ಕೊಲ್ಕತ್ತಾ : Tulu Times l ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಕೊಲ್ಕತ್ತಾ ನಗರಕ್ಕೆ ಆಗಮಿಸಿದ್ದು, ಸುಮಾರು ರೂ. 18,680 ಕೋಟಿ ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟನೆ ಮಾಡಿ ಶಿಲಾನ್ಯಾಸ ಮಾಡಿರುವುದು ವರದಿಯಾಗಿದೆ.
ಪ್ರಧಾನಿ ಮೋದಿ ಮಧ್ಯಾಹ್ನ ಸುಮಾರು 2 ಗಂಟೆಗೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನೇತಾಜಿ ಸುಭಾಷ್ ಸಂದ್ರ ಬೋಸ್ ಗೆ ಆಗಮಿಸಿದರು. ಅವರನ್ನು ಪಶ್ಚಿಮ ಬಂಗಾಳದ ರಾಜ್ಯಪಾಲ ಆರ್ ಎನ್ ರವಿ , ಪಶ್ಚಿಮ ಬಂಗಾಳದ ಹಿರಿಯ ಸಚಿವ ಫಿರ್ಹಾದ್ ಹಕೀಮ್ ಹಾಗೂ ಮುಖ್ಯ ಕಾರ್ಯದರ್ಶಿ ನಂದಿನಿ ಸ್ವಾಗತಿಸಿದರು. ಬಿಜೆಪಿ ಹಿರಿಯ ನಾಯಕರು ಕೂಡ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಅವರನ್ನು ಬರಮಾಡಿಕೊಂಡರು.
ನಂತರ ಪ್ರಧಾನಿ ಮೋದಿ ಹೆಲಿಕಾಪ್ಟರ್ ಮೂಲಕ ಬ್ರಿಗೇಡ್ ಪೆರೇಡ್ ಮೈದಾನಕ್ಕೆ ತೆರಳಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಭಾಷಣ ಮಾಡಲಿದ್ದು, ಈ ಸಭೆಯನ್ನು ಭಾರತೀಯ ಜನತಾ ಪಾರ್ಟಿ ಆಯೋಜಿಸಿದ್ದು, ರಾಜ್ಯ ವಿಧಾನಸಭಾ ಚುನಾವಣೆಗೆ ಮುನ್ನ ನಡೆಸಲಾದ ‘ಪರಿವರ್ತನ್ ಯಾತ್ರೆ’ಗೆ ಸಮಾರೋಪ ಕಾರ್ಯಕ್ರಮವಾಗಿ ನಡೆಯಲಿರುವುದು ವರದಿಯಾಗಿದೆ. ಈ ಭೇಟಿಯ ವೇಳೆ ಪ್ರಧಾನಿ ಮೋದಿ ಸುಮಾರು ₹18,680 ಕೋಟಿ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ, ಹೊಸ ಯೋಜನೆಗಳಿಗೆ ಶಿಲಾನ್ಯಾಸ ಮಾಡಲಿದ್ದಾರೆ ಎಂಬುವುದನ್ನು ಮೂಲಗಳು ತಿಳಿಸಿವೆ.
ಇದೇ ವೇಳೆ ಮೂರು ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಹಸಿರು ನಿಶಾನೆ ತೋರಿಸಿದರು. ಪ್ರಧಾನಿ ಮೋದಿ ಎರಡು ಪ್ರಮುಖ ರೈಲು ಯೋಜನೆಗಳನ್ನು ದೇಶಕ್ಕೆ ಸಮರ್ಪಿಸಿದರು. ಅವುಗಳಲ್ಲಿ ಸೌತ್ ಈಸ್ಟರ್ನ ರೈಲ್ವೆ ವ್ಯಾಪ್ತಿಯಲ್ಲಿ 16 ಕಿ.ಮೀ ಉದ್ದದ ಮೂರನೇ ರೈಲು ಮಾರ್ಗ ಹಾಗೂ ಕಲೈಕುಂಡಾ–ಕನಿಮೋಹುಲಿ ನಡುವೆ ಸ್ವಯಂಚಾಲಿತ ಬ್ಲಾಕ್ ಸಿಗ್ನಲಿಂಗ್ ವ್ಯವಸ್ಥೆ ಸೇರಿವೆ.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಭಾರತದ ರೈಲ್ವೆಯನ್ನು ಆಧುನೀಕರಿಸಲು ದೊಡ್ಡ ಮಟ್ಟದ ಮಿಷನ್ ಕೈಗೊಳ್ಳಲಾಗಿದೆ ಎಂದು ಹೇಳಿದರು. ಇದಲ್ಲದೆ ಅವರು ಎನ್ ಹೆಚ್ 19 ಮತ್ತು ಎನ್ ಹೆಚ್ 114 ರಸ್ತೆಗಳ ಕೆಲವು ಭಾಗಗಳನ್ನು ಉದ್ಘಾಟಿಸಿದರು. ಈ ಯೋಜನೆಗಳು ರಸ್ತೆ ಸುರಕ್ಷತೆ ಹೆಚ್ಚಿಸುವುದು, ಪ್ರಯಾಣ ಸಮಯ ಕಡಿಮೆ ಮಾಡುವುದು, ಸಂಚಾರ ದಟ್ಟಣೆ ಮತ್ತು ಮಾಲಿನ್ಯ ಕಡಿಮೆ ಮಾಡುವುದರ ಜೊತೆಗೆ ಪ್ರಾದೇಶಿಕ ಸಂಪರ್ಕ, ಪ್ರವಾಸೋದ್ಯಮ ಮತ್ತು ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.
Narendra Modi launches development projects worth Rs 18,680 crore in Kolkata – ತುಳುಟೈಮ್ಸ್
ಇದನ್ನೂ ಓದಿ : ಇದು ಧೋನಿಯ ಕೊನೆಯ ಸೀಸನ್ ಆಗಿರಬಹುದು : ಇರ್ಫಾನ್ ಪಠಾಣ್
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/EzryU36kszA?si=1N2g7cfF8ZC2zdhM










