ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಮುಂದಿನ ಶೈಕ್ಷಣಿಕ ವರ್ಷದಿಂದ ಖಾಸಗಿ ಶಾಲೆಗಳ ಶುಲ್ಕ 8–12% ಹೆಚ್ಚಾಗುವ ಸಾಧ್ಯತೆ

ಬೆಂಗಳೂರು: Tulu Times l ಮುಂದಿನ ಶೈಕ್ಷಣಿಕ ವರ್ಷದಿಂದ ಬಜೆಟ್ ವರ್ಗದ ಖಾಸಗಿ ಶಾಲೆಗಳು ತಮ್ಮ ಶಾಲಾ ಶುಲ್ಕವನ್ನು 8% ರಿಂದ 12%ರವರೆಗೆ ಹೆಚ್ಚಿಸುವ ಸಾಧ್ಯತೆ ಇದೆ. ಹೆಚ್ಚುತ್ತಿರುವ ಆಡಳಿತ ವೆಚ್ಚಗಳು, ಸಿಬ್ಬಂದಿ ವೇತನ ಹೆಚ್ಚಳ ಹಾಗೂ ದಾಖಲಾತಿ ಪ್ರಮಾಣ ಕುಸಿತ ಇವುಗಳ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಶಾಲಾ ನಿರ್ವಹಣಾ ಮಂಡಳಿಗಳು ತಿಳಿಸಿವೆ.

 

ಸಾಮಾನ್ಯವಾಗಿ ಇಂತಹ ಬಜೆಟ್ ಶಾಲೆಗಳು ತಿಂಗಳಿಗೆ ₹500 ರಿಂದ ₹3,000ರವರೆಗೆ ಶುಲ್ಕ ವಸೂಲಿಸುತ್ತಿದ್ದು, ಇದುವರೆಗೆ ವರ್ಷಕ್ಕೆ ಕೇವಲ 2% ರಿಂದ 4%ರವರೆಗೆ ಮಾತ್ರ ಶುಲ್ಕ ಹೆಚ್ಚಳ ಮಾಡುತ್ತಿದ್ದರು. ಆದರೆ ಇತ್ತೀಚಿನ ಆರ್ಥಿಕ ಒತ್ತಡಗಳ ಹಿನ್ನೆಲೆಯಲ್ಲಿ ಈ ಬಾರಿ ಹೆಚ್ಚಳವನ್ನು 12%ರವರೆಗೆ ಮಾಡಲು ನಿರ್ಧರಿಸಿರುವುದಾಗಿ ತಿಳಿದುಬಂದಿದೆ.vಕರ್ನಾಟಕದಲ್ಲಿ ಸುಮಾರು 17,000ಕ್ಕೂ ಹೆಚ್ಚು ಬಜೆಟ್ ಖಾಸಗಿ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, ಅವುಗಳಲ್ಲಿ ಸುಮಾರು 4,000 ಶಾಲೆಗಳು ಬೆಂಗಳೂರಿನಲ್ಲಿವೆ. ಈ ಶಾಲೆಗಳ ವಾರ್ಷಿಕ ಶುಲ್ಕ ಸಾಮಾನ್ಯವಾಗಿ ₹25,000 ರಿಂದ ₹30,000ರವರೆಗೆ ಇರುತ್ತದೆ.

 

ಈ ಕುರಿತು ಮಾತನಾಡಿದ ಡಿ‌ ಶಶಿಕುಮಾರ್ ಅವರು, “ಶಾಲೆಗಳು ವರ್ಷಕ್ಕೆ 15%ರವರೆಗೆ ಶುಲ್ಕ ಹೆಚ್ಚಿಸಲು ಅವಕಾಶವಿದ್ದರೂ, ನಾವು ಶಾಲಾ ನಿರ್ವಹಣೆಗೆ ಹೆಚ್ಚಳವನ್ನು ಸಾಧ್ಯವಾದಷ್ಟು ಕಡಿಮೆ ಮಟ್ಟದಲ್ಲಿ ಇರಿಸಲು ಮನವಿ ಮಾಡಿದ್ದೇವೆ,” ಎಂದು ಹೇಳಿದ್ದಾರೆ. ಶಾಲಾ ನಿರ್ವಹಣೆಯವರ ಪ್ರಕಾರ, ನೀರು ಮತ್ತು ವಿದ್ಯುತ್ ದರಗಳು, ಪ್ರೊಫೆಶನಲ್ ಟ್ಯಾಕ್ಸ್, ಪ್ರಾವಿಡೆಂಟ್ ಫಂಡ್ (PF) ಹಾಗೂ ಉದ್ಯೋಗಿ ರಾಜ್ಯ ವಿಮೆ (ESI) ಕೊಡುಗೆಗಳ ವೆಚ್ಚ ಹೆಚ್ಚಳವು ಶಾಲೆಗಳ ಆರ್ಥಿಕ ಸ್ಥಿತಿಗೆ ಒತ್ತಡ ತಂದಿದೆ. ಇದರ ಜೊತೆಗೆ ಪ್ರತಿವರ್ಷ ಹೊಸ ಖಾಸಗಿ ಶಾಲೆಗಳು ಆರಂಭವಾಗುತ್ತಿರುವುದರಿಂದ ಈಗಿರುವ ಶಾಲೆಗಳ ದಾಖಲಾತಿ ಸಂಖ್ಯೆಯೂ ಕಡಿಮೆಯಾಗುತ್ತಿದೆ.

ಶಾಲಾ ಶುಲ್ಕ ಹೆಚ್ಚಳಕ್ಕೆ ಪೋಷಕರ ಸಂಘಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಸರ್ಕಾರವು ಖಾಸಗಿ ಶಾಲೆಗಳ ಶುಲ್ಕ ನಿಯಂತ್ರಣಕ್ಕಾಗಿ ಸ್ಪಷ್ಟ ನೀತಿ ಜಾರಿಗೆ ತರಬೇಕು ಎಂದು ಅವರು ಆಗ್ರಹಿಸಿದ್ದಾರೆ.

Private school fees likely to increase by 8-12% from next academic year – ತುಳುಟೈಮ್ಸ್

ಇದನ್ನೂ ಓದಿ : ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ‘ಬೆಸ್ಟ್ ಏರ್‌ಪೋರ್ಟ್’ ಪ್ರಶಸ್ತಿ

===

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ :https://www.youtube.com/live/PtIikrbFeko?si=HscYu45qZ_JNDJHu

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 151

You cannot copy content of this page