ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಗ್ಯಾಸ್ ಸಿಗದೆ ಹೋಟೆಲ್ ಗಳಲ್ಲಿ ಸೌದೆ ಬಳಕೆ : 70 ದಿನಗಳಿಗೆ ಆಗುವಷ್ಟು ಮಾತ್ರ ಎಲ್ ಪಿಜಿ !

ಬೆಂಗಳೂರು : Tulu Times l ಗ್ಯಾಸ್ ಸಿಲಿಂಡರ್ ಗಳು ಸಿಗದ ಕಾರಣ ಹೋಟೆಲ್ ಗಳು ಬಂದ್ ಆಗುತ್ತಿವೆ. ಕಳೆದ 11 ದಿನಗಳಿಂದ ಗಲ್ಫ್ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದ ಎಫೆಕ್ಟ್ ನಿಂದಾಗಿ ನಮ್ಮ ಕರ್ನಾಟಕಕ್ಕೂ ಇದರ ಬಿಸಿ‌ ಮುಟ್ಟಿದೆ. ಇದು ಹೋಟೆಲ್ ಉದ್ಯಮಗಳಿಗೆ ದೊಡ್ಡ ಹೊಡೆತವೇ ಬಿದ್ದಿದೆ ಹಾಗೂ ಹೋಟೆಲ್ ಗಳು ಮುಚ್ಚುವ ಆತಂಕ ಹೆಚ್ಚಾಗಿದೆ.

ಗಲ್ಫ್ ನ ಈ ಸಂಘರ್ಷ ಯಾವಾಗ ಮುಗಿಯುತ್ತದೆ ಅಂತ ಗೊತ್ತಿಲ್ಲ. ಆದರೆ ದೇಶದಲ್ಲಿ 70 ದಿನಗಳಿಗೆ ಆಗುವಷ್ಟು ಮಾತ್ರ ಗ್ಯಾಸ್ ಇದೆ ಅಂತ ಕೇಂದ್ರ ಸರ್ಕಾರ ಹೇಳಿರುವುದು ಜನರ ಆತಂಕ ಹೆಚ್ಚಿದೆ. ಗ್ರಾಹಕರು ಗೃಹ ಬಳಕೆ ಸಿಲಿಂಡರ್ ಸಂಗ್ರಹಕ್ಕೆ ಮುಂದಾಗಿದ್ದು ಡಿಮ್ಯಾಂಡ್ ಹೆಚ್ಚಾಗಿದೆ. ಇನ್ನೊಂದೆಡೆ ವಾಣಿಜ್ಯ ಸಿಲಿಂಡರ್ ಬಳಕೆಯನ್ನು ಸ್ಥಗಿತ ಮಾಡಲಾಗಿದೆ. ಹೋಟೆಲ್ ಗಳು ಬಂದ್ ಆಗುವ ಭೀತಿ ಎದುರಾಗಿದೆ. ಹೋಟೆಲ್ಗಳನ್ನೇ ನಂಬಿಕೊಂಡಿರುವಂತಹ ಗ್ರಾಹಕರು ಕಂಗೆಟ್ಟಿದ್ದಾರೆ.

ಬೆಂಗಳೂರಿನಲ್ಲಿ ಮಾತ್ರವಲ್ಲ ಮೈಸೂರಿನ ಹೋಟೆಲ್ ಮಾಲೀಕರು ಕೂಡ ಗ್ಯಾಸ್ ಸಿಗದೆ ಪರದಾಡುತ್ತಿದ್ದಾರೆ. ಕೋಲಾರದಲ್ಲಿ ಗ್ಯಾಸ್ ಸಿಗದೆ ಬೀದಿ ಬದಿ ಹೋಟೆಲ್ ಗಳು ಬಂದ್ ಆಗಿರುವುದು‌ ವರದಿಯಾಗಿದೆ. ಈ ಹಿನ್ನಲೆ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಇಲಾಖೆ ಟ್ವೀಟ್ ಮಾಡಿದ್ದು, ಹೋಟೆಲ್ ಗಳಿಗೆ ಗ್ಯಾಸ್ ಬಳಕೆಗೆ ಅಡ್ಡಿ ಆಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದೆ.

ಬೆಂಗಳೂರಿನ ಸಾವಿರಾರು ಹೋಟೆಲ್‌ಗಳಿಗೆ ಪ್ರತಿದಿನ ಐದರಿಂದ ಹತ್ತು ವಾಣಿಜ್ಯ ಸಿಲಿಂಡರ್‌ಗಳು ಬೇಕಾಗುತ್ತವೆ. ಆದರೆ, ಪೂರೈಕೆ ಇಲ್ಲದಿರುವುದರಿಂದ, ಹಲವು ಹೋಟೆಲ್‌ಗಳು ಈಗಾಗಲೇ ಸಂಗ್ರಹಿಸಿದ್ದ ಸಿಲಿಂಡರ್‌ಗಳನ್ನು ಬಳಸಿಕೊಂಡಿವೆ. ಮುಂದಿನ ದಿನಗಳಲ್ಲಿ ಸಿಲಿಂಡರ್ ಲಭ್ಯವಾಗದಿದ್ದರೆ ಹೋಟೆಲ್‌ಗಳನ್ನು ಮುಚ್ಚಬೇಕಾಗಬಹುದು ಎಂದು ಹೋಟೆಲ್ ಮಾಲೀಕರು ಅಳಲು ತೋಡಿಕೊಂಡಿದ್ದಾರೆ. ಈ ಕಾರಣ ಅತಿಥಿಗಳಿಗೆ ಸೇವೆ ಒದಗಿಸಲು ಅನಿವಾರ್ಯವಾಗಿ ಸೌದೆ ಒಲೆಗಳನ್ನು ಬಳಸಲಾಗುತ್ತಿದೆ.

Hotels use firewood due to lack of gas: LPG only lasts for 70 days! – ತುಳುಟೈಮ್ಸ್

ಇದನ್ನೂ ಓದಿ : ಜ್ಯೋತಿಷ್ಯದಲ್ಲಿ ಮ್ಯಾನಿಫೆಸ್ಟ್ ಎಂದರೇನು ? ಜೀವನದಲ್ಲಿ ಬಯಸಿದ್ದು ಪಡೆಯಲು ಸಾಧ್ಯವೇ ?

====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ :https://youtu.be/65g4QkcjfLA?si=b8FPYK7KNdO0vPXk

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 150

You cannot copy content of this page