ಆರೋಗ್ಯ : Tulu Times l ನಿಧಾನವಾಗಿ ನಡೆಯುವ ಅಭ್ಯಾಸ ಹೊಂದಿರುವವರಿಗೆ ಭವಿಷ್ಯದಲ್ಲಿ ಖಿನ್ನತೆ (ಡಿಪ್ರೆಶನ್) ಉಂಟಾಗುವ ಸಾಧ್ಯತೆ ಹೆಚ್ಚು ಎಂದು 2026ರ ಒಂದು ಸಮಗ್ರ ಅಧ್ಯಯನ ಮತ್ತು ಮೆಟಾ-ವಿಶ್ಲೇಷಣೆ ತಿಳಿಸಿದೆ. ಸಂಶೋಧಕರು ಇದನ್ನು ಖಿನ್ನತೆಯ ಅಪಾಯವನ್ನು ಮುಂಚಿತವಾಗಿ ಗುರುತಿಸಲು ಬಳಸಬಹುದಾದ ನಾನ್-ಇನ್‌ವೇಸಿವ್ ಬಯೋಮಾರ್ಕರ್ (ದೇಹಕ್ಕೆ ಹಾನಿ ಮಾಡದ ಸೂಚಕ) ಎಂದು ಹೇಳಿದ್ದಾರೆ.
ಜಾಗತಿಕ ಮಟ್ಟದಲ್ಲಿ ಖಿನ್ನತೆ ಸಮಸ್ಯೆ ;
ಖಿನ್ನತೆ ಜಗತ್ತಿನ ಪ್ರಮುಖ ಆರೋಗ್ಯ ಸಮಸ್ಯೆಗಳಲ್ಲೊಂದು. WHO ಅಂದಾಜಿನ ಪ್ರಕಾರ ವಿಶ್ವದ ಸುಮಾರು 5.7% ವಯಸ್ಕರು ಖಿನ್ನತೆಯಿಂದ ಬಳಲುತ್ತಿದ್ದಾರೆ.ಮಹಿಳೆಯರು ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳಲ್ಲಿ ಇದರ ಪ್ರಮಾಣ ಹೆಚ್ಚು.
ಖಿನ್ನತೆ ಮತ್ತು ನಡೆಯುವ ಶೈಲಿ ನಡುವಿನ ಸಂಬಂಧ ;
ಖಿನ್ನತೆಯಿಂದ ಬಳಲುವವರಲ್ಲಿ ನಡೆಯುವ ವಿಧಾನದಲ್ಲೂ ಬದಲಾವಣೆ ಕಾಣುತ್ತದೆ. ಉದಾಹರಣೆಗೆ: ಹೆಜ್ಜೆಯ ಉದ್ದ ಮತ್ತು ಅಗಲ ಕಡಿಮೆಯಾಗುವುದು, ಪ್ರತಿಕ್ರಿಯೆ ಸಮಯ ನಿಧಾನವಾಗುವುದು, ತಿರುಗುವಾಗ ಹೆಚ್ಚು, ಹೆಜ್ಜೆಗಳು ಬೇಕಾಗುವುದು, ಒಟ್ಟಾರೆ ನಡೆಯುವ ವೇಗ ಕುಸಿತ, ಮೆದುಳಿನ ಚಲನ ನಿಯಂತ್ರಣ ಭಾಗಗಳಲ್ಲಿ ಬದಲಾವಣೆ ಹಾಗೂ ರಕ್ತ ಪ್ರವಾಹದ ಅಸಾಮಾನ್ಯತೆ ಕೂಡ ನಿಧಾನ ನಡೆಗೆ ಕಾರಣವಾಗಬಹುದು ಎಂದು ಸಂಶೋಧನೆ ತಿಳಿಸಿದೆ.
ಅಧ್ಯಯನದಲ್ಲಿ ಪ್ರಮುಖವಾಗಿ ಕಂಡುಬಂದ ಅಂಶಗಳು ;
10 ಅಧ್ಯಯನಗಳ ವಿಶ್ಲೇಷಣೆಯಲ್ಲಿ ನಿಧಾನವಾಗಿ ನಡೆಯುವವರಿಗೆ ಮುಂದಿನ ದಿನಗಳಲ್ಲಿ ಖಿನ್ನತೆ ಅಪಾಯ ಹೆಚ್ಚಿದೆ ಎಂದು ಕಂಡುಬಂದಿದೆ. 13,000ಕ್ಕೂ ಹೆಚ್ಚು ಜನರನ್ನು ಒಳಗೊಂಡ 6 ಅಧ್ಯಯನಗಳಲ್ಲಿ — ಸುಮಾರು 30% ಹೆಚ್ಚು ಅಪಾಯ, 90,000ಕ್ಕೂ ಹೆಚ್ಚು ಜನರನ್ನು ಒಳಗೊಂಡ ಇನ್ನಿತರ ಅಧ್ಯಯನಗಳಲ್ಲಿ — ಸುಮಾರು 20% ಹೆಚ್ಚು ಅಪಾಯ. ಈ ಎಲ್ಲಾ ಕಾರಣಗಳಿಂದ ನಡೆಯುವ ವೇಗವನ್ನು ಗಮನಿಸುವ ಮೂಲಕ ಖಿನ್ನತೆ ಅಪಾಯವನ್ನು ಮುಂಚಿತವಾಗಿ ಗುರುತಿಸಿ ತಡೆಯುವ ಕ್ರಮ ಕೈಗೊಳ್ಳಲು ಸಾಧ್ಯವಾಗಬಹುದು ಎಂದು ಸಂಶೋಧಕರು ಹೇಳಿದ್ದಾರೆ.
Are people who walk slowly at higher risk of depression?- ತುಳುಟೈಮ್ಸ್
ಇದನ್ನೂ ಓದಿ :ವಾಯುಮಾಲಿನ್ಯದಿಂದ ಸಂಕಷ್ಟ: ಶಾಸಕರ ತುರ್ತು ಸಭೆ ಕರೆದ ಸರ್ಕಾರ
===
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/KlcZ9m1ZJ5U?si=80LehZx9N3FYre93










