ಬ್ರೇಕಿಂಗ್ ನ್ಯೂಸ್
ದೇಶ

ಭಾರತೀಯ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಎಐ ಮತ್ತು ಡಿಜಿಟಲ್ ಮೂಲಸೌಕರ್ಯದಿಂದ ಭಾರೀ ಬೆಳವಣಿಗೆ

ಎಐ : Tulu Times l ಭಾರತದಲ್ಲಿನ ಬ್ಯಾಂಕಿಂಗ್ ಕ್ಷೇತ್ರದ ಬೆಳವಣಿಗೆಯಲ್ಲಿ ಕೃತಕ ಬುದ್ಧಿಮತ್ತೆ ಹಾಗೂ ಬಲವಾದ ಡಿಜಿಟಲ್ ಮೂಲಸೌಕರ್ಯ ಪ್ರಮುಖ ಪಾತ್ರ ವಹಿಸುತ್ತಿವೆ. ಭಾರತದಲ್ಲಿನ ಬ್ಯಾಂಕುಗಳು ಸ್ಥಿರವಾದ ಸಾಲ ವೃದ್ಧಿ, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಹಾಗೂ ಎಐ ಆಧಾರಿತ ಕಾರ್ಯಪದ್ದತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಜಾಗತಿಕ ಬ್ಯಾಂಕುಗಳ ಜೊತೆ ಸ್ಪರ್ಧಾತ್ಮಕವಾಗಿ ಬೆಳೆಯುತ್ತಿವೆ.

ಎಐಗೆ ಹೆಚ್ಚಿನ ಹೂಡಿಕೆ ;
ಜಾಗತಿಕ ಬ್ಯಾಂಕಿಂಗ್ ಮತ್ತು ಕ್ಯಾಪಿಟಲ್ ಮಾರ್ಕೆಟ್ ಕ್ಷೇತ್ರದ 110 ಸಿಇಒಗಳನ್ನು ಒಳಗೊಂಡ ಸಮೀಕ್ಷೆಯ ಆಧಾರದ ಮೇಲೆ ಈ ವರದಿ ಸಿದ್ಧಪಡಿಸಲಾಗಿದೆ. ಇದರಲ್ಲಿ 83% ಸಿಇಒಗಳು ಮುಂದಿನ ಮೂರು ವರ್ಷಗಳಲ್ಲಿ ಬೆಳವಣಿಗೆಯ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 65% ಸಿಇಒಗಳು ಎಐಗೆ ಪ್ರಮುಖ ಹೂಡಿಕೆ ನೀಡಲು ಯೋಜಿಸಿದ್ದಾರೆ. ಸುಮಾರು 70% ಸಿಇಒಗಳು ಮುಂದಿನ 12 ತಿಂಗಳಲ್ಲಿ ತಮ್ಮ ಬಜೆಟ್‌ನ 10ರಿಂದ 20 ಶೇಕಡಾ ಹಣವನ್ನು ಎಐ ಯೋಜನೆಗಳಿಗೆ ಮೀಸಲಿಡುವ ಯೋಜನೆ ಹೊಂದಿದ್ದಾರೆ. ಇದಲ್ಲದೆ, 59% ಸಿಇಒಗಳು ‘ಎಜೆಂಟಿಕ್ ಎಐ’ ಸಂಸ್ಥೆಗಳ ಕಾರ್ಯವಿಧಾನವನ್ನು ದೊಡ್ಡ ಮಟ್ಟದಲ್ಲಿ ಬದಲಾಯಿಸಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಸುಮಾರು 69% ಸಿಇಒಗಳು ಎಐ ಹೂಡಿಕೆಗಳಿಂದ ಒಂದರಿಂದ ಮೂರು ವರ್ಷಗಳಲ್ಲಿ ಲಾಭ ದೊರೆಯಲಿದೆ ಎಂದು ನಿರೀಕ್ಷಿಸಿದ್ದಾರೆ.

ಉದ್ಯೋಗಿಗಳಿಗೆ ಮರುತರಬೇತಿ ಅಗತ್ಯ ;
ಎಐ ಯುಗದಲ್ಲಿ ಉದ್ಯೋಗಿಗಳ ಕೌಶಲ್ಯಾಭಿವೃದ್ಧಿಯೂ ಅತ್ಯಂತ ಪ್ರಮುಖವಾಗಿದೆ ಎಂದು ವರದಿ ತಿಳಿಸಿದೆ. 83% ಸಿಇಒಗಳು ಉದ್ಯೋಗಿಗಳಿಗೆ ಎಐ ಸಂಬಂಧಿತ ತರಬೇತಿ ನೀಡುವುದು ಪ್ರಮುಖ ಆದ್ಯತೆ ಹೇಳಲಾಗಿದೆ.

ಬ್ಯಾಂಕಿಂಗ್ ಕ್ಷೇತ್ರಕ್ಕೆ ಕೆಲವು ಸವಾಲುಗಳು ;
86% ಸಿಇಒಗಳು ಸೈಬರ್ ಸುರಕ್ಷತೆಯನ್ನು ಪ್ರಮುಖ ಅಪಾಯ ಎಂದು ಗುರುತಿಸಿದ್ದಾರೆ. 56% ಜನರು ನೈತಿಕ ಸವಾಲುಗಳ ಬಗ್ಗೆ ಚಿಂತನೆ ವ್ಯಕ್ತಪಡಿಸಿದ್ದಾರೆ. 55% ಜನರು ಡೇಟಾ ಸಿದ್ಧತೆ ಮತ್ತು ನಿಯಂತ್ರಣ ಸಂಬಂಧಿತ ಸಮಸ್ಯೆಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ, ಎಐ ಮತ್ತು ಡಿಜಿಟಲ್ ತಂತ್ರಜ್ಞಾನಗಳ ಬಳಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಬ್ಯಾಂಕಿಂಗ್ ಕ್ಷೇತ್ರ ಮುಂದಿನ ವರ್ಷಗಳಲ್ಲಿ ಇನ್ನಷ್ಟು ವೇಗವಾಗಿ ಬೆಳೆಯುವ ಸಾಧ್ಯತೆ ಇದೆ ಎಂದು ವರದಿ ಸೂಚಿಸಿದೆ.

AI and digital infrastructure drive massive growth in Indian banking sector – ತುಳು ಟೈಮ್ಸ್

ಇದನ್ನೂ ಓದಿ : ಗುಂಡ್ಯ ಸಮೀಪ ಕೆಎಸ್‌ಆರ್‌ಟಿಸಿ ರಾಜಹಂಸ ಬಸ್–ಕಾರು ಡಿಕ್ಕಿ: ಮೂವರು ಸ್ಥಳದಲ್ಲೇ ಸಾವು

====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://www.youtube.com/live/-PlvbIZDxfU?si=16u4zDqFh1_lBN_I

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 19

You cannot copy content of this page