕೃತ ಮಾಹಿತಿಗಾಗಿ ಕಾಯುವುದು ಉತ್ತಮ.
Second PUC results not announced: Two-day delay likely – ತುಳುಟೈಮ್ಸ್
ಇದನ್ನೂ ಓದಿ :ನಿಮ್ಮನ್ನು ನೀವು ಗೌರವಿಸುವುದು: ಜೀವನದ ಮೊದಲ ಹೆಜ್ಜೆ
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://www.youtube.com/live/p4-vd_M93Z8?si=9XXLvFt9iIE5tksz











