Expensive Animals: ನಾವು ನೀವೆಲ್ಲಾ ಲಕ್ಷಗಟ್ಟಲೆ ಮೌಲ್ಯದ ಪ್ರಾಣಿಗಳ ಬಗ್ಗೆ ಕೇಳಿದ್ದೇವೆ. ಕೆಲವರ ಬಳಿ ಒಂದು ಕೋಟಿ ಮೌಲ್ಯದ ನಾಯಿ, ಟಗರು, ಕುದುರೆ ಇರೋ ಬಗ್ಗೆ ಕೇಳಿದ್ದೇವೆ. ಆದ್ರೆ ಇಲ್ಲೊಂದು ಕಡೆ ಕೋಟ್ಯಾಂತರ ಬೆಳೆ ಬಾಳುವ ಎಮ್ಮೆ, ಕುದುರೆ ಇದೆ. ನಂಬೋಕೆ ಸಾಧ್ಯವಿಲ್ಲದಿದ್ದರೂ ಇದು ಸತ್ಯ.
ರಾಜಸ್ಥಾನದಲ್ಲಿ ನಡೆಯುತ್ತಿರುವ ವಾರ್ಷಿಕ ಪುಷ್ಕರ್ ಜಾನುವಾರು ಮೇಳ ಭಾರತದಲ್ಲಿಯೇ ಫೇಮಸ್. ಇಲ್ಲಿಗೆ ಕೋಟಿ ಮೌಲ್ಯದ ಜಾನುವಾರುಗಳ ಪ್ರದರ್ಶನ ನಡೆಯುತ್ತದೆ. ಪ್ರದರ್ಶನ ಮಾತ್ರವಲ್ಲದೆ ಮಾರಾಟ ಕೂಡ ನಡೆಯುತ್ತದೆ. ಇದು ಭಾರತದಲ್ಲಿಯೇ ಅತ್ಯಂತ ದುಬಾರಿ ಜಾನುವಾರು ಪ್ರದರ್ಶನ ಮತ್ತು ಮಾರಾಟ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಇಂತಹ ಜಾನುವಾರುಗಳನ್ನು ಖರೀದಿಸಲು, ವೀಕ್ಷಿಸಲೇಂದೇ ಭಾರೀ ಸಂಖ್ಯೆಯಲ್ಲಿ ದೇಶ-ವಿದೇಶಗಳಿಂದ ಆಗಮಿಸುವುದು ವಿಶೇಷ. ಈ ಮೇಳದ ವಿಶೇಷತೆ ಏನು? ಕೋಟಿ ಮೌಲ್ಯದ ಎಮ್ಮೆ ಹಾಗೂ ಕುದುರೆಯ ಬಗ್ಗೆ ತಿಳಿದುಕೊಳ್ಳೋಣ.
ಬರೋಬ್ಬರಿ 23 ಕೋಟಿ ಮೌಲ್ಯದ ಎಮ್ಮೆ!
ಹೌದು. ಈ ಎಮ್ಮೆಯ ಬೆಲೆ ಬರೋಬ್ಬರಿ 23 ಕೋಟಿ ರೂಪಾಯಿ. ರಾಜಸ್ಥಾನದ ಅನ್ಮೋಲ್ ಎಮ್ಮೆ ಮೇಳದ ಪ್ರಮುಖ ಆಕರ್ಷಣೆ. ಇದು ಮಾಮೂಲಿ ಎಮ್ಮೆ ಅಲ್ಲ, ಇದರ ತೂಕವೇ ಬರೋಬ್ಬರಿ ಒಂದೂವರೆ ಸಾವಿರ ಕೆ.ಜಿ. ಇದೆ. ಪ್ರತಿದಿನ ಸಾವಿರಾರು ರುಪಾಯಿ ವೆಚ್ಚ ಮಾಡಿ ಈ ಎಮ್ಮೆಗೆ ವಿಶೇಷ ಆಹಾರ ನೀಡಲಾಗುತ್ತದೆಯಂತೆ. ಅನ್ಮೋಲ್ ಎಮ್ಮೆಯನ್ನು ಸಂತಾನೋತ್ಪತ್ತಿಗಾಗಿ ಬಳಸಲಾಗುತ್ತದೆ. ಇದರಿಂದಲೇ ಮಾಸಿಕವಾಗಿ 4 ಲಕ್ಷ ರೂ. ವರೆಗೆ ಆದಾಯ ಪಡೆಯುತ್ತಾರೆ ಎಮ್ಮೆಯ ಮಾಲೀಕ.
ಇನ್ನು ಉಜ್ಜೈನ್ ಮೂಲದ ಮತ್ತೊಂದು ಎಮ್ಮೆ ರಾಣಾಗೆ 25 ಲಕ್ಷ ರೂ. ವರೆಗೆ ಬಿಡ್ ಬಂದಿದೆಯಂತೆ. 600 ಕೆ.ಜಿ ತೂಕದ, 8 ಅಡಿ ಉದ್ದ ಹಾಗೂ 5.5 ಅಡಿ ಎತ್ತರದ ಈ ಎಮ್ಮೆಯ ಆಹಾರಕ್ಕೆಂದೇ ನಿತ್ಯ 1500 ರು. ವೆಚ್ಚ ತಗಲುತ್ತದೆ.
15 ಕೋಟಿ ಮೌಲ್ಯದ ಕುದುರೆ
ಚಂಡೀಗಢದ ಗೇರಿ ಗಿಲ್ ಅವರ ಕೇವಲ ಎರಡೂವರೆ ವರ್ಷದ ಕುದುರೆ ಶಹಬಾಜ್ ಪುಷ್ಕರ ಮೇಳದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. ಮಾರ್ವಾರಿ ತಳಿಯ ಕುದುರೆ ಹಲವು ಪ್ರಶಸ್ತಿಗಳನ್ನು ಗೆದ್ದು ಬೀಗಿದೆ. ಈಗಾಗಲೇ ಗ್ರಾಹಕರು 15 ಕೋಟಿ ವರೆಗೆ ಬೆಲೆ ನಿಗದಿ ಮಾಡಿದ್ದಾರಂತೆ. ಅದೇ ರೀತಿ ಮೇಳದಲ್ಲಿ ಪ್ರದರ್ಶನಕ್ಕಿಟ್ಟ ಬಾದಲ್ ಎಂಬ ಕುದುರೆಗೂ ಭಾರೀ ಬೇಡಿಕೆ ಇದೆ. 11 ಕೋಟಿ ಕೊಟ್ಟು ಈ ಕುದುರೆ ಖರೀದಿಸಲು ಜನ ಮುಂದೆ ಬಂದಿದ್ದಾರೆ. ಆದರೆ, ಮಾಲೀಕರು ಮಾತ್ರ ಈ ಕುದುರೆ ಮಾರಲು ನಿರಾಕರಿಸಿದ್ದಾರೆ.
ಇದನ್ನೂ ಓದಿ: Kadaba: ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ – ವ್ಯಕ್ತಿಯ ಬಂಧನ
==================
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ:https://www.youtube.com/@tulutimess











