ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಭಾರತೀಯ ರೈಲ್ವೆಯಲ್ಲಿ ಮಹತ್ವದ ಬದಲಾವಣೆಗಳು: ಟಿಕೆಟ್ ನಿಯಮ, ಪ್ರಯಾಣ ಸೌಲಭ್ಯಗಳು ಹೇಗಿರುತ್ತೆ ?

ಕರ್ನಾಟಕ : Tulu Times l ದೇಶದ ಪ್ರಯಾಣಿಕರ ಅನುಕೂಲತೆ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಉದ್ದೇಶದಿಂದ ಭಾರತೀಯ  ರೈಲ್ವೆ ಮಹತ್ವದ ಬದಲಾವಣೆಗಳನ್ನು ಘೋಷಿಸಿದೆ. 2026ರೊಳಗೆ ಹಂತ ಹಂತವಾಗಿ ಈ ನಿಯಮಗಳು ಜಾರಿಯಾಗಲಿವೆ.

ಟಿಕೆಟ್ ರದ್ದುಪಡಿಸುವ ನಿಯಮಗಳಲ್ಲಿ ಬದಲಾವಣೆ ;

ಏಪ್ರಿಲ್ 15, 2026ರಿಂದ ಹೊಸ ರದ್ದುಪಡಿಸುವ ನಿಯಮ ಜಾರಿಯಾಗಲಿದೆ. ಪ್ರಯಾಣಕ್ಕೆ 8 ಗಂಟೆಯೊಳಗೆ ಟಿಕೆಟ್ ರದ್ದುಪಡಿಸಿದರೆ ಯಾವುದೇ ಹಣ ಮರುಪಾವತಿ (ರಿಫಂಡ್) ದೊರೆಯುವುದಿಲ್ಲ. 24 ರಿಂದ 8 ಗಂಟೆಗಳೊಳಗೆ ರದ್ದುಪಡಿಸಿದರೆ 50% ಕಡಿತ, 72 ರಿಂದ 24 ಗಂಟೆಗಳೊಳಗೆ 25% ಕಡಿತ, 72 ಗಂಟೆಗಳ ಮುಂಚೆ ರದ್ದುಪಡಿಸಿದರೆ ಮಾತ್ರ ಹೆಚ್ಚು ರಿಫಂಡ್ ಸಿಗುತ್ತದೆ

ಇದುವರೆಗೆ ಕೌಂಟರ್ ಟಿಕೆಟ್‌ಗಳನ್ನು ಮೂಲ ಅಥವಾ ಗಮ್ಯಸ್ಥಾನದಲ್ಲೇ ರದ್ದುಪಡಿಸಲು ಅವಕಾಶವಿತ್ತು. ಈಗ ದೇಶದ ಯಾವುದೇ ರೈಲು ನಿಲ್ದಾಣದಿಂದ ಟಿಕೆಟ್ ರದ್ದುಪಡಿಸಲು ಅವಕಾಶ ಸಿಗಲಿದೆ. ಪ್ರಯಾಣಿಕರಿಗೆ ಹೊಸ ಸೌಲಭ್ಯವಾಗಿ, ರೈಲು ಹೊರಡುವ 30 ನಿಮಿಷಗಳ ಮೊದಲು ಕ್ಲಾಸ್ ಅಪ್‌ಗ್ರೇಡ್ ಮಾಡಲು ಅವಕಾಶ ನೀಡಲಾಗುತ್ತದೆ. ಇದು ಹಿಂದಿನ ನಿಯಮಕ್ಕಿಂತ ದೊಡ್ಡ ಬದಲಾವಣೆಯಾಗಿದೆ.

ಪ್ರಯಾಣಿಕರು ಈಗ ಡಿಜಿಟಲ್ ಮೂಲಕ ರೈಲು ಹೊರಡುವ 30 ನಿಮಿಷಗಳ ಮೊದಲು ಬೋರ್ಡಿಂಗ್ ಸ್ಟೇಷನ್ ಬದಲಾಯಿಸಬಹುದು. ಮೂಲ ಸ್ಟೇಷನ್‌ನಲ್ಲಿ ರೈಲು ಮಿಸ್ ಮಾಡಿದರೂ, ಮುಂದಿನ ಸ್ಟೇಷನ್‌ನಿಂದ ಪ್ರಯಾಣ ಮುಂದುವರಿಸಲು ಇದು ಸಹಾಯಕವಾಗುತ್ತದೆ.

ವಂದೇ ಭಾರತ್ ಎಕ್ಸ್ ಪ್ರೆಸ್ ಗೆ ಸ್ಲೀಪರ್ ಆವೃತ್ತಿಯನ್ನೂ ಪರಿಚಯಿಸಲಾಗಿದೆ. ಈಗಾಗಲೇ ಹೌರಾ–ಕಾಮಾಖ್ಯಾ ಮಾರ್ಗದಲ್ಲಿ ಎರಡು ರೈಲುಗಳು ಚಾಲನೆಗೊಂಡಿವೆ. ಈ ವರ್ಷ ಇನ್ನೂ 12 ರೈಲುಗಳನ್ನು ಪರಿಚಯಿಸಲು ಯೋಜನೆ ಇದೆ.

1000–1500 ಕಿ.ಮೀ ದೂರದ ಪ್ರಯಾಣಗಳಿಗೆ ಇದು ಸೂಕ್ತವಾಗಿದೆ. ಇದಲ್ಲದೆ, ಭಾರತೀಯ ರೈಲ್ವೆ ತನ್ನ ಬ್ರಾಡ್ ಗೇಜ್ ಜಾಲದ 99.2% ವಿದ್ಯುತೀಕರಣವನ್ನು ಪೂರ್ಣಗೊಳಿಸಿದ್ದು, ಶೀಘ್ರದಲ್ಲೇ ಸಂಪೂರ್ಣ ವಿದ್ಯುತೀಕರಣ ಸಾಧಿಸುವ ನಿರೀಕ್ಷೆಯಿದೆ. ಈ ಬದಲಾವಣೆಗಳು ಪ್ರಯಾಣಿಕರಿಗೆ ಹೆಚ್ಚಿನ ಸೌಲಭ್ಯ, ವೇಗ ಮತ್ತು ಪಾರದರ್ಶಕತೆಯನ್ನು ನೀಡಲಿವೆ. ತಂತ್ರಜ್ಞಾನ ಮತ್ತು ಆಧುನಿಕತೆಯೊಂದಿಗೆ ಭಾರತೀಯ ರೈಲ್ವೇ ತನ್ನ ಸೇವೆಯನ್ನು ಮತ್ತಷ್ಟು ಸುಧಾರಿಸುವತ್ತ ಹೆಜ್ಜೆ ಹಾಕುತ್ತಿದೆ.

Important changes in Indian Railways: What will be the ticket rules and travel facilities? – ತುಳುಟೈಮ್ಸ್

ಇದನ್ನೂ ಓದಿ :ಮಂಗಳವಾರ ಈ ರಾಶಿಯವರಿಗೆ ಮಾತ್ರ ವಿಶೇಷವಾಗಿರುತ್ತದೆ

====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ :https://youtu.be/aDo_44I0S8Y?si=PUrTa-Er8qkdKvHT

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 151

You cannot copy content of this page