ಮಂಗಳೂರು: Tulu Times | ಕೊಡಿಯಾಲಬೈಲಿನ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯೊಬ್ಬನ ಬಳಿ ಕೀ ಪ್ಯಾಡ್ ಮೊಬೈಲ್ ಪತ್ತೆಯಾಗಿದೆ. ಜೈಲಿನಲ್ಲಿ ಯಾರೂ ಕೂಡ ಮೊಬೈಲ್ ಬಳಸಬಾರದು ಎಂದು ರೂಲ್ಸ್ ಇದೆ. ಆದ್ರೂ ಕೈದಿಯೊಬ್ಬ ಕದ್ದು ಮುಚ್ಚಿ ಮೊಬೈಲ್ ಬಳಸಿರೋದು ತಿಳಿದುಬಂದಿದೆ.
ಬೆಳಗ್ಗೆ 9.30ರ ವೇಳೆಗೆ ಜೈಲು ಅಧೀಕ್ಷಕ ಶರಣಬಸಪ್ಪ ಅಧಿಕಾರಿ ಮತ್ತು ಸಿಬಂದಿಯೊಂದಿಗೆ ತಪಾಸಣೆ ನಡೆಸಿದ್ದಾರೆ. ಈ ವೇಳೆ ಜೈಲಿನ ಬಿ’ ವಿಭಾಗದ 5ನೇ ಕೊಠಡಿಯಲ್ಲಿದ್ದ ಚಂದ್ರಹಾಸ ಪೂಜಾರಿ ಎಂಬಾತನ ಹಾಸಿಗೆಯ ಅಡಿ ಪರಿಶೀಲನೆ ನಡೆಸಿದಾಗ ಕೀ ಪ್ಯಾಡ್ ಮೊಬೈಲ್ ಪತ್ತೆಯಾಗಿದೆ. ಇದರ ಬಗ್ಗೆ ಹಿರಿಯ ಅಧಿಕಾರಿಗಳ ಸೂಚನೆಯ ಮೇರೆಗೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Mangalore: Key pad mobile found with jail prisoner!- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess










