ಕರ್ನಾಟಕ: Tulu Times | ಪುತ್ತೂರಿನ ಹೆಮ್ಮೆಯ ಗಾಯಕಿ ಅಖಿಲಾ ಪಜಿಮಣ್ಣು ಕಳೆದ ಕೆಲವು ವರ್ಷಗಳ ಹಿಂದೆಯೇ ಡಿವೋರ್ಸ್ ಪಡೆದು ಒಬ್ಬಂಟಿಯಾಗಿಯೇ ಜೀವನ ನಡೆಸುತ್ತಿದ್ದಾರೆ.
ಮೊದಲು ಅಮೇರಿಕಾದಲ್ಲಿ ಗಂಡನ ಜೊತೆ ಇದ್ದ ಅಖಿಲಾ ಪಜಿಮಣ್ಣು ನಂತರ ಇಂಡಿಯಾಗೆ ಬಂದು ಇದೀಗ ವಿವಿಧೆಡೆ ಹಾಡುಗಳನ್ನು ಹಾಡಲು ತೆರಳುತ್ತಾ ಜೀವನ ನಡೆಸುತಿದ್ದಾರೆ. ಜೊತೆಗೆ ವಿವಿಧ ಶೋಗಳಲ್ಲಿ ನಿರೂಪಣೆಯನ್ನೂ ಕೂಡ ಮಾಡುತ್ತಾ , ಅವಕಾಶಗಳನ್ನು ಪಡೆಯುತ್ತಿದ್ದಾರೆ. ಇನ್ನು ಇವರ ಡಿವೋರ್ಸ್ ಬಳಿಕ ನಿರೂಪಣೆಗಳಲ್ಲಿ ಅವಕಾಶ ಪಡೆಯುವುದಕ್ಕಾಗಿಯೇ ಡಿವೋರ್ಸ್ ತೆಗೆದುಕೊಂಡರು ಎನ್ನುವ ಸುದ್ದಿ ಕೂಡ ಹಬ್ಬಿತ್ತು.
ಇವರು ಕನ್ನಡ ಕೋಗಿಲೆ ಸೀಸನ್ 1 ಹಾಗೂ ಸೀಸನ್ 2 ರನ್ನರ್ ಅಪ್ ಆಗಿದ್ದರು. ಅಖಿಲಾ ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಅಮೆರಿಕದಲ್ಲಿ ವಾಸವಿದ್ದ ಧನಂಜಯ್ ಶರ್ಮ ಜೊತೆಗೆ ಮದುವೆ ಆಗಿದ್ದರು. ಅನಂತರ, ಪುತ್ತೂರು ಕೋರ್ಟ್‌ನಲ್ಲಿ ಇಬ್ಬರೂ ಕೂಡ ತಮ್ಮ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಮದುವೆಯಾಗಿ ಮೂರು ವರ್ಷಕ್ಕೆ ಡಿವೋರ್ಸ್ ಪಡೆದರು ಎನ್ನುವ ಮಾಹಿತಿ ಯಾರಿಗೂ ಕೂಡ ಇವರು ತಿಳಿಸಿರಲಿಲ್ಲ.
ಇದೀಗ ಗಾಯಕಿ ಅಖಿಲಾ ಪಜಿಮಣ್ಣು ಯೂಟ್ಯೂಬ್ ಚಾನಲ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ತನ್ನ ಡಿವೋರ್ಸ್ ಕುರಿತು ಸ್ಪಷ್ಟನೆಯನ್ನು ಕೊಟ್ಟಿದ್ದಾರೆ. ನಾವು ಡಿವೋರ್ಸ್ ವಿಷ್ಯವನ್ನು ಪಬ್ಲಿಕ್ ಮಾಡೋದಕ್ಕೆ ಇಷ್ಟಪಡಲಿಲ್ಲ, ಆದರೆ ಆ ವಿಷಯ ಹೇಗೋ ಲೀಕ್ ಆಯ್ತು. ನಾನು ಕನ್ಸರ್ಟ್ ಗಳಲ್ಲಿ ಭಾಗವಹಿಸಲು ನಿರೂಪಣೆಗೆ ಗಂಡ ಬಿಡದೇ ಇರುವ ಕಾರಣ ಡಿವೋರ್ಸ್ ಪಡೆದಿರುವುದಾಗಿ ಎಲ್ಲೆಡೆ ಸುದ್ದಿ ಹಬ್ಬಿತ್ತು. ಆದರೆ, ನಿಜವಾದ ಕಾರಣ ಅದು ಅಲ್ಲ. ನಾವಿಬ್ಬರು ಒಂದೂವರೆ ವರ್ಷದಿಂದ ಅಡ್ಜಸ್ಟ್ ಮಾಡಿಕೊಂಡು ಹೊಂದಿಕೊಂಡು ಹೋಗಲು ಪ್ರಯತ್ನಿಸಿದೆವು, ಆದರೆ ಅದು ಸಾಧ್ಯ ಆಗಲಿಲ್ಲ ಎಂದರು. ಇಬ್ಬರಿಗೂ ಮಾನಸಿಕ ಶಾಂತಿ ಮುಖ್ಯ ಎಂದು ಈ ಸಂದರ್ಶನದಲ್ಲಿ ತಿಳಿಸಿದ್ದಾರೆ.
Singer Akhila Pajimannu reveals the truth about her divorce!- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess










